
ದಾಳಿಂಬೆ (Pomegranate) ನಮ್ಮ ದೈನಂದಿನ ಜೀವನದಲ್ಲಿ ಅತ್ಯಂತ ಆರೋಗ್ಯಕರ ಹಣ್ಣುಗಳಲ್ಲಿ ಒಂದಾಗಿದೆ. ಇದನ್ನು “ರಕ್ತವರ್ಧಕ ಹಣ್ಣು” ಎಂದೂ ಕರೆಯಲಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ನಮ್ಮ ದೇಹವನ್ನು ಬಲಪಡಿಸುವುದರ ಜೊತೆಗೆ ಅನೇಕ ರೋಗಗಳಿಂದ ರಕ್ಷಿಸುತ್ತವೆ.
ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಬಗೆಯ ಹಣ್ಣುಗಳಲ್ಲಿ ದಾಳಿಂಬೆ ಹಣ್ಣಿಗೆ ರಾಜ ಮರ್ಯಾದೆ! ಇದರ ಎದ್ದು ಕಾಣುವ ನೋಟದಿಂದ ಮಾತ್ರವಲ್ಲ, ಇದು ನೀಡುವ ಆರೋಗ್ಯ ಪ್ರಯೋಜನಗಳಿಂದಲೂ ಹೆಚ್ಚು ಹೆಸರುವಾಸಿಯಾಗಿದೆ. ಬಹುತೇಕ ಎಲ್ಲಾ ಕಾಲಗಳಲ್ಲಿಯೂ ಸಿಗುವ ದಾಳಿಂಬೆ ಹಣ್ಣುಗಳನ್ನು ತಂದು ತಿಂದು ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.
ದಾಳಿಂಬೆಹಣ್ಣಿನಲ್ಲಿರುವ, ಪೌಷ್ಟಿಕಾಂಶಗಳೇನು?

- ವಿಟಮಿನ್–C
- ವಿಟಮಿನ್–K
- ಫೈಬರ್
- ಪೊಟಾಸಿಯಂ
- ಆಂಟಿ ಆಕ್ಸಿಡೆಂಟ್
ದಾಳಿಂಬೆ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಸಾಮಾನ್ಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಲೈಂಗಿಕ ಕ್ರಿಯೆಗೆ ತಾಕತ್ತು ನೀಡು ವವರೆಗೂ ಇದರ ಪಾತ್ರವನ್ನು ನಾವು ನಿರ್ಲಕ್ಷ್ಯ ಮಾಡುವಂತಿಲ್ಲ. ದಾಳಿಂಬೆ ಹಣ್ಣಿನ ಸೇವನೆಯನ್ನು ಮಕ್ಕಳ ಸಹಿತ ದೊಡ್ಡವರು ವಯಸ್ಸಾದವರು ಕೂಡ ಮಾಡ ಬಹುದು. ಮುಖ್ಯವಾಗಿ ನಮ್ಮ ಮೂಳೆಗಳು, ನಮ್ಮ ಹೃದಯ, ಮಾಂಸ ಖಂಡಗಳು ಹಾಗೂ ನಮ್ಮ ಕರುಳಿನ ಆರೋಗ್ಯಕ್ಕೆ ದಾಳಿಂಬೆ ಹಣ್ಣಿನ ಒಳ್ಳೆಯ ಪ್ರಭಾವ ಸಮರ್ಪಕವಾಗಿ ಸಿಗುತ್ತದೆ. ಆರೋಗ್ಯಕರವಾದ ರೀತಿಯಲ್ಲಿ ನೀವು ಸಹ ದಾಳಿಂಬೆ ಹಣ್ಣನ್ನು ಸೇವಿಸಿ ಈ ಕೆಳಗಿನ ಲಾಭಗಳನ್ನು ಪಡೆದುಕೊಳ್ಳಬಹುದು.
🩸ರಕ್ತದ ಒತ್ತಡ ನಿರ್ವಹಣೆಗೆ ಸಹಕಾರಿ.
ಒಂದು ವೇಳೆ ನಿಮಗೆ ರಕ್ತದ ಒತ್ತಡ ಆಗಾಗ ಹೆಚ್ಚು ಕಡಿಮೆ ಆಗುತ್ತಿದ್ದರೆ, ಅದನ್ನು ದಾಳಿಂಬೆ ಹಣ್ಣುಗಳ ಸೇವನೆಯ ಮೂಲಕ ಸುಲಭವಾಗಿ ಸರಿಪಡಿಸಿಕೊಳ್ಳಬಹುದು ನೋಡಿ. ಸಂಶೋಧಕರು ಹೇಳುವಂತೆ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ನಮ್ಮ ರಕ್ತದ ಒತ್ತಡ ಹೆಚ್ಚಾಗಿರುವುದು ನಾರ್ಮಲ್ ಗೆ ಬರುತ್ತದೆ.
ಬುದ್ಧಿಶಕ್ತಿ ಚುರುಕುಗೊಳಿಸುತ್ತದೆ.

ದಾಳಿಂಬೆ ಹಣ್ಣು ತಿನ್ನುವವರು ಬುದ್ಧಿವಂತರಾಗಿರುತ್ತಾರೆ ಎಂದು ಕೇಳಿದ್ದೇವೆ. ಅದೇ ರೀತಿ ನಾಲ್ಕು ವಾರಗಳು ನಿರಂತರವಾಗಿ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ನಮ್ಮ ಬುದ್ಧಿ ಶಕ್ತಿ ಹೆಚ್ಚಾಗುವುದರ ಜೊತೆಗೆ ಕಣ್ಣಿನ ದೃಷ್ಟಿ ಕೂಡ ವೃದ್ಧಿಸುತ್ತದೆ. ಮುಖ್ಯವಾಗಿ ನಮ್ಮ ಮಾನಸಿಕ ಆರೋಗ್ಯವನ್ನು ಸರಿಪಡಿಸುವ ಜೊತೆಗೆ ಹೃದಯದ ಸಮಸ್ಯೆ ಹಾಗೂ ಅಲ್ಜಿಮರ್ ಕಾಯಿಲೆಯನ್ನು ಗುಣಪಡಿಸುವ ಲಕ್ಷಣ ಇದರಲ್ಲಿದೆ.
ವ್ಯಾಯಮ,ಮಾಡುವವರಿಗೂ ಮತ್ತು ಆಟಗಾರರಿಗೂ ಉತ್ತಮ ಆಹಾರ.!

ದಾಳಿಂಬೆ ಹಣ್ಣಿನ ಶಕ್ತಿ ಹೇಗಿದೆ ಎಂದರೆ ವ್ಯಾಯಾಮ ಮಾಡುವವರಿಗೂ ಕೂಡ ಇದು ಬೇಕೇ ಬೇಕು. ಏಕೆಂದರೆ ದಾಳಿಂಬೆ ಹಣ್ಣಿನಲ್ಲಿ ನೈಟ್ರೇಟ್ ಇರುವುದರಿಂದ ಇದು ನಮ್ಮ ಮಾಂಸಖಂಡಗಳಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುವಂತೆ ನೋಡಿಕೊಳ್ಳುತ್ತದೆ. ವ್ಯಾಯಾಮ ಮಾಡುವುದಕ್ಕೆ 30 ನಿಮಿಷಗಳ ಮುಂಚೆ ದಾಳಿಂಬೆ ಹಣ್ಣಿನ ಜ್ಯೂಸ್ ಸೇವಿಸಿ ಆನಂತರ ವ್ಯಾಯಾಮಕ್ಕೆ ತೆರಳುವುದು ಒಳ್ಳೆಯ ಫಲಿತಾಂಶಗಳನ್ನು ಕೊಡುತ್ತದೆ.ದಾಳಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಪ್ರಮಾಣ ಹೇರಳವಾಗಿ ಕಂಡುಬರುವುದರಿಂದ ನಮ್ಮ ರಕ್ತದ ಲಿಪಿಡ್ ಪ್ರೊಫೈಲ್ ನಿರ್ವಹಣೆಯಲ್ಲಿ ಇದು ಸಾಕಷ್ಟು ಸಹಾಯಮಾಡುತ್ತದೆ. ಮುಖ್ಯವಾಗಿ ಹೃದಯದ ಅಪಧಮನಿಗಳಲ್ಲಿ ಯಾವುದೇ ತೊಂದರೆ ಆಗದಂತೆ ಉತ್ತಮ ರಕ್ತ ಸಂಚಾರ ನಿರ್ವಹಣೆ ಮಾಡುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ದಾಳಿಂಬೆ ಹಣ್ಣಿನ ಬೀಜಗಳ ಬಳಕೆಯಿಂದ ತಯಾರಿಸುವ ಎಣ್ಣೆ ಅಧಿಕ ಕೊಲೆಸ್ಟ್ರಾಲ್ ಇರುವವರಿಗೆ ರಾಮಬಾಣವಾಗಿ ಪರಿಣಮಿಸುತ್ತದೆ ಎಂದು ಹೇಳುತ್ತಾರೆ.

ದಾಳಿಂಬೆ ಹಣ್ಣನ್ನು ಸುಮಾರು ವರ್ಷಗಳಿಂದಲೂ ಜನರು ಸೇವಿಸುತ್ತಾ ಬಂದಿದ್ದಾರೆ. ಏಕೆಂದರೆ ಇದರಲ್ಲಿರುವ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್ ಅಂಶಗಳು ನಮ್ಮ ಕಿಡ್ನಿ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ದಾಳಿಂಬೆ ಹಣ್ಣಿನ ಜ್ಯೂಸ್ ಆಗಾಗ ಕುಡಿಯುವುದರಿಂದ ನಮ್ಮ ಕಿಡ್ನಿಗಳು ಸ್ವಚ್ಛವಾಗುತ್ತವೆ ಎಂದು ಹೇಳುತ್ತಾರೆ. ಜೊತೆಗೆ ನಮ್ಮ ಕರುಳಿನ ಭಾಗದಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಗಳ ಪ್ರಮಾಣ ಕೂಡ ಹೆಚ್ಚಾಗುತ್ತದೆ
ದಾಳಿಂಬೆ ಸೇವನೆಯಿಂದ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
ಇದೆ ತರಹದ ಆರೋಗ್ಯಕರ ಆಹಾರಗಳ ಬಗ್ಗೆ ತಿಳಿಯಲೂ ನಮ್ಮ https://Foodforhealth.blog ನಲ್ಲಿ ಮಾಹಿತಿ ಪಡೆಯಿರಿ.ಆರೋಗ್ಯವಾಗಿರಿ.🙏
Leave a Reply