“ತುಳಸಿ ಗಿಡ”: ಆರೋಗ್ಯ ಮತ್ತು ಧಾರ್ಮಿಕ, ಮಹತ್ವದ ಸಮಗ್ರ ಮಾರ್ಗದರ್ಶಕ”

“ತುಳಸಿ”, ನಾವು ಪೂಜಿಸಲ್ಪಡುವ. ಒಂದು ದೈವಿಕ ಸಸ್ಯ.ತುಳಸಿ (Holy Basil) ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಬಹು ಮುಖ್ಯವಾದ ಔಷಧೀಯ ಗಿಡವಾಗಿದೆ. ಇದು ಮನೆಗಳ ಮುಂದೆ ಸಾಮಾನ್ಯವಾಗಿ ಬೆಳೆಯುವ ಗಿಡವಾಗಿದ್ದು, ಆರೋಗ್ಯಕ್ಕೂ ಮತ್ತು ಆಧ್ಯಾತ್ಮಿಕತೆಯಿಗೂ ಮಹತ್ವದ್ದಾಗಿದೆ.

ತುಳಸಿಯನ್ನು, ‘ಸಸ್ಯಗಳ ರಾಣಿ’ ಎಂದು ಕರೆಯಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡವಿರುವುದು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯಕ್ಕೆ (ಶೀತ, ಕೆಮ್ಮು) ಉತ್ತಮವಾಗಿದೆ. ಇದು ಪ್ರತಿದಿನ ನೇರ ಸೂರ್ಯನ ಬೆಳಕು ಮತ್ತು ನಿಯಮಿತ ನೀರು ಬಯಸುವ ಗಿಡ.

ತುಳಸಿ ಗಿಡವನ್ನು ದೇವರಂತೆ ಪೂಜಿಸಲಾಗುತ್ತದೆ. ವಿಶೇಷವಾಗಿ ಹಿಂದೂ ಸಂಪ್ರದಾಯದಲ್ಲಿ ತುಳಸಿ ಪೂಜೆ ಮಾಡುವುದು ಶುಭಕರ ಎಂದು ನಂಬಲಾಗಿದೆ.

ತುಳಸಿ ಗಿಡವು ನಮ್ಮ ಭಾರತೀಯ ಮನೆಗಳಲ್ಲಿ ಬಹಳ ಸಾಮಾನ್ಯವಾಗಿ ಕಾಣುವ ಪವಿತ್ರ ಮತ್ತು ಔಷಧೀಯ ಗಿಡವಾಗಿದೆ. ಹಿಂದೂ ಸಂಪ್ರದಾಯದಲ್ಲಿ ತುಳಸಿಯನ್ನು ದೇವಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಇದರ ಆರೋಗ್ಯ ಲಾಭಗಳು ಅಪಾರವಾಗಿವೆ.

ತುಳಸಿ”ಯಲ್ಲಿ (holy basil) ಪ್ರಮುಖ ಪ್ರಭೇದಗಳಿವೆ. ಅವುಗಳಲ್ಲಿ 3 ಪ್ರಬೇಧ ಮುಖ್ಯ,.

  • ಕೃಷ್ಣ ,ತುಳಸಿ
  • ರಾಮ ತುಳಸಿ
  • ವನ , ತುಳಸಿ

ಪ್ರತಿಯೊಂದು ತುಳಸಿಗೂ ,ಬೇರೆ ,ಬೇರೆ, ಔಷಧಿಯ ಗುಣಗಳಿವೆ.

ತುಳಸಿ ಗಿಡವನ್ನು ಮನೆ ಮುಂದೆ ಬೆಳೆಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳು:

  • ಗಾಳಿಯನ್ನು,ಶುದ್ಧಗೊಳಿಸುತ್ತದೆ:

ತುಳಸಿ ಗಿಡವು, ವಾತಾವರಣಗಳಲ್ಲಿ ಹಾದುಹೋಗುವ ಹಾನಿಕಾರಕ. ಜೀವಣಗಳನ್ನು ಕಡಿಮೆ ಮಾಡುತ್ತದೆ. ಮತ್ತು ಮನೆಯ ಸುತ್ತಲಿನ ಗಾಳಿಯನ್ನು ಸ್ವಚ್ಛವಾಗಿರುತ್ತದೆ ಇ ಪ್ರಕ್ರಿಯೆಯಿಂದ ಪರಿಶುದ್ಧ ಗಾಳಿ ನಮಗೆ ಕೊಡುತ್ತದೆ.

  • ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ಮನೆ ಮುಂದೆ ಬೆಳೆಸುವ, ತುಳಸಿ ಗಿಡದ ಎಲೆಗಳನ್ನು ದಿನನಿತ್ಯ ಒಂದೆರಡು ಸೇವಿಸುವುದರಿಂದ, ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

  • ಶೀತ, ಮತ್ತು ಕೆಮ್ಮು, ಸಮಸ್ಯೆಯನ್ನು ನಿವಾರಿಸುತ್ತದೆ:

ತುಳಸಿ ಗಿಡದಲ್ಲಿರುವ, ಹಲವಾರು ಔಷಧಿಯ ಗುಣಗಳು ಮತ್ತು ರೋಗನಿರೋಧಕ ಶಕ್ತಿಗಳ. ಪರಿಣಾಮದಿಂದ ಶೀತ ,ಮತ್ತು ಕೆಮ್ಮು, ಇನ್ನಿತರ ಆರೋಗ್ಯಕರ ಸಮಸ್ಯೆಗಳನ್ನು ನಿವಾರಿಸುತ್ತದೆ

ಮನಸ್ಸಿಗೆ ಶಾಂತಿ. ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

ತುಳಸಿ ಗಿಡದ ಸುತ್ತಲಿನ ವಾತಾವರಣ ಮನಸ್ಸಿಗೆ ಶಾಂತಿ ಮತ್ತು ಹಿತವನ್ನು ನೀಡುತ್ತದೆ. ಇದರಲ್ಲಿ ದೈವಿಕ ಗುಣವಿರುವುದರಿಂದ ಪಾಸಿಟಿವ್ ಎನರ್ಜಿ, ಇನ್ನು ನೀಡುತ್ತದೆ. ಇದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಹಾಗಾಗಿ ಒತ್ತಡವನ್ನು ನಿಯಂತ್ರಿಸುತ್ತದೆ

ಕೀಟಗಳನ್ನು.ಹೋಗಲಾಡುತ್ತದೆ:

ತುಳಸಿ ಗಿಡದ ವಾಸನೆ ಕೀಟಗಳನ್ನು (mosquitoes) ದೂರ ಇಡಲು ಸಹಕಾರಿ.

ತುಳಸಿ ಗಿಡವನ್ನು ಮನೆ ಮುಂದೆ ಬೆಳೆಸುವುದು ಆರೋಗ್ಯ, ಮನಶಾಂತಿ ಮತ್ತು ಪರಿಸರದ ಶುದ್ಧತೆಯನ್ನು ನೀಡುವ ಉತ್ತಮ ಅಭ್ಯಾಸವಾಗಿದೆ. ಪ್ರತಿಯೊಂದು ಮನೆಯಲ್ಲಿ ತುಳಸಿ ಗಿಡ ಇದ್ದರೆ ಅದು ನೈಸರ್ಗಿಕ ಔಷಧಿಯಂತೆಯೇ ಕೆಲಸ ಮಾಡುತ್ತದೆ.

ಇದೇ ಕಾರಣದಿಂದ ತುಳಸಿ ಗಿಡವನ್ನು ಔಷಧೀಯ ಸಸ್ಯ, (medicine plant) ಇಂದು ಕರೆಯಲಾಗುತ್ತದೆ .

ಹಾಗಾಗಿ ತುಳಸಿ ಗಿಡ ಅದಕ್ಕೆ ಭಾರತೀಯ ಸಂಪ್ರದಾಯದಲ್ಲಿ, ದೇವಿ ರೂಪವೆಂದು ಭಕ್ತಿಯಿಂದ ಪೂಜಿಸಲ್ಪಡುತ್ತದೆ.

“ಸಾರ್ವಜನಿಕ ಜೀವನದಲ್ಲಿಯೇ ಅಲ್ಲ, ತುಳಸಿ ಗಿಡ ನಮ್ಮ ದಿನಚರಿಯ ಭಾಗವಾಗುವಂತೆ ಮಾಡುವುದರಿಂದ, ನಮ್ಮ ಮನಸ್ಸಿಗೂ, ದೇಹಕ್ಕೂ ಹಾಗೂ ಪರಿಸರಕ್ಕೂ ಸಹ ಶುದ್ಧತೆ ಮತ್ತು ಸಮತೋಲನವನ್ನು ನೀಡುತ್ತದೆ. ಪ್ರತಿದಿನ ತುಳಸಿ ಗಿಡವನ್ನು ಬೆಳೆಸುವ ಮೂಲಕ, ನಾವು ನಾವೇ ನಮ್ಮ ಆರೋಗ್ಯ ಮತ್ತು ಶಾಂತಿಯನ್ನು ಬೆಳೆಸಿಕೊಳ್ಳಬಹುದು.”

Comments

Leave a Reply

Your email address will not be published. Required fields are marked *