
ಬಾಳೆಹಣ್ಣು ನಮ್ಮ ದೈನಂದಿನ ಜೀವನದಲ್ಲಿ ಸುಲಭವಾಗಿ ದೊರೆಯುವ ಮತ್ತು ಅತ್ಯಂತ ಪೌಷ್ಟಿಕಾಂಶಗಳಿಂದ ಕೂಡಿದ ಹಣ್ಣು. ಇದು ಕಡಿಮೆ ಬೆಲೆಗೆ ಸಿಗುವುದರಿಂದ ಎಲ್ಲ ವರ್ಗದ ಜನರು ಇದನ್ನು ಬಳಸುತ್ತಾರೆ. ಬಾಳೆಹಣ್ಣು ತಿನ್ನುವುದು ನಮ್ಮ ಆರೋಗ್ಯಕ್ಕೆ ಬಹಳ ಲಾಭಕರ.
ಬಾಳೆಹಣ್ಣು ನಮ್ಮ ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾದ ಹಣ್ಣು. ದಿನನಿತ್ಯದ ಆಹಾರದಲ್ಲಿ ಬಾಳೆಹಣ್ಣನ್ನು ಸೇರಿಸಿಕೊಂಡರೆ ದೇಹಕ್ಕೆ ಬೇಕಾದ ಶಕ್ತಿ ಮತ್ತು ಪೋಷಕಾಂಶಗಳು ಸಿಗುತ್ತವೆ. ಆದ್ದರಿಂದ ಪ್ರತಿದಿನ ಒಂದು ಬಾಳೆಹಣ್ಣು ತಿನ್ನುವುದು ಆರೋಗ್ಯಕರ ಅಭ್ಯಾಸ.
ಬಾಳೆಹಣ್ಣಿನಲ್ಲಿರುವ, ಮುಖ್ಯ ಪೋಷಕಾಂಶಗಳು:
- ವಿಟಮಿನ್ –B6
- ವಿಟಮಿನ್–C
- ಕಾರ್ಬೋಹೈಡ್ರೇಟ್ಸ್
- ಪೊಟ್ಯಾಸಿಯಂ
- ಮೆಗ್ನೀಷಿಯಂ
- ಫೈಬರ್
ಈ ಪೋಷಕಾಂಶಗಳು ನಮ್ಮ ದೇಹಕ್ಕೆ ಶಕ್ತಿ ನೀಡುತ್ತವೆ ಮತ್ತು ಆರೋಗ್ಯವನ್ನು ಕಾಪಾಡುತ್ತವೆ.
*ಬಾಳೆಹಣ್ಣಿನ ,ಆರೋಗ್ಯಕರ ಲಾಭಗಳು 💪
ವಿಶ್ವದ ಹೆಚ್ಚಿನ ಎಲ್ಲಾ ಭಾಗಗಳಲ್ಲಿ ಲಭ್ಯವಿರುವ ಹಾಗೂ ಬೆಳೆಯಲ್ಪಡುವಂತಹ ಬಾಳೆಹಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಬಾಳೆಹಣ್ಣು ದೇಹಕ್ಕೆ ಶಕ್ತಿ ನೀಡುವುದು. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಕೂಡ ಸೇರಿಕೊಂಡಿದೆ. ಪೋಷಕಾಂಶಗಳ ವಿಚಾರಕ್ಕೆ ಹೋಲಿಸಿದರೆ, ಆಗ ಬಾಳೆಹಣ್ಣಿನಲ್ಲಿ ಸೇಬಿಗಿಂತಲೂ ಹೆಚ್ಚಿನ ಪೋಷಕಾಂಶಗಳು ಇವೆ. ಇದರಲ್ಲಿ ವಿಟಮಿನ್ ಎ, ಪೋಸ್ಪರಸ್, ಕಾರ್ಬೋಹೈಡ್ರೇಟ್ಸ್ ಮತ್ತು ಕಬ್ಬಿನಾಂಶವು ಸೇಬಿಗಿಂತಲೂ ಹೆಚ್ಚಾಗಿದೆ. ಬಾಳೆಹಣ್ಣಿನಲ್ಲಿ ಹಲವಾರು ಪೋಷಕಾಂಶಗಳು ಇರುವ ಕಾರಣದಿಂದಾಗಿ ಇದನ್ನು ಒಂದು ಅದ್ಭುತ ಆಹಾರ ಎಂದು ಪರಿಗಣಿಸಲಾಗಿದೆ.
ತೂಕ ಹೆಚ್ಚಿಸುತ್ತದೆ ಬಾಳೆಹಣ್ಣು!
- ಬಾಳೆಹಣ್ಣು ತೂಕ ಇಳಿಸಲು ಮತ್ತು ಬೊಜ್ಜು ನಿವಾರಣೆ ಮಾಡಲು ನೆರವಾಗುವುದು. ಬಾಳೆಹಣ್ಣು 100ಗ್ರಾಂ ನಲ್ಲಿ ಸುಮಾರು 90 ಕೆ ಕ್ಯಾಲರಿ ನೀಡುವುದು ಮತ್ತು ಇದರಿಂದ ಹೊಟ್ಟೆ ತುಂಬಿದಂತೆ ಮಾಡುವುದು. ಇದರಲ್ಲಿರುವ ನಾರಿನಾಂಶವು ನೈಸರ್ಗಿಕವಾಗಿ ಹೀರಿಕೊಳ್ಳುವಂತದ್ದಾಗಿದೆ ಮತ್ತು ಜೀರ್ಣಕ್ರಿಯೆಗೆ ವೇಗ ನೀಡುವುದು ಮತ್ತು ಹೊಟ್ಟೆ ತುಂಬಿದಂತೆ ಮಾಡುವುದು. ಇದರಿಂದ ಹೆಚ್ಚಿನ ತೂಕ ಇಳಿಸಲು ನೆರವಾಗುವುದು. ಇನ್ನೊಂದು ಕಡೆಯಲ್ಲಿ ಬಾಳೆಹಣ್ಣು ತೂಕ ಹೆಚ್ಚಿಸಿಕೊಳ್ಳಲು ಕೂಡ ನೆರವಾಗುವುದು. ಬಾಳೆಹಣ್ಣಿನಲ್ಲಿ ಸಕ್ಕರೆ ಅಂಶವಾಗಿರುವಂತಹ ಫ್ರಾಕ್ಟೋಸ್ ಮತ್ತು ಸುಕ್ರೋಸ್ ಇದೆ ಮತ್ತು ಇದು ತಕ್ಷಣವೇ ಶಕ್ತಿ ನೀಡುವುದು. ಬಾಳೆಹಣ್ಣನ್ನು ಹಾಲಿನ ಜತೆಗೆ ಸೇರಿಸಿ ಕುಡಿದರೆ ಆಗ ಅದು ತೂಕ ಹೆಚ್ಚಿಸಲು ಸಹಕಾರಿ. ಯಾಕೆಂದರೆ ಹಾಲಿನಲ್ಲಿ ಪ್ರೋಟೀನ್ ಇದೆ ಮತ್ತು ಬಾಳೆಹಣ್ಣಿನಲ್ಲಿ ಸಕ್ಕರೆ ಇದೆ.
*ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ.
ಬಾಳೆಹಣ್ಣಿನಲ್ಲಿ ಸೆರೊಟಿನ್ ಎನ್ನುವ ಅಂಶವಿರುವ ಕಾರಣದಿಂದಾಗಿ ಇದು ಮನಸ್ಥಿತಿ ಸುಧಾರಣೆ ಮಾಡುವುದು. ದೇಹದಲ್ಲಿ ಗ್ಲೂಕೋಸ್ ಮಟ್ಟವು ಬದಲಾವಣೆ ಆಗುವುದು ಮನಸ್ಥಿತಿ ಬದಲಾಗಲು ಪ್ರಮುಖ ಕಾರಣವಾಗಿದೆ. ವಿಟಮಿನ್ ಬಿ6 ನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವಂತಹ ಬಾಳೆಹಣ್ಣು ಮನಸ್ಥಿತಿಗೆ ಶಮನ ನೀಡುವುದು. ಬಾಳೆಹಣ್ಣು ಖಿನ್ನತೆ ವಿರುದ್ಧ ಹೋರಾಡುವುದು ಮತ್ತು ಸೆರೊಟಿನ್ ಮತ್ತು ಡೊಪಮೈನ್ ಎನ್ನುವ ರಾಸಾಯನಿಕಗಳು ಮನಸ್ಥಿತಿ ಸುಧಾರಣೆ ಮಾಡುವುದು. ಬಾಳೆಹಣ್ಣಿನಲ್ಲಿ ಇರುವ ಕೆಲವೊಂದು ಅಂಶಗಳು ನರಗಳನ್ನು ಉತ್ತೇಜಿಸುವುದು. ಇದು ಕೂಡ ಮನಸ್ಥಿತಿ ಸುಧಾರಣೆಗೆ
ಒಳ್ಳೆಯದು. ಇದು ನೈಸರ್ಗಿಕವಾಗಿ ಮನಸ್ಥಿತಿ ಸುಧಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.
*ಜೀರ್ಣಕ್ರಿಯೆಗೂ ಸಹಕಾರಿ.
- ಬಾಳೆಹಣ್ಣಿನಲ್ಲಿ ಹೀರಿಕೊಳ್ಳುವ ನಾರಿನಾಂಶವಾಗಿರುವಂತಹ ಪೆಕ್ಟಿನ್ ನ್ನು ಹೈಡ್ರೊಕೊಲಾಯ್ಡ್ ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ಇದು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಬಾಳೆಹಣ್ಣಿನಲ್ಲಿ ಇರುವಂತಹ ನಾರಿನಾಂಶವು ಕರುಳಿನ ಕ್ರಿಯೆಯನ್ನು ತುಂಬಾ ಸಾರಗವಾಗಿಸುವುದು. ವಿರೇಚಕಗಳನ್ನು ಬಳಸುವ ಬದಲು ಬಾಳೆಹಣ್ಣನ್ನು ಬಳಸಿಕೊಂಡರೆ ಮಲಬದ್ಧತೆ ನಿವಾರಣೆ ಮಾಡಬಹುದು. ಅತಿಸಾರ ವೇಳೆಯು ಬಾಳೆಹಣ್ಣು ನೆರವಾಗುವುದು. ಇದು ವಿದ್ಯುದ್ವಿಚ್ಛೇದಗಳನ್ನು ಮರಳಿ ಸ್ಥಾಪಿಸುವುದು ಮತ್ತು ಮಲ ಬಿಗಿಯಾಗುವಂತೆ ಮಾಡುವುದು. ಬಾಳೆಹಣ್ಣಿನಲ್ಲಿ ಇರುವಂತಹ ಉನ್ನತ ಮಟ್ಟದ ನಾರಿನಾಂಶವು ಕರುಳಿನ ಕ್ರಿಯೆಗಳು ಸರಾಗವಾಗಿ ಆಗುವಂತೆ ಮಾಡುವುದು.
ತಕ್ಷಣ ಶಕ್ತಿ (instant, energy.) ನೀಡುತ್ತದೆ.

- ಹಲವಾರು ರೀತಿಯ ಪೋಷಕಾಂಶಗಳು ಹಾಗೂ ಶಕ್ತಿಯ ಒಳ್ಳೆಯ ಮೂಲವಾಗಿರುವಂತಹ ಬಾಳೆಹಣ್ಣು ದೇಹಕ್ಕೆ ತಕ್ಷಣವೇ ಶಕ್ತಿ ನೀಡುವುದು. ಇದು ಮನಸ್ಥಿತಿ ಬದಲಾವಣೆ ಮಾಡುವ ಜತೆಗೆ ದೇಹವು ಪುನರ್ಶ್ಚೇತನಗೊಳ್ಳಲು ಇದು ನೆರವಾಗುವುದು. ನಿಮಗೆ ತುಂಬಾ ಅಲಸ್ಯ ಅಥವಾ ಶಕ್ತಿ ಕುಂದಿದ್ದರೆ ಆಗ ನೀವು ಟೀ ಅಥವಾ ಕಾಫಿ ಸೇವನೆ ಮಾಡುವ ಬದಲು ಒಂದು ಬಾಳೆಹಣ್ಣು ತಿನ್ನಿ. ಇದರಲ್ಲಿ ಇರುವಂತಹ ಪೋಷಕಾಂಶಗಳು ಎಲ್ಲಾ ವಯಸ್ಸಿನವರಿಗೆ ನೆರವಾಗುವುದು. ಹಾಗಾಗಿ ವ್ಯಾಯಾಮ, ಮಾಡುವ ಮೊದಲು ಬಾಳೆಹಣ್ಣನ್ನು , ತಿನ್ನುತ್ತಾರೆ.
ಬಾಳೆಹಣ್ಣು ಹಣ್ಣಾದ ವೇಳೆ ಅದರಲ್ಲಿ ಗ್ಲೂಕೋಸ್, ಫ್ರುಕ್ಟೋಸ್, ಸುಕ್ರೋಸ್ ಮತ್ತು ನಾರಿನಾಂಶವು ಹೆಚ್ಚಾಗಿರುವುದು ಮತ್ತು ಇದು ಶಕ್ತಿ ನೀಡುವುದು. ಬಾಳೆಹಣ್ಣಿನಲ್ಲಿ ಉತ್ತಮ ಮಟ್ಟದ ಕಾರ್ಬೋಹೈಡ್ರೇಟ್ಸ್ ಗಳಿದ್ದು, ದೇಹದ ಶಕ್ತಿ ಹೆಚ್ಚಿಸುವುದು. ನೀವು ಜಿಮ್ ಗೆ ಅಥವಾ ಜಾಗಿಂಗ್‌ಗೆ ಹೋಗುತ್ತಲಿದ್ದರೆ ಆಗ ನೀವು ವ್ಯಾಯಾಮಕ್ಕೆ ಮೊದಲು ಬಾಳೆಹಣ್ಣು ತಿನ್ನಿ. ಇದು ವ್ಯಾಯಾಮ ಮಾಡಲು ಶಕ್ತಿ ಒದಗಿಸುವುದು. ಇದು ಶಕ್ತಿ ಆಗರವಾಗಿರುವ ಕಾರಣದಿಂದಾಗಿ ಮಕ್ಕಳಿಗೆ ಉಪಾಹಾರದಲ್ಲಿ ಇದನ್ನು ನೀಡಬಹುದು.
ನೆನಪಿನ ಶಕ್ತಿ , ಹೆಚ್ಚಿಸುತ್ತದೆ,ಬಾಳೆಹಣ್ಣು.
- ಬಾಳೆಹಣ್ಣಿನಲ್ಲಿ ಹೆಚ್ಚಿನ ಪೋಷಕಾಂಶಗಳು ತುಂಬಿವೆ ಮತ್ತು ಇದು ಮೆದುಳಿನ ಶಕ್ತಿ ವೃದ್ಧಿಸಲು ತುಂಬಾ ಲಾಭಕಾರಿ. ಉಪಾಹಾರ, ಊಟ ಮತ್ತು ರಾತ್ರಿ ಊಟದ ವೇಳೆ ಬಾಳೆಹಣ್ಣು ತಿಂದ ಮಕ್ಕಳಲ್ಲಿ ಮೆದುಳಿನ ಶಕ್ತಿ ಹೆಚ್ಚಾಗಿದೆ ಎಂದು ಕೆಲವೊಂದುಅಧ್ಯಯನಗಳು ಕಂಡುಕೊಂಡಿವೆ. ಬಾಳೆಹಣ್ಣಿನಲ್ಲಿ ಇರುವಂತಹ ಪೊಟಾಶಿಯಂ ಅಂಶವು ಇದಕ್ಕೆ ಕಾರಣವೆಂದು ಹೇಳಲಾಗಿದೆ. ಬಾಳೆಹಣ್ಣಿನಲ್ಲಿ ಇರುವ ಪೊಟಾಶಿಯಂ ಅಂಶವು ಹೃದಯ ಬಡಿತ ಸಾಮಾನ್ಯಗೊಳಿಸುವುದು ಮತ್ತು ಮೆದುಳಿಗೆ ಸರಿಯಾಗಿ ಆಮ್ಲಜನಕ ಸರಬರಾಜು ಆಗುವಂತೆ ಮಾಡುವುದು. ಇದರಿಂದಾಗಿ ಇದು ಒಂದು ಅದ್ಭುತವಾದ ಮೆದುಳಿನ ಆಹಾರವಾಗಿದೆ ಮತ್ತು ಕಲಿಯುವ ಸಾಮರ್ಥ್ಯವನ್ನು , ವೃದ್ಧಿಸುತ್ತದೆ.
* ರಕ್ತಹೀನತೆಗೂ, ಸಹಕಾರಿ .
ರಕ್ತಹೀನತೆ ಸಮಸ್ಯೆ ಇರುವಂತಹ ರೋಗಿಗಳು ಬಾಳೆಹಣ್ಣು ತಿನ್ನಬಹುದು. ಬಾಳೆಹಣ್ಣಿನಲ್ಲಿ ಉನ್ನತ ಮಟ್ಟದ ಕಬ್ಬಿನಾಂಶವಿದೆ ಮತ್ತು ಇದು ಹಿಮೋಗ್ಲೋಬಿನ್ ತೀವ್ರತೆ ಹೆಚ್ಚಿಸುವುದು. ಇದರಿಂದ ಬಾಳೆಹಣ್ಣು ರಕ್ತಹೀನತೆಯಿಂದ ಬಳಲುವವರಿಗೆ ಒಳ್ಳೆಯದು. ಹಿಮೊಗ್ಲೋಬಿನ್ ಸಾಂದ್ರತೆಯು ಹೆಚ್ಚಾದಂತೆ ರಕ್ತಹೀನತೆಯು ಕಡಿಮೆ ಆಗುವುದು. ಬಾಳೆಹಣ್ಣಿನಲ್ಲಿ ವಿಟಮಿನ್ ಬಿ6 ಹೆಚ್ಚಾಗಿದ್ದು, ಇದು ರಕ್ತಹೀನತೆಗೆ ತುಂಬಾ ಒಳ್ಳೆಯ ಆಹಾರ.
* ಕಣ್ಣನ್ನು,(eye) 👁️ ಆರೋಗ್ಯವಾಗಿಡುತ್ತದೆ.
- ವಯಸ್ಸಾಗುತ್ತಾ ಸಾಗಿದಂತೆ ಅಕ್ಷಿಪಟಲದ ಅವನತಿ ಆರಂಭವಾಗುವುದು. ಇದಕ್ಕಾಗಿ ಹೆಚ್ಚಿನ ಹಣ್ಣುಗಳು ಹಾಗೂ ತರಕಾರಿ ಸೇವಿಸಬೇಕು. ಅದರಲ್ಲೂ ಮುಖ್ಯವಾಗಿ ಬಾಳೆಹಣ್ಣು ಸೇವಿಸಬೇಕು. ಬಾಳೆಹಣ್ಣಿನಲ್ಲಿ ವಿಟಮಿನ್ ಎ ಅಧಿಕವಾಗಿದೆ ಮತ್ತು ಇದು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಇರುವಂತಹ ಬೆಟಾ ಕ್ಯಾರೋಟಿನ್ ಮತ್ತು ಅಲ್ಪಾ ಕ್ಯಾರೋಟಿನ್ ಅಂಶವು ಕಣ್ಣಿನ ದೃಷ್ಟಿ ಮಂದವಾಗದಂತೆ ತಡೆಯುವುದು. ಬಾಳೆಹಣ್ಣನ್ನು ಹೆಚ್ಚು ಸೇವನೆ ಮಾಡಿದರೆ ಆಗ ವಯಸ್ಸಾಗುವಸಂದರ್ಭದಲ್ಲಿ ಕಂಡುಬರುವಂತಹ ದೃಷ್ಟಿ ದೋಷ ನಿವಾರಣೆ ಮಾಡಬಹುದು ಎಂದು ಅಧ್ಯಯನಗಳು ಹೇಳಿವೆ.
* ಹೃದಯಾಘಾತದಿಂದ, ರಕ್ಷಿಸುತ್ತದೆ.
ಬಾಳೆಹಣ್ಣಿನಲ್ಲಿ ಇರುವ ಉನ್ನತ ಮಟ್ಟದ ಪೊಟಾಶಿಯಂ ಅಂಶವು ಹೃದಯದ ಬಡಿತವನ್ನು ನಿಯಂತ್ರಿಸುವುದು. ಒತ್ತಡ ಮತ್ತು ಆತಂಕ ಉಂಟಾದ ವೇಳೆ ಬಾಳೆಹಣ್ಣು ತಿನ್ನಬೇಕು. ಯಾಕೆಂದರೆ ಒತ್ತಡ ಹಾಗೂ ಆತಂಕದಿಂದಾಗಿ ದೇಹದಲ್ಲಿ ಪೊಟಾಶಿಯಂ ಮಟ್ಟವು ತಗ್ಗುವುದು. ದೇಹಕ್ಕೆ ಪ್ರತಿನಿತ್ಯವು 4 ಗ್ರಾಂನಷ್ಟು ಪೊಟಾಶಿಯಂನ ಅಗತ್ಯವಿದೆ ಮತ್ತು ಇದನ್ನು ಬಾಳೆಹಣ್ಣು ಸೇವನೆ ಮೂಲಕ ಪೂರೈಸ ಬಹುದು. ಬಾಳೆಹಣ್ಣಿನಲ್ಲಿ ಇರುವಂತಹ ಪೊಟಾಶಿಯಂ ಮತ್ತು ನಾರಿನಾಂಶದಿಂದಾಗಿ ಇದು ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿ ಇಡುವುದು ಮತ್ತು ಅಪಧಮನಿಯನ್ನು ರಕ್ಷಿಸುವುದು. ನೈಸರ್ಗಿಕವಾಗಿ ಇದು ಆಮ್ಲ ವಿರೋಧಿ ಆಗಿರುವ ಕಾರಣದಿಂದಾಗಿ ಇದು ಎದೆಯುರಿ ಸಮಸ್ಯೆಯಿಂದ ಪರಿಹಾರ ನೀಡುವುದು. ಉಪಾಹಾರಕ್ಕೆ ನೀವು ಒಂದು ಬಾಳೆಹಣ್ಣು ತಿಂದರೆ ಆಗ ಹೃದಯದ ಕಾರ್ಯವನ್ನು ಸಾಮಾನ್ಯವಾಗಿ ಇಟ್ಟುಕೊಳ್ಳಬಹುದು.
* ಕ್ಯಾನ್ಸರನ್ನು, ಗುಣಪಡಿಸುವ ಗುಣವನ್ನು ಹೊಂದಿದೆ.
- ಬಾಳೆಹಣ್ಣು ತಿನ್ನುವುದುದರಿಂದ ಮೂತ್ರಪಿಂಡದ ಕಾರ್ಯವು ಸರಾಗವಾಗಿ ಆಗುವುದು ಮತ್ತು ಇದು ಕಿಡ್ನಿ ಕ್ಯಾನ್ಸರ್ ನ್ನು ತಡೆಯುವುದು ಎಂದು ಅಧ್ಯಯನಗಳು ಕೂಡ ಹೇಳಿವೆ. ನಿಯಮಿತವಾಗಿ ಬಾಳೆಹಣ್ಣು, ಹಣ್ಣುಗಳು ಮತ್ತು ತರಕಾರಿ ಸೇವನೆ ಮಾಡಿದರೆ ಅದರಿಂದ ಕ್ಯಾನ್ಸರ್ ಅಪಾಯ ಕಡಿಮೆ ಆಗುವುದು. ಪೊಟಾಶಿಯಂ ಅಧಿಕವಾಗಿರುವ ಕಾರಣದಿಂದಾಗಿ ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸುವುದು. ಆಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವ ಬಾಳೆಹಣ್ಣು ಕ್ಯಾನ್ಸರ್ ಬರದಂತೆ ತಡೆಯುವುದು. ಅದರಲ್ಲೂ ಹೊಟ್ಟೆಯ ಕ್ಯಾನ್ಸರ್ ಗೆ ಇದು ಪರಿಣಾಮಕಾರಿ.
100ಗ್ರಾಂ ಬಾಳೆಹಣ್ಣಿನಲ್ಲಿ, ಸಿಗುವ ಪೋಷಕಾಂಶಗಳು.
- ಬಾಳೆಹಣ್ಣು ತುಂಬಾ ಪೋಷಕಾಂಶಗಳಿರುವ ಹಾಗೂ ರುಚಿಕರ ಹಣ್ಣು. ನೂರು ಗ್ರಾಂ ಬಾಳೆಹಣ್ಣು ಸೇವಿಸಿದರೆ ಆಗ ಅದರಿಂದ ನಮ್ಮ ದೇಹಕ್ಕೆ 116 ಕೆಸಿಎಎಲ್ ಕ್ಯಾಲ್ಸಿಯಂ, 1.2 ಗ್ರಾಂ ಪ್ರೋಟೀನ್, 0.3 ಗ್ರಾಂ ಕೊಬ್ಬು, 27.2 ಗ್ರಾಂ ಕಾರ್ಬೋಹೈಡ್ರೇಟ್ಸ್, 17 ಮಿ.ಗ್ರಾಂ. ಕ್ಯಾಲ್ಸಿಯಂ, 36 ಮಿ.ಗ್ರಾಂ.ಪೋಸ್ಪರಸ್, 0.36 ಮಿ.ಗ್ರಾಂ ಕಬ್ಬಿನಾಂಶ, 41 ಮಿ.ಗ್ರಾಂ ಮೆಗ್ನಿಶಿಯಂ, 36.6 ಮಿ.ಗ್ರಾಂ.ಸೋಡಿಯಂ, 88 ಮಿ.ಗ್ರಾಂ ಪೊಟಾಶಿಯಂ, 0.15 ಮಿ.ಗ್ರಾಂ ಸತು. ವಿಟಮಿನ್ ಸಿ 7 ಮಿ.ಗ್ರಾಂ, 0.8 ಮಿ.ಗ್ರಾಂ. ವಿಟಮಿನ್ ಬಿ6, ಕ್ಯಾರೊಟೆನೆ 78 ಎಂಸಿಜಿ, ಥೈಮೇನ್ 0.05 ಮಿ.ಗ್ರಾಂ ಮತ್ತು ನಿಯಾಸಿನ್ 0.5 ಮಿ.ಗ್ರಾಂ. ಇದೆ.
ವರ್ಷವಿಡೀ ಲಭ್ಯವಾಗುವಂತಹ ಹಣ್ಣು ಎಂದರೆ ಅದು ಬಾಳೆಹಣ್ಣು, ಹಾಗಾಗಿ ಇದರ ಸಂಪೂರ್ಣ ಲಾಭ ಪಡೆಯಲು ದಿನಕ್ಕೊಂದು ಬಾಳೆಹಣ್ಣು ತಿಂದರೂ ಸಾಕು, ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು, ರಕ್ತದೊತ್ತಡ ನಿಯಂತ್ರಣದಲ್ಲಿರುವುದು, ಅಲ್ಲದೇ ಅತಿಯಾಗಿ ತಿನ್ನುವುದನ್ನು ನಿಯಂತ್ರಿಸುವುದರ ಜೊತೆಗೆ ಹಠಾತ್ ಶಕ್ತಿ ನೀಡುವಲ್ಲಿ ಕೂಡ ಇದು ಪ್ರಮುಖ ಪಾತ್ರ ನಿರ್ವಹಿಸುವುದು.
ಇದೇ ತರಹದ ಆರೋಗ್ಯಕರ ,ಆಹಾರಗಳನ್ನು, ತಿಳಿಯಲು ನಮ್ಮ foodforhealth.blog ನಲ್ಲಿ ಮಾಹಿತಿ ಪಡೆಯಿರಿ…🙏
Leave a Reply