“ಬೀನ್ಸ್”🫛. ಉಪಯೋಗಗಳು.

“ಬೀನ್ಸ್ “, ಪಲಾವ್, ವೆಜಿಟಬಲ್ ಪ್ರೈಡ್ ರೈಸ್, ಕೆಲವು ಪಲ್ಯ ಇವೆಲ್ಲ ಬೀನ್ಸ್, ಇಲ್ಲದೆ ಅಪೂರ್ಣ. ಕೆಲವರು ಈ ಬೀನ್ಸ್, ತಟ್ಟೆಯ ಪಕ್ಕದಲ್ಲಿಟ್ಟು ಉಳಿದೆಲ್ಲವನ್ನು, ತಿಂದು ಮುಗಿಸುತ್ತಾರೆ. ಆದರೆ ನಿಮಗೆ ಗೊತ್ತ. ಇ ಚಿಕ್ಕ ಬೀನ್ಸ್ ದೇಹಕ್ಕೆ ಬೇಕಾದ ಎಲ್ಲಾ ಸತ್ವಗಳನ್ನು, ಹೊಂದಿದೆ.

ಬೀನ್ಸ್ ನಲ್ಲಿರುವ. ಅಗತ್ಯ ಪೋಷಕಾಂಶಗಳು.🫛

ಬೀನ್ಸ್ ಚಿಕ್ಕದಾಗಿ ಕಂಡರೂ ಹಲವು ಆರೋಗ್ಯ ಲಾಭಗಳನ್ನು ನೀಡುತ್ತದೆ.
  • ಪ್ರೋಟೀನ್(protine)
  • ಫೈಬರ್(fiber)
  • ಐರನ್(iron)
  • ಕ್ಯಾಲ್ಸಿಯಂ(calsium)
  • ವಿಟಮಿನ್–A
  • ವಿಟಮಿನ್–C & ವಿಟಮಿನ್–K
  • ಕಬ್ಬಿಣಾಂಶ.

“ಬೀನ್ಸ್”,ಸೇವನೆಯಿಂದ ಆಗುವ ಆರೋಗ್ಯ ಲಾಭಗಳು.

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ:–ಬೀನ್ಸ್, ನಲ್ಲಿರುವ ಪೊಟಾಸಿಯಂ. ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯಗಳನ್ನು ತಪ್ಪಿಸುತ್ತದೆ. ಹೀಗೆ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಬೀನ್ಸ್, ಸಹಕಾರಿ.

ಜೀರ್ಣಕ್ರಿಯೆಗೆ ಸಹಕಾರಿ:–ಹೆಚ್ಚಿನ ನಾರಿನಂಶ (fiber) ಇರುವುದರಿಂದ. ಕರುಳಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಮತ್ತು ಮಲಬದ್ಧತೆಯನ್ನು ನಿಯಂತ್ರಿಸುತ್ತದೆ. ಇಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ತೂಕ ಇಳಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ:–ತೂಕ ಇಳಿಕೆಗೆ ಶ್ರಮ ಪಡುವವರು ಅವರ ಆಹಾರ ಸೇವನೆಯಲ್ಲಿ ಬೀನ್ಸ್ ಸೇರಿಸುವುದು ಉತ್ತಮ. ಬೀನ್ಸ್ ನಲ್ಲಿ ಇರುವ ಕಡಿಮೆ ಕ್ಯಾಲೋರಿಗಳು. ಹೆಚ್ಚಿನ ಫೈಬರ್ ಹೊಂದಿರುವುದರಿಂದ ಧೀರ್ಘಕಾಲದ ವರೆಗೆ ಹೊಟ್ಟೆ ತುಂಬಿದಂತಿರುತ್ತದೆ.ಈಗಾಗಿ ತೂಕ ಇಳಿಸಲು ಸಹಾಯ ಮಾಡುತ್ತದೆ.

ಮಧುಮೇಹ (sugar), ನಿಯಂತ್ರಿಸುತ್ತದೆ:– ಮಧುಮೇಹ ನಿರ್ವಹಣೆ ಬೀನ್ಸ್ ಉತ್ತಮ ಆಹಾರ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇಗೆ ಮಧುಮೇಹಿಗಳಿಗೆ. ಉತ್ತಮ ಆಹಾರವಾಗಿ ಕಾರ್ಯ ನಿರ್ವಹಿಸುತ್ತದೆ.

ಮೂಳೆಗಳಿಗೆ ಬಲ ನೀಡುತ್ತದೆ:–ಮೂಳೆಗಳ ಬಲವರ್ಧನೆಯಲ್ಲಿ, ಬೀನ್ಸ್ ಉತ್ತಮ ಆಹಾರ ಇದರಲ್ಲಿನ ವಿಟಮಿನ್ –C & ಕ್ಯಾಲ್ಸಿಯಂ (calsium) ಅಂಶವು ಮೂಳೆಗಳಿಗೆ ಬಲವನ್ನು ನೀಡಿ. ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:–ಬೀನ್ಸ್ನಲ್ಲಿನ, ವಿಟಮಿನ್ –C ಅಂಶವು ದೇಹದ ರೋಗನಿರೋಧಕ ಶಕ್ತಿಯನ್ನು. ಹೆಚ್ಚಿಸಲು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಬೀನ್ಸ್, ತಿನ್ನುವುದರ ಮೊದಲು ಸರಿಯಾಗಿ ಬೇಯಿಸುವುದು ಅಥವಾ (ಅಡುಗೆ ಮಾಡುವುದು ಉತ್ತಮ. ಅಥವಾ ಹಾಗೆಯೇ 🥗 ಸಲಾಡ್ ಮುಖಾಂತರ ಸೇವಿಸಿ.

Comments

Leave a Reply

Your email address will not be published. Required fields are marked *