ದೇಹಕ್ಕೆ, ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳನ್ನು, ಒದಗಿಸುತ್ತದೆ . ಮೋರಿಂಗ.! [ನುಗ್ಗೆಸೊಪ್ಪಿನ ಪುಡಿ].

, ಮೋರಿಂಗ ಎಂದರೆ, ಕನ್ನಡದಲ್ಲಿ ನಾವು “ನುಗ್ಗೆ ಮರ” ಎಂದು ಕರೆಯುವ ಈ ಮರವನ್ನು ಪ್ರಕೃತಿಯ ಅದ್ಭುತ ಕೊಡುಗೆ ಎಂದು ಹೇಳಬಹುದು. ಈ ಮರದ ಎಲೆ, ಕಾಯಿ, ಹೂ, ಬೀಜ, ಬೇರು – ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ. ಆದ್ದರಿಂದ ಇದನ್ನು “ಸೂಪರ್ ಫುಡ್” ಎಂದೂ ಕರೆಯುತ್ತಾರೆ.

ನುಗ್ಗೆ ಮರದ ಎಲೆಗಳನ್ನು, ಒಣಗಿಸಿ ಪುಡಿ ಮಾಡಿದ ಪುಡಿಯನ್ನು, “ಮೋರಿಂಗ”ಎಂದು ಕರೆಯುತ್ತಾರೆ

ಮುರಂಗಾ ಒಂದು ಸಾಮಾನ್ಯ ಮರ ಅಲ್ಲ – ಇದು ಒಂದು ನೈಸರ್ಗಿಕ ಔಷಧಿ. ಪ್ರತಿದಿನದ ಆಹಾರದಲ್ಲಿ ಮುರಂಗಾ ಸೇರಿಸಿದರೆ ಅನೇಕ ರೋಗಗಳಿಂದ ದೂರ ಇರಬಹುದು. ನಮ್ಮ ಊರಿನಲ್ಲಿ ಸುಲಭವಾಗಿ ಸಿಗುವ ಈ ಮರದ ಉಪಯೋಗವನ್ನು ಎಲ್ಲರೂ ಮಾಡಬೇಕು.

ಮೋರಿಂಗ ಎಲೆಯ ಪೌಷ್ಟಿಕ ಮೌಲ್ಯಗಳು

  • ವಿಟಮಿನ್ –A
  • ವಿಟಮಿನ್–C
  • ವಿಟಮಿನ್–E
  • ಕ್ಯಾಲ್ಸಿಯಂ (calsium)
  • ಪ್ರೋಟೀನ್ (Protein)
  • ಪೊಟ್ಯಾಶಿಯಾಮ್ (potassium )
  • ಆಂಟಿ ಆಕ್ಸಿಡೆಂಟ್
  • ಮೆಗ್ನೀಷಿಯಂ(megnisium)
  • ಫೈಬರ್ (fiber)

ವಿಟಮಿನ್–A: ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

ವಿಟಮಿನ್–c: ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ವಿಟಮಿನ್ –E: ಚರ್ಮ, ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ.

ಕ್ಯಾಲ್ಸಿಯಂ: ದೇಹದಲ್ಲಿನ ಮೂಳೆಗಳನ್ನು, ಬಲಗೊಳಿಸುತ್ತದೆ ಮತ್ತು ಹಲ್ಲಿನ ಆರೋಗ್ಯಕ್ಕೆ ಸಹಾಯಕ

ಪ್ರೋಟೀನ್: ದೇಹದ ಬೆಳವಣಿಗೆಯಲ್ಲಿ, ಪ್ರೋಟೀನ್ ಗಳ ಪಾತ್ರ ಪ್ರಮುಖ. ಹಾಗಾಗಿ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ.

ಪೊಟ್ಯಾಸಿಯಂ: ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಆಂಟಿ ಆಕ್ಸಿಡೆಂಟ್: ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ ರೋಗಗಳಿಂದ ದೂರವಿರಿಸುತ್ತದೆ.

ಮೆಗ್ನೀಸಿಯಂ: ದೇಹದ ನಿಶಕ್ತಿಯನ್ನು, ಕಡಿಮೆ ಮಾಡುತ್ತದೆ.ಮತ್ತು ಸ್ನಾಯು ಮತ್ತು ನರಗಳಿಗೆ ಶಕ್ತಿಯನ್ನು ಒದಗಿಸುತ್ತದೆ.

ಫೈಬರ್: ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ಮಲಬದ್ಧತೆಯನ್ನು, ನಿಯಂತ್ರಿಸುತ್ತದೆ.

ಮೋರಿಂಗಾ (ಡ್ರಮ್‌ಸ್ಟಿಕ್ ಗಿಡದ ಎಲೆಗಳು) ಆರೋಗ್ಯಕ್ಕೆ ತುಂಬಾ ಉಪಯುಕ್ತವಾದ ಪೌಷ್ಟಿಕ ಆಹಾರವಾಗಿದೆ. ಇದನ್ನು “ಸೂಪರ್ ಫುಡ್” ಎಂದೂ ಕರೆಯುತ್ತಾರೆ

ಮೋರಿಂಗ ಬಳಸುವ ವಿಧಾನ:

  • ಮೋರಿಂಗಾ ಎಲೆಗಳನ್ನು ಸಾರು, ಪಲ್ಯ ಅಥವಾ ಸೂಪ್‌ನಲ್ಲಿ ಬಳಸಬಹುದುಮೋರಿಂಗಾ ಪುಡಿಯನ್ನು ಹಾಲು ಅಥವಾ ನೀರಿಗೆ ಸೇರಿಸಿ ಕುಡಿಯಬಹುದುಡ್ರಮ್‌ಸ್ಟಿಕ್ ತರಕಾರಿಯಾಗಿ ಸಾಂಬಾರ ನಲ್ಲಿ ಬಳಸಬಹುದು.

Comments

Leave a Reply

Your email address will not be published. Required fields are marked *