“ಏಳನೀರು”ಒಂದು ನೈಸರ್ಗಿಕ ಪಾನೀಯ.!

ಎಳನೀರು, ಪ್ರಕೃತಿ ನೀಡಿರುವ ಅದ್ಭುತ ಕೊಡುಗೆ. ಎಳನೀರು (Tender Coconut Water) ಪ್ರಕೃತಿಯ ಅತ್ಯಂತ ಆರೋಗ್ಯಕರ ಪಾನೀಯಗಳಲ್ಲಿ ಒಂದಾಗಿದೆ. ಇದು ತಾಜಾ, ರುಚಿಕರ ಹಾಗೂ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದೆ. ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಡಲು ಮತ್ತು ದೇಹದ ನೀರಿನ ಕೊರತೆಯನ್ನು ತುಂಬಲು ಎಳನೀರು ಬಹಳ ಸಹಾಯಕವಾಗಿದೆ.

ಎಳನೀರು ಒಂದು ನೈಸರ್ಗಿಕ ಆರೋಗ್ಯ ಪಾನೀಯವಾಗಿದೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ, ದೇಹವನ್ನು ತಂಪಾಗಿಡುತ್ತದೆ ಮತ್ತು ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತದೆ. ಆದ್ದರಿಂದ ವಾರದಲ್ಲಿ 3–4 ಬಾರಿ ಎಳನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಆರೋಗ್ಯ ಉತ್ತಮವಾಗಿರುತ್ತದೆ.

ಬೇಸಿಗೆಯ ಬಿಸಿಲಿನ ತಾಪವನ್ನು ತಡೆಯುವುದೇ ಒಂದು ದೊಡ್ಡ ಸವಾಲಾಗಿದೆ. ಇದಕ್ಕೆ ಎಳನೀರು ಸೂಕ್ತ ಪಾನೀಯವಾಗಿದೆ.

ಎಳನೀರಿನಲ್ಲಿರುವ, ಪೌಷ್ಟಿಕಾಂಶಗಳು

  • ಪೊಟ್ಯಾಸಿಯಾಮ್
  • ಕ್ಯಾಲ್ಸಿಯಂ
  • ಮೆಗ್ನೀಷಿಯಂ
  • ಸೋಡಿಯಮ್
  • ವಿಟಮಿನ್–C
  • ಕಡಿಮೆ ಕ್ಯಾಲೊರಿ.

ಇವು ದೇಹದ ಸಮತೋಲನವನ್ನು, ಕಾಪಾಡಲು ಸಹಾಯ ಮಾಡುತ್ತದೆ.

  • ದೇಹವನ್ನುತಂಪಾಗಿಸುತ್ತದೆ: ಬೇಸಿಗೆಯ ಬಿಸಿಲಿನ ತಾಪವನ್ನು ತಡೆಯುವುದಕ್ಕೆ, ಎಳನೀರು ಪ್ರಕೃತಿ ನೀಡಿರುವ ಅದ್ಭುತ ಪಾನೀಯ.edu ದೇಹವನ್ನು ತಂಪಾಗಿಡುತ್ತದೆ.
  • ಚರ್ಮದ ,ಆರೋಗ್ಯವನ್ನು, ಕಾಪಾಡುತ್ತದೆ: ಚರ್ಮವನ್ನು,ಕಾಂತಿಯುತವಾಗಿ ಇರುವಂತೆ ಮಾಡುತ್ತದೆ. ಇದರಲ್ಲಿನ ವಿಟಮಿನ್ –ಚರ್ಮದ ಆರೋಗ್ಯವನ್ನು , ಕಾಪಾಡುತ್ತದೆ ಮೊಡವೆ ಯನ್ನು ಕಡಿಮೆ ಮಾಡುತ್ತದೆ.
  • ಹೃದಯದ ಆರೋಗ್ಯವನ್ನು, ಸುಧಾರಿಸುತ್ತದೆ: ಪೊಟಾಸಿಯಂ, ಇರುವುದರಿಂದ. ಇದು ರಕ್ತದ ಒತ್ತಡವನ್ನು,ನಿಯಂತ್ರಿಸುತ್ತದೆ. ಹಾಗಾಗಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
  • ದೇಹವನ್ನು ಹೈಡ್ರೇಟ್ ಆಗಿ ಇರಿಸುತ್ತದೆ: ಬಿಸಿಲಿನ ತಾಪವನ್ನು, ದೇಹವು ತಡೆಯುವ ಸಾಹಸದಲ್ಲಿ , ನೀರಿನ ಕೊರತೆಯನ್ನು,ಎದುರಿಸಬೇಕಾಗುತ್ತದೆ. ಎಳನೀರು ದೇಹವನ್ನು ಹೈಡ್ರೇಟ್ ಆಗಿ ಇರಿಸುತ್ತದೆ.

ಎಳನೀರು. ಒಂದು ನೈಸರ್ಗಿಕ ಆರೋಗ್ಯ ಪಾನೀಯವಾಗಿದೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ದೇಹವನ್ನು ತಂಪಾಗಿಡುತ್ತದೆ. ಮತ್ತು ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತದೆ. ಆದ್ದರಿಂದ ಕನಿಷ್ಠ, ವಾರಕ್ಕೆ 3 ರಿಂದ 4 ಬಾರಿ ಎಳನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಆರೋಗ್ಯ ಉತ್ತಮವಾಗಿಸುತ್ತದೆ.

ಎಳನೀರು ಸೇವಿಸುವ ಸರಿಯಾದ ಸಮಯ:

  • ಬೆಳಗ್ಗೆ, ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು
  • ವ್ಯಾಯಾಮದ ನಂತರ ಒಳ್ಳೆಯದು
  • ಬೇಸಿಗೆ ಸಮಯದಲ್ಲಿ, ಮಧ್ಯಾನ ದೇಹಕ್ಕೆ ನೀರಿನ ಕೊರತೆ ಇದ್ದಾಗ ತೆಗೆದುಕೊಳ್ಳಬಹುದು.

ಇಗೆ ಎಳನೀರಿನ ಸೇವನೆ ಸೂಕ್ತವಾದ ಆರೋಗ್ಯ ದ ಲಾಭಗಳನ್ನು, ನೀಡುತ್ತದೆ.

Comments

Leave a Reply

Your email address will not be published. Required fields are marked *