ಅಡುಗೆ ಮನೆಯ, ಆರೋಗ್ಯದ –ಸುವರ್ಣ ಸಂಪತ್ತು,. “ಅರಿಶಿಣ”!

“ಅರಿಶಿಣ “(termeric )ಒಂದು ನಮ್ಮ ದಿನನಿತ್ಯದ ಅಡುಗೆ ಮನೆಯಲ್ಲಿ ಬಳಕೆ ಆಗುವ ಒಂದು ಮಸಾಲೆ ಪದಾರ್ಥ, ಮಾತ್ರವಲ್ಲ, ಅದೂ ಒಂದು ಶಕ್ತಿಶಾಲಿ ಔಷಧೀಯ ಗುಣಗಳಿರುವ ನೈಸರ್ಗಿಕ ಆರೋಗ್ಯದ ಸಂಪತ್ತು, ಸಾವಿರಾರು ವರ್ಷಗಳಿಂದ ಆಯುರ್ವೇದದಲ್ಲಿ ಅರಿಶಿಣವನ್ನು ಬಳಸಲಾಗುತ್ತಿದೆ.

ಅರಿಶಿಣವೂ , ಒಂದು ತರಹದ ಸಸ್ಯವಾಗಿದ್ದು, ಅದನ್ನು ಒಣಗಿಸಿ ಪುಡಿ ಮಾಡಿದಾಗ, ಅದು ಅರಿಶಿಣ ಪುಡಿ [termeric powder] ಆಗುತ್ತದೆ.ಇದರ ಮುಖ್ಯ ಅಂಶವಾದ ಕರ್ಕುಮಿನ್ {curcumin} ಆರೋಗ್ಯಕ್ಕೆ, ನಿವಾರಿಯಾದ ಆರೋಗ್ಯವನ್ನು ನೀಡುತ್ತದೆ

ಅರಿಶಿನವು ಭಾರತೀಯ ಅಡುಗೆ ಮನೆಯ ಅವಿಭಾಜ್ಯ, ಅಂಗವಾಗಿದೆ. ಇದು ಕೇವಲ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೆ ಬಹಳ ಉಪಯೋಗಕಾರಿಯಾಗಿದೆ. ಸಾವಿರಾರು ವರ್ಷಗಳಿಂದ ಆಯುರ್ವೇದದಲ್ಲಿ ಅರಿಶಿಣವನ್ನು, ಬಳಸಲಾಗುತ್ತದೆ.

ಅರಿಶಿಣದಲ್ಲಿ, ಇರುವ ಆರೋಗ್ಯಕಾರಿ ಪೌಷ್ಟಿಕಾಂಶಗಳು.

  • ಆಂಟಿ –ಆಕ್ಸಿಡೆಂಟ್
  • ಕರ್ಕುಮಿನ್ (curcumin)
  • ವಿಟಮಿನ್ –C
  • ಐರನ್
  • ಪೊಟ್ಯಾಸ್ಸಿಯಂ
  • ಆಂಟಿ ಇಂಪ್ಲಾಮೆಂಟರಿ ಗುಣಗಳು.

1. ರೋಗ ನಿರೋಧಕ ಶಕ್ತಿಯನ್ನು, ಹೆಚ್ಚಿಸುತ್ತದೆ.

  • ದೇಹವು ಯಾವುದೇ ರೋಗಗಳನ್ನು,ಹೆದುರಿಸಬೇಕಾದರೆ, ರೋಗ ನಿರೋಧಕ ಶಕ್ತಿ ಯ ಪತ್ರ ಪ್ರಮುಖ. ಅರಿಶಿಣ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜ್ವರ, ಶೀತ, ಕೆಮ್ಮು, ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

2.ಗಾಯಗಳನ್ನು, ಬೇಗ ಗುಣಮಾಡುವ ಗುಣವನ್ನು ಹೊಂದಿದೆ.

  • ಅರಿಶಿಣವನ್ನು, ಗಾಯದ ಮೇಲೆ ಹಚ್ಚಿದರೆ, ಅದು ಬೇಗ ಗುಣವಾಗಲು ಸಹಾಯ ಮಾಡುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ , ಇದಕ್ಕೆ ಬ್ಯಾಕ್ಟೀರಿಯಾ,! ವಿರೋಧಿ ಗುಣವಿದೆ. ಆದ್ದರಿಂದ ಗಾಯಗಳು ಬೇಗ ಗುಣಮುಖವಾಗುತ್ತದೆ.

3.ಜೀರ್ಣಕ್ರಿಯೆಯನ್ನು, ಸುಗಮಗೊಳಿಸುತ್ತದೆ.

  • ಅರಿಶಿಣ ಹಲವಾರು ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ನಮಗೆ ನೀಡುತ್ತದೆ. ಅರಿಶಿಣ ಜೀರ್ಣಕ್ರಿಯೆಯನ್ನು, ಸುಧಾರಿಸಿ ಹೊಟ್ಟೆ ಉಬ್ಬರ, ಗ್ಯಾಸ್ಟಿಕ್, ಇನ್ನಿತರ ಕರುಳಿನ ಸಮಸ್ಯೆಗಳನ್ನು,ಕಡಿಮೆ ಮಾಡುತ್ತದೆ.

ಅರಿಶಿಣ, ಅಡಿಗೆ ಮನೆಯ “ಔಷಧಿ”

ಅರಿಶಿಣದ ಬಳಕೆಯವಿಧಾನ:

  • ಪ್ರತಿದಿನ ರಾತ್ರಿ ಬಿಸಿ ಹಾಲಿಗೆ ಅರ್ಧ ಚಮಚ ಅರಿಶಿಣ ಹಾಕಿ ಕುಡಿಯಿರಿ.
  • ಅಡುಗೆಯಲ್ಲಿ, ನಿಯಮಿತವಾಗಿ ಅರಿಶಿಣ ಬಳಸಿ
  • ಮುಖಕ್ಕೆ ಅರಿಶಿಣ+ ಜೇನುತುಪ್ಪ&+ಮೊಸರು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಬಹುದು.

ಅರಿಶಿಣ , ನಮ್ಮ ದಿನನಿತ್ಯದ ಜೀವನದಲ್ಲಿ, ಆರೋಗ್ಯವನ್ನು ಕಾಪಾಡುವ ಒಂದು ಸರಳ ಮನೆ ಮದ್ದಾಗಿದೆ. ಆದರೆ ಇದು ಒಂದು ಪರಿಣಾಮಕಾರಿಯಾದ ಪದಾರ್ಥ. ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಇದು ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಇದೇ ತರಹದ ಆರೋಗ್ಯ ಪ್ರಯೋಜನಗಳನ್ನು ನೀಡುವ ಆಹಾರಗಳನ್ನು ತಿಳಿಯಲು ನಮ್ಮ foodforhealth.blog ನಲ್ಲಿ ಮಾಹಿತಿ ಓದಿ ತಿಳಿಯಿರಿ… 🙏

Comments

Leave a Reply

Your email address will not be published. Required fields are marked *