ಕಿತ್ತಳೆಹಣ್ಣು,🍊 ಆರೋಗ್ಯಕ್ಕೆ ಒಳ್ಳೆಯದೇ?

ಕಿತ್ತಳೆ ಹಣ್ಣು, ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಅನೇಕ ಆರೋಗ್ಯಕರ ವಿಷಯವು ಇದೆ.

ಸ್ವಲ್ಪ ಹುಳಿ ಎನಿಸಿದರೂ ಸಿಹಿಯಾದ ಹಣ್ಣು ಕಿತ್ತಳೆ. ಹೆಸ್ಪೆರೆಡಿಯಮ್ ಎಂಬ ಸಿಟ್ರಸ್ ಹಣ್ಣುಗಳ ಗುಂಪಿಗೆ ಸೇರಿದ ಈ ಕಿತ್ತಳೆಗೆ ಅನೇಕ ಕಾಯಿಲೆಗಳನ್ನು ಹೊಡೆದೋಡಿಸುವ ಶಕ್ತಿಯಿದೆ. ಇತ್ತ ವೈದ್ಯರು ಆಯಾ ಕಾಲಕ್ಕೆ ಸಿಗುವ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು ಎನ್ನುತ್ತಾರೆ. ಮತ್ತೇಕೆ ತಡ, ಸಾಮಾನ್ಯವಾಗಿ ನವೆಂಬರ್ ನಿಂದ ಜನವರಿ, ಮಾರ್ಚ್ ವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಿತ್ತಳೆಯನ್ನು ಇಂದೇ ಮನೆಗೆ ತೆಗೆದುಕೊಂಡು ಬಂದು ಆರೋಗ್ಯದ ಲಾಭ ಪಡೆಯಿರಿ.

ಕಿತ್ತಳೆ ಹಣ್ಣಿನಲ್ಲಿರುವ. ಪೌಷ್ಟಿಕಾಂಶಗಳು

  • 1.ವಿಟಮಿನ್–C
  • 2.ಫೈಬರ್(ಆಹಾರನಾರು)
  • 3. ಕ್ಯಾಲ್ಸಿಯಂ
  • 4.ವಿಟಮಿನ್–A
  • 5. ವಿಟಮಿನ್ –B
  • 6.ಪೊಟ್ಯಾಸಿಯಂ
  • 7.ಆಂಟಿ ಆಕ್ಸಿಡೆಂಟ್

100ಗ್ರಾಂ. ಕಿತ್ತಳೆ ಹಣ್ಣಿನಲ್ಲಿ ಸಿಗುವ ಪೌಷ್ಟಿಕಾಂಶಗಳು.

  • ಕ್ಯಾಲೋರಿಸ್:~47 kcal
  • ಪೊಟಾಸಿಯಂ:~180 MG
  • ಫೈಬರ್:~2.4 G
  • ವಿಟಮಿನ್–C:~53 MG

ಕಿತ್ತಳೆ ಹಣ್ಣಿನಲ್ಲಿರುವ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ

*ಮುಖದ ಕಾಂತಿಯು ಹೆಚ್ಚಿಸುತ್ತದೆ.

  • ಹೌದು! ಕಿತ್ತಳೆಯಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.ಯಂಗ್ ಆಗಿ ಕಣ್ಣೆಳೆಯುವಂತೆ ಕಾಣುವಿರಿಚಿಕ್ಕ ವಯಸ್ಸಿಗೆ ವಯಸ್ಸಾದವರಂತೆ ಕಾಣುತ್ತಿದ್ದರೆ ಅಥವಾ ಚರ್ಮದ ಯಾವುದೇ ಸಮಸ್ಯೆಗಳಿದ್ದರೆ ಕಿತ್ತಳೆ ಸೇವಿಸಿ. ಕಿತ್ತಳೆ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದ್ದು, ನಿಮಗೆ ವಯಸ್ಸಾಗಿದ್ದರೆ ಅಥವಾ ವಯಸ್ಸಾದವರಂತೆ ಕಾಣುತ್ತಿದ್ದರೆ ಅದು ನೀವಿನ್ನು ಚಿಕ್ಕವರಂತೆ ಕಾಣುವಂತೆ ಮಾಡುತ್ತದೆ. ಜೊತೆಗೆ ಚರ್ಮದ ಹೊಳಪಿಗಾಗಿಯೂ ನೀವು ಈ ಹಣ್ಣನ್ನು ಸೇವಿಸಬಹುದು.

* ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

  • ನಾವು ವಯಸ್ಸಾದಂತೆ ನಮ್ಮ ಕಣ್ಣುಗಳು ಸಹ ಹಾನಿಗೊಳಗಾಗುತ್ತವೆ. ಆದರೆ ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಎ, ಸಿ ಮತ್ತು ಪೊಟ್ಯಾಶಿಯಂನಂತಹ ಪೋಷಕಾಂಶಗಳು ಕಣ್ಣಿನ ಆರೋಗ್ಯ ಹೆಚ್ಚಿಸುತ್ತವೆ. ಆದ್ದರಿಂದ ದೃಷ್ಟಿ ಚೆನ್ನಾಗಿರ ಬೇಕೆಂದು ಬಯಸುವವರು ಪ್ರತಿದಿನ ಕಿತ್ತಳೆ ತಿನ್ನಿರಿ.

* ಹೊಟ್ಟೆ ಹುಣ್ಣಿಗೆ, ಉತ್ತಮ ಔಷಧಿ.

ಕಿತ್ತಳೆ ಹಣ್ಣು ನಾರಿನ ಉತ್ತಮ ಮೂಲವಾಗಿದ್ದು, ಅದು ನಿಮ್ಮ ಹೊಟ್ಟೆ ಮತ್ತು ಕರುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಫೈಬರ್ ಸಮೃದ್ಧವಾಗಿರುವ ಕಿತ್ತಳೆಯು ಹೊಟ್ಟೆಯ ಹುಣ್ಣು ಮತ್ತು ಮಲಬದ್ಧತೆಯಂತಹ ಕಾಯಿಲೆಗಳಿಂದ ನಿಮಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ.

    *ಕೂದಲು ಉದುರಿಕೆಯನ್ನು ಕಡಿಮೆ ಮಾಡುತ್ತದೆ.

    ಕಿತ್ತಳೆಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿರುವುದನ್ನು ಈ ಮೊದಲೇ ಹೇಳಿದ್ದೇವೆ. ಇದು ಕಾಲಜನ್ ಉತ್ಪಾದಿಸಲು ಅಗತ್ಯವಾಗಿರುತ್ತದೆ. ಕಾಲಜನ್ ನಿಮ್ಮ ಕೂದಲಿಗೆ ಶಕ್ತಿ ಮತ್ತು ರಚನೆ ಒದಗಿಸುತ್ತದೆ ಮತ್ತು ಕೂದಲನ್ನು ಒಡೆಯದಂತೆ ತಡೆಯುತ್ತದೆ. ಈ ಪೋಷಕಾಂಶವು ನಮ್ಮ ದೇಹದಿಂದ ನೈಸರ್ಗಿಕವಾಗಿ ಉತ್ಪತ್ತಿಯಾಗುವುದಿಲ್ಲವಾದ್ದರಿಂದ ವಿಟಮಿನ್ ಸಿ ಭರಿತ ಸಿಟ್ರಸ್ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕಾಗುತ್ತದೆ.

    *ತೂಕ ನಷ್ಟಕ್ಕೂ ಸಹ ಸಹಕಾರಿ

    • ಒಂದು ಕಪ್ ಕಿತ್ತಳೆ ಕೇವಲ 85 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದರಲ್ಲಿ ಪೋಷಕಾಂಶ ಹೇರಳವಾಗಿದ್ದು, ಕಡಿಮೆ ಕ್ಯಾಲೋರಿ, 4.3 ಗ್ರಾಂ ಫೈಬರ್ ಇರುತ್ತದೆ. ಈ ಸಂಯುಕ್ತವು ನಿಯಮಿತವಾಗಿ ಕರುಳಿನ ಚಲನೆಯನ್ನು ಉತ್ತೇಜಿಸುವ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

    ಕ್ಯಾನ್ಸರ್. ಗೂ, ಉತ್ತಮ ಆಹಾರ.

    ಕ್ಯಾನ್ಸರ್ ಬಂದಿತೆಂದರೆ ರೋಗಿಗೆ ಮತ್ತು ಆರೈಕೆ ಮಾಡುವವರಿಗೆ ಇಬ್ಬರಿಗೂ ನೋವುಂಟು ಮಾಡುತ್ತದೆ. ಆದರೆ ಕಿತ್ತಳೆ ಹಣ್ಣಿನಲ್ಲಿರುವ ಡಿ – ಲಿಮೋನೆನ್ ಎಂಬ ಸಂಯುಕ್ತ ಶ್ವಾಸಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಚರ್ಮದ ಕ್ಯಾನ್ಸರ್ ಮುಂತಾದ ವಿವಿಧ ರೀತಿಯ ಕ್ಯಾನ್ಸರ್ ಗಳನ್ನು ತಡೆಯುತ್ತದೆ ಎಂದು ಸಂಶೋಧನೆ ಹೇಳಿದೆ. ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುವುದಲ್ಲದೆ, ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

    ಮೆದುಳಿನ ಬೆಳವಣಿಗೆಯಲ್ಲಿ ಸಹಕಾರಿ.

    ಕಿತ್ತಳೆ ಹಣ್ಣಿನಲ್ಲಿರುವ ಫೋಲೇಟ್ ಮತ್ತು ಫೋಲಿಕ್ ಆಮ್ಲವು ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ವಾಸ್ತವವಾಗಿ ಇದರಲ್ಲಿರುವ ಪೋಷಕಾಂಶಗಳು ಗರ್ಭಿಣಿ ಮಹಿಳೆಯರಿಗೆ ಆರೋಗ್ಯಕರ. ಏಕೆಂದರೆ ಇದು ಮಗುವಿಗೆ ನರ ವೈಜ್ಞಾನಿಕ ಕಾಯಿಲೆ ಬರದಂತೆ ತಡೆಯುತ್ತದೆ.

    • ಆದ್ದರಿಂದ ಪ್ರತಿದಿನ ಒಂದು ಕಿತ್ತಳೆ ಹಣ್ಣು ತಿನ್ನಿ, ನಿಮ್ಮ ಆರೋಗ್ಯವನ್ನು ಸಹಜವಾಗಿ ಕಾಪಾಡಿಕೊಳ್ಳಿ

    ಇದೆ ತರಹ ಆರೋಗ್ಯಕರ ಆಹಾರಗಳ ಬಗ್ಗೆ ತಿಳಿಯಲು ನಮ್ಮ foodforhealth. blog ನಲ್ಲಿ ಮಾಹಿತಿ ಪಡೆಯಿರಿ ..🙏

    Comments

    Leave a Reply

    Your email address will not be published. Required fields are marked *