
ಜೇನು, ಪ್ರಕೃತಿಯೇ ನೀಡಿರುವ ಅದ್ಭುತ ಕೊಡುಗೆ.ಜೇನುತುಪ್ಪವು ನೈಸರ್ಗಿಕ ಪೋಷಕಾಂಶಗಳ ಆಗರವಾಗಿದ್ದು, ಆರೋಗ್ಯ ಮತ್ತು ಸೌಂದರ್ಯವರ್ಧಕವಾಗಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ.
ಜೇನು ತುಪ್ಪ ಎಂದು ಹೆಸರು ಎತ್ತಿದರೆ ಸಾಕು ನಮಗೆ ಅರಿವಿಲ್ಲದೆಯೇ ಬಾಯಲ್ಲಿ ನೀರೂರಲು ಆರಂಭವಾಗುತ್ತದೆ.. ಅಲ್ವಾ. ಸಕ್ಕರೆಯ ಸವಿಯನ್ನು ನೀಡಬಲ್ಲ ಜೇನು ನೈವೇದ್ಯ ಸಮಾನ.
ಆಯುರ್ವೇದದಲ್ಲಂತೂ ಜೇನಿಗೆ ಅಗ್ರಸ್ಥಾನ ವಿದೆ. ಆದರೆ ಜೇನು ತುಪ್ಪವನ್ನು ಯಾವುದೇ ಕಾರಣಕ್ಕೂ ಬಿಸಿ ಪದಾರ್ಥಗಳೊಂದಿಗೆ ಸೇರಿಸಿ ಸೇವಿಸಬಾರದು.ಇದರಿಂದ ಜೇನಿನ ಸತ್ವವೆಲ್ಲ ಕಳೆದು ದೇಹದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಜಾಸ್ತಿಯಿದೆ ಎನ್ನುತ್ತಾರೆ
ಜೇನಿನಲ್ಲಿರುವ, ಆರೋಗ್ಯಕರ ವಿಷಯಗಳು:

ಗಾಯವನ್ನು, ಗುಣಪಡಿಸುವ ಗುಣವಿದೆ:
- ಜೇನುತುಪ್ಪದ ಒಂದು ಮುಖ್ಯ ಉಪಯೋಗ ಏನೆಂದರೆ ಈ ಜೇನಿಗೆ [ಗಾಯವನ್ನು ಗುಣಪಡಿಸುವ] ಈ ಸಾಮರ್ಥ್ಯವಿದೆ.ಹಾಗಾಗಿ ಬಾಯಿಹುಣ್ಣು ಆದ ಸಂದರ್ಭದಲ್ಲಿ ನಾಲ್ಕು ಚಮಚದಷ್ಟು ಜೇನು ತುಪ್ಪವನ್ನು ಬಾಯಿಯಲ್ಲಿ ಹಾಕಿ ಇಟ್ಟುಕೊಂಡರೆ ಬಾಯಿ ಹುಣ್ಣು ತಕ್ಷಣವೇ ವಾಸಿಯಾಗುತ್ತದೆ. ಅಥವಾ ನೆಲ್ಲಿಕಾಯಿ ಪುಡಿಯನ್ನು ಈ ಜೇನುತುಪ್ಪ ದೊಂದಿಗೆ ಸೇರಿಸಿ ಲೇಪದಂತೆ ಹಚ್ಚಿಕೊಂಡರೆ ಬಾಯಿ ಹುಣ್ಣು ತಕ್ಷಣವೇ ವಾಸಿಯಾಗುತ್ತದೆ.
ತೂಕವನ್ನು,ನಿರ್ವಹಿಸುತ್ತದೆ.
ಜೇನು,ಒಂದು ಉತ್ತಮ ಆಹಾರ. ತಮ್ಮ ದೇಹದ ಬೇಡದ ಕೊಬ್ಬನು ಕರಗಿಸುವವರಿಗೆ ಉತ್ತಮ ಆಹಾರ. ಉಗುರು ಬೆಚ್ಚಗಿನ ನೀರಿಗೆ, ಜೇನನ್ನು ಸೇರಿಸಿ. ಒಂದು ತುಂಡು ನಿಂಬೆರಸ, ಬೆರೆಸಿ ಕುಡಿಯುವುದರಿಂದ ಕಾಲ ಕ್ರಮೇಣ ಅನಿರೀಕ್ಷಿತ ಕೊಬ್ಬು ಕರಗಿಸುತ್ತದೆ.
ಸಣ್ಣ, ಸಣ್ಣ , ಆರೋಗ್ಯ ಸಮಸ್ಯೆಗೂ,”ರಾಮಬಾಣ” ಜೀನು!
ಅಲ್ಲದೇ ಶುಂಠಿಯನ್ನು ಜೇನುತುಪ್ಪದೊಂದಿಗೆ ಜಜ್ಜಿ ಸೇವಿಸಿದರೆ ಪದೇ ಪದೇ ಉಂಟಾಗುವ ಕಫ, ಕೆಮ್ಮು, ಹಾಗೂ ಉರಿ ಶೀತದಿಂದ ಪಾರಾಗಬಹುದು. ಯಾಕೆಂದರೆ ಜೇನುತುಪ್ಪ ದಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಅಮೃತದಂತೆ ದೇಹಕ್ಕೆ ಸಹಕರಿಸುತ್ತದೆ ಸಣ್ಣ, ಸಣ್ಣ ಆರೋಗ್ಯ ಸಮಸ್ಯೆಗಳನ್ನು, ನಿವಾರಿಸುತ್ತಧೆ
* ಜೀರ್ಣಕ್ರಿಯೆಗೂ ಸಹಕಾರಿ,.
ಜೇನು, ಅನೇಕ ಔಷಧಿ ಗುಣಗಳನ್ನು ಒಳಗೊಂಡಿದೆ. ಇದು ಜೀರ್ಣಕ್ರಿಯೆಗೂ ಸಹಕಾರಿ ಅಲ್ಲದೇ ದೇಹದ ಚಯಾಪಚಯ ಕ್ರಿಯೆಗೂ ಈ ಜೇನು ತುಂಬ ಸಹಾಯವಾಗುತ್ತದೆ. ಹೀಗಾಗಿ ಮಾರ್ಕೆಟ್ ನಿಂದ ಜೇನನ್ನು ತೆಗೆದುಕೊಳ್ಳುವ ವೇಳೆ ಆದಷ್ಟು ಕಲಬೆರಕೆ ಇಲ್ಲದ ತುಪ್ಪವನ್ನು ತೆಗೆದುಕೊಳ್ಳಿ.
ಕೆಲವೊಮ್ಮೆ, ಆಹಾರದಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು, ತಪ್ಪಿಸಲು ಈ ಜೇನು ಸಹಕಾರಿಯಾಗಿದೆ.
ಇದು ಅರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹೆಚ್ಚು ಹೆಚ್ಚು ಸೇವಿಸುವಂತಿಲ್ಲ. ಬದಲಿಗೆ ದಿನಕ್ಕೆ ಕೇವಲ ಒಂದರಿಂದ ಎರಡು ಚಮಚದಷ್ಟು ಮಾತ್ರ ಹಣ್ಣಿನೊಂದಿಗೆ ಅಥವಾ ನೇರವಾಗಿ ಈ ತುಪ್ಪವನ್ನು ಸೇವಿಸಬೇಕು.ಮುಖ್ಯವಾದ ವಿಚಾರ ಏನೆಂದರೆ ಈ ಜೇನುತುಪ್ಪ ವನ್ನು ಬೇಸಿಗೆ ಕಾಲದಲ್ಲಿ ತೆಗೆದುಕೊಂಡರೆ ದೇಹದ ಉಷ್ಣತೆ ಯು ಹೆಚ್ಚಿ ಪ್ರತಿಕೂಲ ಪರಿಣಾಮವನ್ನು ಬೀರಬಹುದು.
ಅತಿಯಾದರೆ, ಅಮೃತವು ವಿಷಯವಗುತ್ತದೆ. ಎಂಬ ಗಾದೆ ಮಾತಿನಂತೆ ಜೇನನ್ನು, ಮಿತವಾಗಿ ಸೇವಿಸಿ ಆರೋಗ್ಯವಾಗಿರೋಣ,…😊
Leave a Reply