Blog

  • ದೇಹಕ್ಕೆ, ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳನ್ನು, ಒದಗಿಸುತ್ತದೆ . ಮೋರಿಂಗ.! [ನುಗ್ಗೆಸೊಪ್ಪಿನ ಪುಡಿ].

    , ಮೋರಿಂಗ ಎಂದರೆ, ಕನ್ನಡದಲ್ಲಿ ನಾವು “ನುಗ್ಗೆ ಮರ” ಎಂದು ಕರೆಯುವ ಈ ಮರವನ್ನು ಪ್ರಕೃತಿಯ ಅದ್ಭುತ ಕೊಡುಗೆ ಎಂದು ಹೇಳಬಹುದು. ಈ ಮರದ ಎಲೆ, ಕಾಯಿ, ಹೂ, ಬೀಜ, ಬೇರು – ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ. ಆದ್ದರಿಂದ ಇದನ್ನು “ಸೂಪರ್ ಫುಡ್” ಎಂದೂ ಕರೆಯುತ್ತಾರೆ.

    ನುಗ್ಗೆ ಮರದ ಎಲೆಗಳನ್ನು, ಒಣಗಿಸಿ ಪುಡಿ ಮಾಡಿದ ಪುಡಿಯನ್ನು, “ಮೋರಿಂಗ”ಎಂದು ಕರೆಯುತ್ತಾರೆ

    ಮುರಂಗಾ ಒಂದು ಸಾಮಾನ್ಯ ಮರ ಅಲ್ಲ – ಇದು ಒಂದು ನೈಸರ್ಗಿಕ ಔಷಧಿ. ಪ್ರತಿದಿನದ ಆಹಾರದಲ್ಲಿ ಮುರಂಗಾ ಸೇರಿಸಿದರೆ ಅನೇಕ ರೋಗಗಳಿಂದ ದೂರ ಇರಬಹುದು. ನಮ್ಮ ಊರಿನಲ್ಲಿ ಸುಲಭವಾಗಿ ಸಿಗುವ ಈ ಮರದ ಉಪಯೋಗವನ್ನು ಎಲ್ಲರೂ ಮಾಡಬೇಕು.

    ಮೋರಿಂಗ ಎಲೆಯ ಪೌಷ್ಟಿಕ ಮೌಲ್ಯಗಳು

    • ವಿಟಮಿನ್ –A
    • ವಿಟಮಿನ್–C
    • ವಿಟಮಿನ್–E
    • ಕ್ಯಾಲ್ಸಿಯಂ (calsium)
    • ಪ್ರೋಟೀನ್ (Protein)
    • ಪೊಟ್ಯಾಶಿಯಾಮ್ (potassium )
    • ಆಂಟಿ ಆಕ್ಸಿಡೆಂಟ್
    • ಮೆಗ್ನೀಷಿಯಂ(megnisium)
    • ಫೈಬರ್ (fiber)

    ವಿಟಮಿನ್–A: ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.

    ವಿಟಮಿನ್–c: ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

    ವಿಟಮಿನ್ –E: ಚರ್ಮ, ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ.

    ಕ್ಯಾಲ್ಸಿಯಂ: ದೇಹದಲ್ಲಿನ ಮೂಳೆಗಳನ್ನು, ಬಲಗೊಳಿಸುತ್ತದೆ ಮತ್ತು ಹಲ್ಲಿನ ಆರೋಗ್ಯಕ್ಕೆ ಸಹಾಯಕ

    ಪ್ರೋಟೀನ್: ದೇಹದ ಬೆಳವಣಿಗೆಯಲ್ಲಿ, ಪ್ರೋಟೀನ್ ಗಳ ಪಾತ್ರ ಪ್ರಮುಖ. ಹಾಗಾಗಿ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ.

    ಪೊಟ್ಯಾಸಿಯಂ: ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

    ಆಂಟಿ ಆಕ್ಸಿಡೆಂಟ್: ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ ರೋಗಗಳಿಂದ ದೂರವಿರಿಸುತ್ತದೆ.

    ಮೆಗ್ನೀಸಿಯಂ: ದೇಹದ ನಿಶಕ್ತಿಯನ್ನು, ಕಡಿಮೆ ಮಾಡುತ್ತದೆ.ಮತ್ತು ಸ್ನಾಯು ಮತ್ತು ನರಗಳಿಗೆ ಶಕ್ತಿಯನ್ನು ಒದಗಿಸುತ್ತದೆ.

    ಫೈಬರ್: ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ಮಲಬದ್ಧತೆಯನ್ನು, ನಿಯಂತ್ರಿಸುತ್ತದೆ.

    ಮೋರಿಂಗಾ (ಡ್ರಮ್‌ಸ್ಟಿಕ್ ಗಿಡದ ಎಲೆಗಳು) ಆರೋಗ್ಯಕ್ಕೆ ತುಂಬಾ ಉಪಯುಕ್ತವಾದ ಪೌಷ್ಟಿಕ ಆಹಾರವಾಗಿದೆ. ಇದನ್ನು “ಸೂಪರ್ ಫುಡ್” ಎಂದೂ ಕರೆಯುತ್ತಾರೆ

    ಮೋರಿಂಗ ಬಳಸುವ ವಿಧಾನ:

    • ಮೋರಿಂಗಾ ಎಲೆಗಳನ್ನು ಸಾರು, ಪಲ್ಯ ಅಥವಾ ಸೂಪ್‌ನಲ್ಲಿ ಬಳಸಬಹುದುಮೋರಿಂಗಾ ಪುಡಿಯನ್ನು ಹಾಲು ಅಥವಾ ನೀರಿಗೆ ಸೇರಿಸಿ ಕುಡಿಯಬಹುದುಡ್ರಮ್‌ಸ್ಟಿಕ್ ತರಕಾರಿಯಾಗಿ ಸಾಂಬಾರ ನಲ್ಲಿ ಬಳಸಬಹುದು.

  • “ಓಟ್ಸ್ ” ಆರೋಗ್ಯಕ್ಕೆ, ಒಳ್ಳೆಯದೇ?

    ತೂಕ ನಷ್ಟ , ಮಾಡುವವರ ಆಹಾರ ಕ್ರಮದಲ್ಲಿ , ಮೊದಲು ಕಾಣುವ ಆಹಾರ ಓಟ್ಸ್,.ಇದು ಗೋಧಿ ಯಂತೆ, ಕಾಣುವ “ತೊಕ್ಕೆ ಗೋಧಿ”ಓಟ್ಸ್ ಫೈಬರ್, ಪ್ರೋಟೀನ್ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆರೋಗ್ಯಕರ ಆಹಾರವಾಗಿದೆ ಓಟ್ಸ್ , ಹಲವಾರು ಬಗೆಯ ಖಾದ್ಯಗಳನ್ನು ತಯಾರಿಸಬಹುದಾದ ಆಹಾರವಾಗಿದೆ. ಓಟ್ಸ್ ನಲ್ಲಿ ಮ್ಯಾಂಗನೀಸ್, ಪ್ರೋಟೀನ್, ರಂಜಕ ಮತ್ತು ಕಬ್ಬಿಣದ ಅಂಶ ಸಮೃದ್ಧವಾಗಿದೆ. ಅಲ್ಲದೇ ಕರಗದ ನಾರಿನಂಶ ಅತ್ಯಂತ ಸಮೃದ್ಧ ಪ್ರಮಾಣದಲ್ಲಿದೆ.ಈ ಕಾರಣದಿಂದ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ ಹಾಗೂ ನಿಧಾನವಾಗಿ ಜೀರ್ಣವಾಗುತ್ತದೆ. ತನ್ಮೂಲಕ ಅನಾರೋಗ್ಯಕರ ಆಹಾರ ಸೇವನೆಯಿಂದ ತಡೆಯುತ್ತದೆ. ಇದರಲ್ಲಿ ಅತಿ ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳಿರುವ ಕಾರಣ ತೂಕ ಇಳಿಕೆಯ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಅತಿ ಸೂಕ್ತ ಆಹಾರವಾಗಿದೆ. 2014 ರಲ್ಲಿ ನ್ಯೂಟ್ರಿಶನ್ ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ಹೊಟ್ಟೆ ತುಂಬಲು ಸಿದ್ಧ ಆಹಾರಗಳೇ ಹೆಚ್ಚು ಸೂಕ್ತವಾಗಿವೆ.

    ತೂಕ ಇಳಿಕೆಗೆ ಓಟ್ಸ್ ಸೂಕ್ತವೇ?

    ಇತ್ತೀಚಿನ, ದಿನಗಳಲ್ಲಿ ತೂಕಇಳಿಸುವವರ ಮತ್ತು ವ್ಯಾಯಾಮ ,ಮಾಡುವವರ ಆಹಾರ ಕ್ರಮಗಳಲ್ಲಿ, ಓಟ್ಸ್ ಹೆಚ್ಚಾಗಿ ಕಂಡುಬರುತ್ತದೆ.. ನಿಜವಾಗಿಯೂ ತೂಕ ಇಳಿಸಲು ಸಹಾಯ ಮಾಡುತ್ತದ. ಓಟ್ಸ್! ತಿಳಿಯೋಣ ಬನ್ನಿ.

    • ತೂಕ ನಷ್ಟಕ್ಕೆ ಓಟ್ಸ್ ಅತ್ಯುತ್ತಮ ಆಹಾರವಾಗಿದೆ, ಏಕೆಂದರೆ ಇದರಲ್ಲಿ ಹೆಚ್ಚಿನ ಫೈಬರ್ ಮತ್ತು ಪೋಷಕಾಂಶಗಳಿವೆ. ಇದು ಹೊಟ್ಟೆಯನ್ನು ದೀರ್ಘಕಾಲದವರೆಗೆ ಪೂರ್ಣವಾಗಿರಿಸುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ತೂಕ ಕಡಿಮೆ ಮಾಡಲು, ಬೆಳಗಿನ ಉಪಾಹಾರ ಅಥವಾ ರಾತ್ರಿಯ ಊಟಕ್ಕೆ ಓಟ್ಸ್ ಅನ್ನು ಆರೋಗ್ಯಕರ ತರಕಾರಿ ಅಥವಾ ಹಣ್ಣುಗಳೊಂದಿಗೆ ಸೇವಿಸಿ.
    • “ಪೌಷ್ಟಿಕತಜ್ಞ ಸ್ವಾತಿ ಸಿಂಗ್” ಪ್ರಕಾರ, ಓಟ್ಸ್ ಉತ್ತಮ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿರುತ್ತದೆ, ಇದು ಸ್ನಾಯುಗಳನ್ನು ಸರಿಪಡಿಸಲು ಮತ್ತು ನಿರ್ಮಿಸಲು ಸಹಾಯ ಮಾಡುತ್ತದೆ. ಪ್ರೋಟೀನ್ ದೀರ್ಘಕಾಲದವರೆಗೆ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ಹೆಚ್ಚುವರಿ ಕ್ಯಾಲೊರಿಗಳನ್ನು ತಿನ್ನುವುದನ್ನು ತಪ್ಪಿಸುತ್ತದೆ.
    • ಓಟ್ಸ್ ಕರಗುವ ಫೈಬರ್ (ಬೀಟಾ-ಗ್ಲುಕನ್) ಅನ್ನು ಹೊಂದಿರುತ್ತದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ನಿಮ್ಮ ಹೊಟ್ಟೆಯನ್ನು ಹಗುರವಾಗಿ ಮತ್ತು ಆರಾಮದಾಯಕವಾಗಿರಿಸುತ್ತದೆ, ನಿಮಗೆ ಉತ್ತಮ ರಾತ್ರಿಯ ನಿದ್ರೆಯನ್ನು ನೀಡುತ್ತದೆ. ಓಟ್ಸ್ನ ಈ ಕರಗುವ ಫೈಬರ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಹೃದಯದ ಆರೋಗ್ಯವನ್ನು ಉತ್ತಮವಾಗಿಡುತ್ತದೆ.
    • ಓಟ್ಸ್ನಲ್ಲಿರುವ ಫೈಬರ್ ಮತ್ತು ಪ್ರೋಟೀನ್ನ ಪ್ರಮಾಣವು ದೇಹವು ಹೆಚ್ಚಿನ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

    ಹೀಗೆ ತೂಕ ನಷ್ಟಕ್ಕೆ , ಸಹಾಯ ಮಾಡುತ್ತದೆ ನೀವು ಸೇವಿಸುವ ಓಟ್ಸ್.

    ಚರ್ಮದ, ಆರೋಗ್ಯ ಕಾಪಾಡುತ್ತದೆ ಓಟ್ಸ್,!

    ಓಟ್ಸ್. ಒಂದು ಆರೋಗ್ಯಕರ, ಸೂಪರ್ ಫುಡ್, ಇದು ಮುಖದ ಕಾಂತಿಯು ಹೆಚ್ಚಿಸುತ್ತದೆ.

    • ಓಟ್ಸ್ ತ್ವಚೆಯ ಆರೈಕೆಗೆ (Skincare) ಅತ್ಯುತ್ತಮ ನೈಸರ್ಗಿಕ ಪರಿಹಾರವಾಗಿದ್ದು, ಇದು ಶುಷ್ಕ ಚರ್ಮವನ್ನು ಮೃದುಗೊಳಿಸುತ್ತದೆ, ಮೊಡವೆಗಳನ್ನು ಕಡಿಮೆ ಮಾಡುತ್ತದೆ, ತುರಿಕೆ ಮತ್ತು ಅಲರ್ಜಿಯನ್ನು ನಿವಾರಿಸುತ್ತದೆ. ಓಟ್ಸ್ ಅನ್ನು ಪುಡಿ ಮಾಡಿ, ಹಾಲು, ಮೊಸರು ಅಥವಾ ಜೇನುತುಪ್ಪದೊಂದಿಗೆ ಬೆರೆಸಿ ಫೇಸ್ ಪ್ಯಾಕ್ ಅಥವಾ ಸ್ಕ್ರಬ್ ಆಗಿ ಬಳಸುವುದರಿಂದ ತ್ವಚೆಯು ಕಾಂತಿಯುತವಾಗಿ, ತೇವಾಂಶದಿಂದ ಕೂಡಿರುತ್ತದೆ.
    • ಓಟ್ಸ್ ಮುಖದಲ್ಲಿನ ಹೆಚ್ಚುವರಿ ಜಿಡ್ಡಿನಂಶವನ್ನು ತೆಗೆದುಹಾಕಿ, ಮೊಡವೆಗಳನ್ನು ನಿಯಂತ್ರಿಸುತ್ತದೆ. ಜಿಡ್ಡಿನಂಶ ವನ್ನು, ತೆಗೆಯುದರಿಂದ . ಮುಖದ ಕಾಂತಿಯು ಸುಂದರವಾಗಿಸುತ್ತದೆ.
    • ಇದು ಮೃತ ಚರ್ಮದ ಕೋಶಗಳನ್ನು (Dead skin) ನಿವಾರಿಸಿ, ಚರ್ಮವನ್ನು ಮೃದುಗೊಳಿಸುತ್ತದೆ.
    • ಸೂಕ್ಷ್ಮ ತ್ವಚೆ ಇರುವವರಿಗೆ ಓಟ್ಸ್ ಅತ್ಯುತ್ತಮ ಪರಿಹಾರ, ಇದು ಅಲರ್ಜಿಯನ್ನು ಕಡಿಮೆ ಮಾಡುತ್ತದೆ.

    ಇಗೆ ಓಟ್ಸ್, ಆರೋಗ್ಯಕರ ಆಹಾರವಾಗಿ ಸೇವಿಸಬಹುದು..

    ಓಟ್ಸ್ ಬಳಸುವ ವಿಧಾನ:

    ಬೆಳಗಿನ ಉಪಾಹಾರಕ್ಕೆ ಓಟ್ಸ್ , ಓಟ್ಸ್ ಖಿಚಡಿ, ಅಥವಾ ಹಾಲಿನೊಂದಿಗೆ ಓಟ್ಸ್ ಬೇಯಿಸಿ (Oatmeal) ಸೇವಿಸುವುದು ಉತ್ತಮ. ಸಕ್ಕರೆ ಬದಲು ಹಣ್ಣುಗಳನ್ನು ಬಳಸುವುದರಿಂದ ಹೆಚ್ಚಿನ ಪೋಷಕಾಂಶ ದೇಹಕ್ಕೆ ಸಿಗುತ್ತವೆ.

    ಓಟ್ಸ್ ಫೇಸ್ ಪ್ಯಾಕ್:

    ಮೊಸರು ಅಥವಾ ಜೇನುತುಪ್ಪದೊಂದಿಗೆ ಬೆರೆಸಿ ಫೇಸ್ ಪ್ಯಾಕ್ ಅಥವಾ ಸ್ಕ್ರಬ್ ಮಾಡಿ ಮುಖಕ್ಕೆ ಹಚ್ಚಬಹುದು.

    ಆದರೆ :ಓಟ್ಸ್ ಫೇಸ್ ಪ್ಯಾಕ್ ಬಳಸುವ ಮುನ್ನ ಪ್ಯಾಚ್ ಟೆಸ್ಟ್ (ಕೈ ಮೇಲೆ ಹಚ್ಚಿ ನೋಡುವುದು) ಮಾಡುವುದು ಸೂಕ್ತ.

  • “ಕಿಡ್ನಿ ಬೀನ್ಸ್”, ಅಥವಾ “ರಾಜ್ಮಾ”, ಒಂದು ಆರೋಗ್ಯಕರ ಆಹಾರ ಹೇಗೆ.?

    ಸಸ್ಯಾಹಾರಿಗಳಿಗೆ ಇದು ಅತ್ಯುತ್ತಮ ಪ್ರೋಟೀನ್ ಮೂಲವಾಗಿದೆ, ಇದು ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ.ವೈಜ್ಞಾನಿಕವಾಗಿ ಫಾಸಿಯೋಲಸ್ ವಲ್ಗ್ಯಾರಿಸ್ ಎಂದು ಕರೆಯಲ್ಪಡುವ, “ರಾಜ್ಮಾ “ಅಥವಾ “ಕಿಡ್ನಿ ಬೀನ್ಸ್”, ಫ್ಯಾಬೇಸಿ ಕುಟುಂಬದ ಸದಸ್ಯ. ಅವು ಮೆಕ್ಸಿಕೋ, ಮತ್ತು ಮಧ್ಯ ಅಮೆರಿಕಕ್ಕೆ ಸ್ಥಳೀಯವಾಗಿರುವ ದ್ವಿದಳ! ಧಾನ್ಯಗಳಾಗಿವೆ. ಭಾರತದಲ್ಲಿ, ಅವುಗಳನ್ನು ಮುಖ್ಯವಾಗಿ ಮಹಾರಾಷ್ಟ್ರ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಬೆಳೆಯಲಾಗುತ್ತದೆ.ರಾಜ್ಮಾ ಆಹಾರದ ನಾರು, ಪ್ರೋಟೀನ್ಗಳು, ಪಿಷ್ಟ, ಜೀವಸತ್ವಗಳು ಮತ್ತು ಖನಿಜಗಳಂತಹ ಸೂಕ್ಷ್ಮ ಪೋಷಕಾಂಶಗಳು ಮತ್ತು ಮ್ಯಾಕ್ರೋನ್ಯೂಟ್ರಿಯಂಟ್‌ಗಳ ವೈವಿಧ್ಯಮಯ ಸಂಗ್ರಹವನ್ನು ನೀಡುತ್ತದೆ.ಈ ಕಾಳುಗಳ ಪೌಷ್ಟಿಕಾಂಶವು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ, ಅವುಗಳನ್ನು ವಿವಿಧ ಖಾದ್ಯಗಳಲ್ಲಿ ಬಳಸಲಾಗುತ್ತದೆ. ರಾಜ್ಮಾ ತಿನ್ನುವುದರಿಂದಾಗುವ ಪ್ರಯೋಜನಗಳು, ಅದರ ಪೌಷ್ಟಿಕಾಂಶದ ಮೌಲ್ಯ, ತಿಳಿಯೋಣ.

    ಕಿಡ್ನಿ ಬೀನ್ ಅಥವಾ ರಾಜ್ಮಾ ದ್ವಿದಳ ಧಾನ್ಯವಾಗಿದ್ದು, ಇದನ್ನು ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಸಾಂಪ್ರದಾಯಿಕ ಭಕ್ಷ್ಯಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಕಿಡ್ನಿಯ ಬಣ್ಣ ಮತ್ತು ಹೋಲಿಕೆ ಹೊಂದಿರುವುದರಿಂದ ಇದಕ್ಕೆ ಕಿಡ್ನಿ ಬೀನ್ಸ್ ಎಂದು ಕರೆಯಲಾಗುತ್ತದೆ. ಕಿಡ್ನಿ ಬೀನ್ಸ್ಗಳಲ್ಲಿ ಪ್ರೋಟೀನ್‌ ಹೇರಳವಾಗಿದೆ. ಇದರ ಪ್ರೋಟೀನ್ ಅಂಶ ಕೆಂಪು ಮಾಂಸದಷ್ಟೇ ಇರುತ್ತದೆ. ಹೀಗಾಗಿ, ಸಸ್ಯಾಹಾರಿಗಳಿಗೆ ಕಿಡ್ನಿ ಬೀನ್ಸ್ ಅತ್ಯುತ್ತಮವಾದ ಆಹಾರವಾಗಿದೆ.

    ಕಿಡ್ನಿ ಬೀನ್ಸ್ ತಾಮ್ರ, ಕಬ್ಬಿಣ, ಮ್ಯಾಂಗನೀಸ್, ರಂಜಕ, ವಿಟಮಿನ್ ಬಿ 1 ಮತ್ತು ಫೋಲೇಟ್‌ನಂತಹ ಖನಿಜಗಳ ಅತ್ಯುತ್ತಮ ಮೂಲವಾಗಿದೆ. ಇದರಲ್ಲಿ ಸಕ್ಕರೆ ಅಂಶ ಕಡಿಮಯಿದ್ದು, ಫೈಬರ್‌ ಅಂಶ ಹೆಚ್ಚಾಗಿರುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು, ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಕಿಡ್ನಿ ಬೀನ್ಸ್ ಒದಗಿಸುತ್ತದೆ

    ರಾಜ್ಮಾ, ಅಥವಾ ಕಿಡ್ನಿ ಬೀನ್ಸ್, ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು, ತಿಳಿಯೋಣ!

    • ಮೂಳೆಗಳನ್ನು ಬಲಗೊಳಿಸುತ್ತದೆ.

    ರಾಜ್ಮಾವು ಅಗತ್ಯವಾದ ಖನಿಜಗಳು, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ಗಳಿಂದ ತುಂಬಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಆಸ್ಟಿಯೊಪೊರೋಸಿಸ್ ಅನ್ನು ತಡೆಯುತ್ತದೆ.

    • ಕ್ಯಾನ್ಸರ್ ಅನ್ನು ಕೂಡ ತಡೆಯ ಬಲ್ಲದು.!

    ರಾಜ್ಮಾದಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ತುಂಬಿದ್ದು, ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ರಾಜ್ಮಾದಲ್ಲಿ ಫ್ಲೇವನಾಯ್ಡ್‌ಗಳಿದ್ದು, ಇದು ಕ್ಯಾನ್ಸರ್ ಕೋಶಗಳ ರಚನೆಯನ್ನು ತಡೆಯುವಲ್ಲಿ ಪ್ರಯೋಜನಕಾರಿಯಾಗಿದೆ. ಅಮೇರಿಕನ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಪ್ರಕಾರ, ರಾಜ್ಮಾದಲ್ಲಿರುವ ಲಿಗ್ನಾನ್ಸ್ ಮತ್ತು ಸಪೋನಿನ್ಗಳು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ.

    • ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

    ರಾಜ್ಮಾದಲ್ಲಿರುವ ನಾರಿನಂಶವು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ರಾಜ್ಮಾದಲ್ಲಿನ ಕರಗುವ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹಾಗೇ, ಹೊಟ್ಟೆಯಲ್ಲಿ ಜೆಲ್ ತರಹದ ವಸ್ತುವನ್ನು. ರೂಪಿಸುವ ಮೂಲಕ ಉತ್ತಮ ಕೊಲೆಸ್ಟ್ರಾಲ್ , ಅನ್ನು ಹೆಚ್ಚಿಸುತ್ತದೆ.

    • ತೂಕ ಇಳಿಕೆಗೆ ಸಹಾಯಕಾರಿ.

    ರಾಜ್ಮಾದಲ್ಲಿ ಕರಗುವ ಫೈಬರ್ ಮತ್ತು ಪ್ರೋಟೀನ್ ಹೇರಳವಾಗಿದ್ದು, ಇದು ತೂಕ ಇಳಿಸುವ ಆಹಾರವಾಗಿದೆ. ಹೀಗಾಗಿ, ನಿಮ್ಮ ಡಯೆಟ್ ಫುಡ್ನಲ್ಲಿ ಕಿಡ್ನಿ ಬೀನ್ಸ್ ಅನ್ನು ಧಾರಾಳವಾಗಿ ಬಳಸಬಹುದು.

    • ರಕ್ತದಲ್ಲಿನ ಸಕ್ಕರೆ ಮಟ್ಟವನ್ನು, ಕಡಿಮೆ ಮಾಡುತ್ತದೆ.

    ರಾಜ್ಮಾ ಒಂದು ಅತ್ಯುತ್ತಮ ದ್ವಿದಳ ಧಾನ್ಯವಾಗಿದ್ದು, ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಇದು ಕರಗುವ ಫೈಬರ್‌ನ ಉತ್ತಮ ಮೂಲವಾಗಿದೆ

    ಹೀಗೆ ರಾಜ್ಮಾ ಅಥವಾ ಕಿಡ್ನಿ ಬೀನ್ಸ್, ದಿನನಿತ್ಯದ ಉಪಹಾರದಲ್ಲಿ ಸೇರಿಸುವುದರಿಂದ. ಮೇಲಿನ ಎಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

    ಇನ್ನಿತರ, ಆರೋಗ್ಯ ಕರ ಆಹಾರವನ್ನು, ತಿಳಿದುಕೊಳ್ಳಲು ನಮ foodforhealth.blog ನಲ್ಲಿ ಮಾಹಿತಿ ಪಡೆಯಿರಿ.🙏

  • ಅಲರ್ಜಿಯನ್ನು, ನಿಯಂತ್ರಿಸುತ್ತದೆ. “ಹಸಿರು ದ್ರಾಕ್ಷಿ”.!

    ಹ* ಸಿರು ದ್ರಾಕ್ಷಿ ಹಣ್ಣು, ಆಯುರ್ವೇದದಲ್ಲಿ, “ಪಾಲೋತ್ತಮ”,ಎಂದು ಕರೆಯಲಾಗುತ್ತದೆ. “ಪಾಲೋತ್ತಮ “ಎಂದರೆ ಪಾಲಗಳಲಲ್ಲೆ, ಉತ್ತಮ ಎಂದು.

    ದ್ರಾಕ್ಷಿಯು, ಬೇಸಿಗೆಯ ಉತ್ತಮ ಹಣ್ಣು. ಇದು ಮಧುರ ಮತ್ತು ಆಮ್ಲಗಳ ರುಚಿಯನ್ನು ಹೊಂದಿದೆ.edu ಶೀತವೀರ್ಯ ಗುಣಧರ್ಮವನ್ನು. ಹೊಂದಿದೆ. ಇದು ಬಿಸಿಲಿಲಿನ ಸಮಯದ ಉತ್ತಮ ಆಹಾರ.

    ಅಲರ್ಜಿ ಯನ್ನು, ಹೇಗೆ ನಿಯಂತ್ರಿಸುತ್ತದೆ ಹಸಿರು ದ್ರಾಕ್ಷಿ.

    ಹಸಿರು ದ್ರಾಕ್ಷಿ ಯಲ್ಲಿ, ವಿಟಮಿನ್ – ಎ ,(vitamin –A) ವಿಟಮಿನ್ –ಸಿ ,(vitamin –c) ವಿಟಮಿನ್ –ಡಿ, (vitamin –D) ಮತ್ತು ಪೊಟ್ಯಾಸಿಯಂ [potasium] ಕ್ಯಾಲ್ಸಿಯಂ [calsium], ಹೇರಳವಾಗಿದೆ.ಆಂಟಿಆಕ್ಸಿಡೆಂಟ್‌ಗಳು ಚರ್ಮವನ್ನು ತಾಜಾವಾಗಿಟ್ಟು, ವಯಸ್ಸಾಗುವಿಕೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತವೆ. ಹೊಟ್ಟಿನ ಸಮಸ್ಯೆಯನ್ನು ನಿವಾರಿಸಿ ಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತವೆ.

    ಇದರಲ್ಲಿ, ಆಂಟಿವೈರಸ್ (Aunty virus] ಗುಣಲಕ್ಷಣ ಹೊಂದಿದ್ದು.ಮೇಲಿನ ಎಲ್ಲಾ ಪೋಷಕಾಂಶಗಳ, ಸಹಾಯದಿಂದ, ಚರ್ಮಕ್ಕೆ, ಮತ್ತು ದೇಹದಲ್ಲಿನ ಸೂಕ್ಷ್ಮ ಭಾಗಗಳಲ್ಲಿನ ಅಲರ್ಜಿ ಸಮಸ್ಯೆಯನ್ನು ನಿವಾರಿಸುತ್ತದೆ.ಹಿಂಗೆ ಅಲರ್ಜಿಯಿಂದ,ಬಳಲುತ್ತಿರುವ ಅನೇಕ ರೋಗಿಗಳು ಹಸಿರು ದ್ರಾಕ್ಷಿ ಹಣ್ಣುಗಳನ್ನು ಸೇವಿಸುವುದರಿಂದ, ಅಲರ್ಜಿಯನ್ನು, ಕಡಿಮೆ ಮಾಡಿಕೊಳ್ಳಬಹುದು.

    ಹಸಿರು ದ್ರಾಕ್ಷಿ ಹಣ್ಣುಗಳನ್ನು, ಸೇವಿಸುವುದರಿಂದ, ಅನೇಕ ಆರೋಗ್ಯ ಲಾಭಗಳನ್ನೂ, ತಿಳಿಯೋಣ!

    • ಅಸ್ತಮಾ, ಮತ್ತುಉಸಿರಾಟದ & ತೊಂದರೆಯನ್ನು, ಕಡಿಮೆ ಮಾಡುತ್ತದೆ.
    • ವಾತ, ಪಿತ್ತ,ಮತ್ತು(&) ಕಪವನ್ನು, ಶಮನಗೊಳಿಸುತ್ತದೆ.
    • ಲಿವರ್, ಅಸ್ವಸ್ಥವಾಗಿದ್ದಾರೆ, ಅದನ್ನು ಚೇತರಿಸಿಕೊಳ್ಳಲು,ಸಹಾಯ ಮಾಡುತ್ತದೆ.
    • ದೇಹದ ಸ್ನಾಯುಗಳಿಗೆ ಬಲವನ್ನು ನೀಡುತ್ತದೆ.
    • ಮಲ ಮೂತ್ರಗಳ ವಿಸರ್ಜನೆಯನ್ನು, ಸುಗಮಗೊಳಿಸುತ್ತದೆ.
    • ವಿಟಮಿನ್ –ಸಿ (vitamin –c) ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು, ಹೆಚ್ಚಿಸುತ್ತದೆ
    • ವಿಟಮಿನ್–ಏ(vitamin–A) ಸಮೃದ್ಧವಾಗಿದೆ. ಇದರಿಂದ ಕಣ್ಣಿನ ಹಲವು ರೀತಿಯ ಸಮಸ್ಯೆಗಳನ್ನು, ನಿವಾರಿಸು ಕಣ್ಣಿನ ಆರೋಗ್ಯ ಸುಧಾರಿಸುತ್ತದೆ.

    ಇದರಿಂದ ಅನೇಕ ಆರೋಗ್ಯ ಲಾಭಗಳು ಇವೆ ಇದರಲ್ಲಿ ಗ್ಲೋ ಕೋಸು, ಮತ್ತು ಮೆಗ್ನೀಷಿಯಂ [megnisium] ಸಿಟ್ರಿಕ್ ಆಸಿಡ್ [Citrix acide] ಅಂತಾ ಹಲವಾರು ಅಂಶಗಳನ್ನು, ಹೊಂದಿದೆ.

    • ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನೀರಿನ ಅಂಶ ಹೊಂದಿರುವುದರಿಂದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಒಳ್ಳೆಯ ಆಹಾರ.

    ಹಸಿರು ದ್ರಾಕ್ಷಿ ಹಣ್ಣುಗಳನ್ನು ತಿನ್ನುವ ಮೊದಲು ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ತೊಳೆದು ತಿನ್ನುವುದು ಉತ್ತಮ.

    ಇನ್ನೂಇತರ ಆರೋಗ್ಯಕಾರ. ಆಹಾರವನ್ನು. ತಿಳಿಯಲು ನಮ್ಮ https://foodforhealth.blog./ಅಲ್ಲಿ ಮಾಹಿತಿ ಪಡೆಯಿರಿ…🙏

  • ಕಪ್ಪುದ್ರಾಕ್ಷಿ, ಎಂಬ ಮೆದುಳುರಕ್ಷಕ!.

    ಕಪ್ಪು, ದ್ರಾಕ್ಷಿ, ಹಣ್ಣು ಕೊಂಚ ಹುಳಿ ಹುಳಿ ರುಚಿ, ಮತ್ತು ಕೊಂಚ ಸಿಹಿ ರುಚಿಯನ್ನು ಹೊಂದಿದೆ.ದ್ರಾಕ್ಷಿಯಲ್ಲಿ ವಿಟಮಿನ್ ಸಿ ಇದೆ. ಇದು ಒಂದು ರೀತಿಯ ಶಕ್ತಿಯುತ ಉತ್ಕರ್ಷಣ ನಿರೋಧಕವಾಗಿದೆ, ಇದರ ಸಹಾಯದಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ ಮತ್ತು ಕೂದಲಿನ ಆರೋಗ್ಯವೂ ಸುಧಾರಿಸುತ್ತದೆ. ಕಪ್ಪು ದ್ರಾಕ್ಷಿಯಲ್ಲಿ ವಿಟಮಿನ್ ಕೆ, ವಿಟಮಿನ್ ಇ, ಫೈಬರ್, ಪೊಟ್ಯಾಸಿಯಮ್, ಫ್ಲೇವನಾಯ್ಡ್, ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಫೋಲೇಟ್ ಮುಂತಾದ ಪೋಷಕಾಂಶಗಳಿವೆ.

    ಕಪ್ಪು, ದ್ರಾಕ್ಷಿ,(black grape) ಹೇಗೆ? ಮೆದುಳು ರಕ್ಷಕ.

    ಕಪ್ಪು ದ್ರಾಕ್ಷಿ, ಒಂದು ರುಚಿಕರ ಹಣ್ಣು, ಇದು ಮೆದುಳಿನ ಕಾರ್ಯವನ್ನು,ಸುಧಾರಿಸುತ್ತದೆ.ನಿಯಮಿತವಾಗಿ ಕಪ್ಪು ದ್ರಾಕ್ಷಿ ಸೇವನೆ ಮಾಡಿದರೆ ಅದರಿಂದ ಏಕಾಗ್ರತೆ, ನೆನಪಿನ ಶಕ್ತಿ ಮತ್ತು ಮೌಖಿಕ ಮತ್ತು ಪ್ರಾದೇಶಿಕ ನೆನಪುಗಳು ಇರುವುದು. ಕಪ್ಪು ದ್ರಾಕ್ಷಿಯಲ್ಲಿ ಇರುವಂತಹ ಪಾಲಿಫೆನಾಲ್ ಗಳು ಮೈಗ್ರೇನ್, ಬುದ್ಧಿಮಾಂದ್ಯತೆ ಮತ್ತು ಅಲ್ಝೈಮರ್ ನ್ನು ನಿವಾರಣೆ ಮಾಡುವುದು.

    ಹೃದಯದ ಆರೋಗ್ಯಕ್ಕೆ, ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿಯಾಗಿದೆ. ಇದು ಮಧುಮೇಹವನ್ನು ನಿರ್ವಹಿಸಲು, ಮೆದುಳಿನ ಕ್ಷಮತೆ ಹೆಚ್ಚಿಸಲು, ಕೂದಲಿನ ಆರೋಗ್ಯಕ್ಕೆ ಮತ್ತು ಕಣ್ಣಿನ ದೃಷ್ಟಿ ಸುಧಾರಿಸಲು ತುಂಬಾ ಪ್ರಯೋಜನಕಾರಿ.

    ಕಪ್ಪು, ದ್ರಾಕ್ಷಿ, ಕೂದಲಿನ ಆರೋಗ್ಯವನ್ನು, ಕಾಪಾಡುತ್ತದೆ.

    • ಆಂಟಿಆಕ್ಸಿಡೆಂಟ್‌ಗಳು ಕಪ್ಪು ದ್ರಾಕ್ಷಿಯಲ್ಲಿವೆ. ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.ಕಪ್ಪು ದ್ರಾಕ್ಷಿಯನ್ನು ತಿನ್ನುವುದರಿಂದ ಕೂದಲು ಉದುರುವಿಕೆಯಿಂದ ಸಾಕಷ್ಟು ಪರಿಹಾರ ದೊರೆಯುತ್ತದೆ ಮತ್ತು ಕೂದಲು ಒಡೆಯುವುದನ್ನು ತಡೆಯುತ್ತದೆ.
    • ಕಪ್ಪು ದ್ರಾಕ್ಷಿಯಲ್ಲಿ ವಿಟಮಿನ್ ಇ ಮತ್ತು ಇತರ ಪೋಷಕಾಂಶಗಳು ಇರುತ್ತವೆ ಇದು ಕೂದಲಿನ ಬೇರುಗಳಿಗೆ ಪೋಷಣೆಯನ್ನು ನೀಡುತ್ತದೆ.
    • ಕಪ್ಪು ದ್ರಾಕ್ಷಿಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸುತ್ತದೆ ಮತ್ತು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಸೋಂಕನ್ನು ತಡೆಯುತ್ತದೆ.ಕಪ್ಪು ದ್ರಾಕ್ಷಿಯು ಫ್ಲೇವನಾಯ್ಡ್‌ಗಳನ್ನು ಹೊಂದಿರುತ್ತದೆ, ಇದು ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ ಮತ್ತು ಕೂದಲನ್ನ ಮೃದುಗೊಳಿಸುತ್ತದೆ.
    • ಆಹಾರದಲ್ಲಿ ಕಪ್ಪು ದ್ರಾಕ್ಷಿಯನ್ನು ಸೇರಿಸುವ ಮೂಲಕ ಅಥವಾ ನಿಮ್ಮ ಕೂದಲಿಗೆ ಅದರ ರಸವನ್ನು ಹಚ್ಚುವ ಮೂಲಕ ನೀವು ಈ ಪ್ರಯೋಜನಗಳನ್ನು ಪಡೆಯಬಹುದು.

    ಹೀಗೆ ಕಪ್ಪು ದ್ರಾಕ್ಷಿ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ.

    ಚರ್ಮವನ್ನು, ಕಾಂತಿಯುತಗೊಳಿಸುತ್ತದೆ

    • ಕಪ್ಪು ದ್ರಾಕ್ಷಿಯು ರೆಸ್ವೆರಾಟ್ರೋಲ್ ಮತ್ತು ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತದೆ. ಇದು ಫ್ರೀ ರಾಡಿಕಲ್‌ಗಳು ಚರ್ಮಕ್ಕೆ ಉಂಟುಮಾಡುವ ಹಾನಿಯನ್ನು ತಡೆಯುತ್ತದೆ, ಹೀಗಾಗಿ ಅಕಾಲಿಕ ವಯಸ್ಸಾದ ಲಕ್ಷಣಗಳು ಮತ್ತು ಚರ್ಮದ ಹಾನಿಯನ್ನುತಡೆಯುತ್ತದೆ. ಈ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುವುದಲ್ಲದೆ ಚರ್ಮದ ಹೊಳಪನ್ನು ಕಾಪಾಡಿಕೊಳ್ಳುತ್ತವೆ.

    ಕಪ್ಪು, ದ್ರಾಕ್ಷಿ ಸೇವಿಸುವುದು. ಹೇಗೆ?

    • ಕಪ್ಪು ದ್ರಾಕ್ಷಿಯನ್ನು ಸೇವಿಸಲು ಹಲವು ಮಾರ್ಗಗಳಿವೆಕಪ್ಪು ದ್ರಾಕ್ಷಿಯನ್ನು ಚೆನ್ನಾಗಿ ತೊಳೆದು ನೇರವಾಗಿ ತಿನ್ನಿ. ಇದು ಸರಳ ಮತ್ತು ನೈಸರ್ಗಿಕ ವಿಧಾನವಾಗಿದೆ.ನೀವು ಸಲಾಡ್‌ನಲ್ಲಿ ಕಪ್ಪು ದ್ರಾಕ್ಷಿಯನ್ನು ಸೇರಿಸಿದರೆ, ಅದು ಸಲಾಡ್‌ನ ರುಚಿ ಮತ್ತು ಪೋಷಣೆಯನ್ನು ಹೆಚ್ಚಿಸುತ್ತದೆ.ತಾಜಾ ಕಪ್ಪು ದ್ರಾಕ್ಷಿಯ ರಸವನ್ನು ಕುಡಿಯಿರಿ. ನೀವು ಇದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಬಹುದು.ಸ್ಮೂಥಿಗಳನ್ನು ತಯಾರಿಸಲು ಕಪ್ಪು ದ್ರಾಕ್ಷಿಯನ್ನು ಇತರ ಹಣ್ಣುಗಳೊಂದಿಗೆ ಬೆರೆಸಬಹುದು.ದ್ರಾಕ್ಷಿ ಜಾಮ್ ಕೂಡ ಮಾಡಿ ತಿನ್ನಬಹುದು.ಕಪ್ಪು ದ್ರಾಕ್ಷಿಯನ್ನು ಓಟ್ಸ್ ಮತ್ತು ಮೊಸರಿನೊಂದಿಗೆ ಸೇವಿಸುವುದು ಉತ್ತಮ.

    ಮತ್ತಷ್ಟು ಆರೋಗ್ಯಕರ, ಆಹಾರಗಳ ತಿಳಿಯಲು ನಮ್ಮ https://foodforhealth.blog./ನಲ್ಲಿ, ಮಾಹಿತಿ ಪಡೆಯಿರಿ.🙏

  • ನಿಂಬೆ ಚಹಾ (lemon tea) 🍋. ಒಂದು ಸಾದಾರಣ ಪಾನೀಯವೇ?. ಅಥವಾ ಒಂದು ಅದ್ಭುತ ಪಾನೀಯವೇ?

    Lemon tea ಅಥವಾ ನಿಂಬೆ ಚಹಾ ಎಂಬುದು ಕಪ್ಪು ಚಹಾ, ಹಸಿರು ಚಹಾ ಅಥವಾ ಕ್ಯಾಫೀನ್ ಇಲ್ಲದ ಹರ್ಬಲ್ ಚಹಾಗೆ ರುಚಿ ಮತ್ತು ವಿಟಮಿನ್ C ಗಾಗಿ ಹೊಸದಾಗಿ ಹಿಂಡಿದ ನಿಂಬೆ ರಸ ಅಥವಾ ಸಿಪ್ಪೆಯನ್ನು ಸೇರಿಸಿ ತಯಾರಿಸುವ ಪಾನೀಯವಾಗಿದೆ. ನಿಂಬೆಹಣ್ಣು ಸಿಟ್ರಸ್ ಹಣ್ಣುಗಳಲ್ಲಿ ದೊರೆಯುವ ವಿಟಮಿನ್ C ಮತ್ತು ಜೈವಸಕ್ರಿಯ ಫ್ಲಾವನಾಯ್ಡ್‌ಗಳನ್ನು ನೀಡುತ್ತದೆ, ಹಾಗೆಯೇ ಚಹಾ ಪಾಲಿಫಿನಾಲ್‌ಗಳನ್ನು (ಆಂಟಿಆಕ್ಸಿಡೆಂಟ್‌ಗಳು) ಒದಗಿಸುತ್ತದೆ ಮತ್ತು ಅದರಲ್ಲಿ ಕ್ಯಾಫೀನ್ ಇದ್ದರೆ ಸ್ವಲ್ಪ ಶಕ್ತಿಯನ್ನೂ ನೀಡುತ್ತದೆ

    ಕೆಲವರು ಇದನ್ನು ಕೇವಲ ನಿಂಬೆಯೊಂದಿಗೆ ಬೆಚ್ಚಗಿನ ನೀರಾಗಿ ತಯಾರಿಸುತ್ತಾರೆ—ಇದು ಸಾಮಾನ್ಯ ನಿಂಬೆ ನೀರಿನ ಪ್ರಯೋಜನಗಳುಗಳಾದ ದೇಹದಲ್ಲಿ ನೀರಿನ ಸಮತೋಲನ ಮತ್ತು ಆಹಾರ ಮೂಲದ ಸಿಟ್ರೇಟ್ ಸೇವನೆಯೊಂದಿಗೆ ಹೋಲುತ್ತದೆ. ರುಚಿ ಹೆಚ್ಚಿಸಲು ಮತ್ತು ಶಮನಕಾರಿ ಗುಣಗಳನ್ನು ಸೇರಿಸಲು ನೀವು ನಿಂಬೆ ಚಹಾದಲ್ಲಿ ಶುಂಠಿ, ಪುದೀನಾ ಅಥವಾ ಸ್ವಲ್ಪ ಜೇನುತುಪ್ಪವನ್ನು ಸೇರಿಸಬಹುದು. ಅದರ ಸಹಜ ಆಮ್ಲೀಯತೆಯ ಕಾರಣದಿಂದ, ಹಲ್ಲಿನ ಮೇಲ್ತುದಿಯನ್ನು ರಕ್ಷಿಸಲು ಇದನ್ನು ಕುಡಿದ ನಂತರ ಶುದ್ಧ ನೀರಿನಿಂದ ಬಾಯಿ ಮುಕ್ಕಳಿಸುವುದು ಉತ್ತಮ.

    ನಿಂಬೆ ಚಹಾದ ಹಲವು ಆರೋಗ್ಯ ಪ್ರಯೋಜನಗಳು.

    • ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನುಹೆಚ್ಚಿಸುತ್ತದೆ: ನಿಂಬೆಯಿಂದ ದೊರೆಯುವ ವಿಟಮಿನ್ C ಸಾಮಾನ್ಯ ರೋಗನಿರೋಧಕ ಕಾರ್ಯಕ್ಕೆ ಬೆಂಬಲ ನೀಡುತ್ತದೆ. ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿರುವ ಚಹಾದೊಂದಿಗೆ ಸೇರಿದಾಗ, ನಿಂಬೆ ಸಮತೋಲನಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಭಾಗವಾಗಿ ರೋಗನಿರೋಧಕ ಬೆಂಬಲ ನೀಡುತ್ತದೆ.
    • ಜೀರ್ಣಕ್ರಿಯೆಗೆ ಸಹಯಾಕವಾಗುತ್ತದೆ:ಬೆಚ್ಚಗಿನ ದ್ರವಗಳು ಹೊಟ್ಟೆಯ ಚಲನೆಯನ್ನು ಉತ್ತೇಜಿಸಬಹುದು; ನಿಂಬೆಯ ಮೃದುವಾದ ಆಮ್ಲೀಯತೆ ಭಾರಿ ಊಟದ ನಂತರ ಜೀರ್ಣಕ್ರಿಯೆಗೆ ಸಹಾಯ ಮಾಡಬಹುದು. ಶುಂಠಿ ಅಥವಾ ಪುದೀನಾ ಸೇರಿಸಿದರೆ ಅನಿಲ ಅಥವಾ ಹೊಟ್ಟೆ ಭಾರವೂ ಕಡಿಮೆಯಾಗಬಹುದು.
    • ತೂಕ ಇಳಿಕೆಗೆ ಸಹಾಯವಾಗುತ್ತದೆ;ಹೆಚ್ಚು ಕ್ಯಾಲೊರಿಯ ಪಾನೀಯಗಳ ಬದಲಿಗೆ ಸಕ್ಕರೆರಹಿತ ನಿಂಬೆ ಚಹಾವನ್ನು ಸೇವಿಸುವುದು ಆರೋಗ್ಯಕರ ತೂಕ ಯೋಜನೆಯ ಭಾಗವಾಗಿ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚಹಾದಲ್ಲಿರುವ ಪಾಲಿಫಿನಾಲ್‌ಗಳು ಆಹಾರ ಮತ್ತು ಚಟುವಟಿಕೆಯೊಂದಿಗೆ ಸೇರಿ ಚಯಾಪಚಯ ಆರೋಗ್ಯಕ್ಕೆ ಬೆಂಬಲ ನೀಡಬಹುದು—ನಿಂಬೆ ಚಹಾದ ಪ್ರಯೋಜನಗಳನ್ನು ಅಭ್ಯಾಸದ ಆಧಾರವಾಗಿ ಬಳಸಿರಿ, “ಕೊಬ್ಬು ಕರಗಿಸುವ” ಮಂತ್ರವಾಗಿ ಅಲ್ಲ.
    • ಕಾಂತಿಯೂತ , ತ್ವಚೆಯನ್ನು ನೀಡುತ್ತದೆ:ಚಹಾ ಮತ್ತು ಸಿಟ್ರಸ್ ಹಣ್ಣುಗಳುಗಳಿಂದ ದೊರೆಯುವ ದೇಹದ ನೀರಿನ ಸಮತೋಲನ ಹಾಗೂ ಆಂಟಿಆಕ್ಸಿಡೆಂಟ್‌ಗಳು ದೈನಂದಿನ ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡಬಹುದು.
    • ಹೃದಯ ಸಂಬಂಧಿಕಾಯಿಲೆಗಳಿಂದ ದೂರವಿರಿಸುತ್ತದೆ:ಜನಸಂಖ್ಯಾ ಅಧ್ಯಯನಗಳು ನಿಯಮಿತ ಚಹಾ ಸೇವನೆಯು ಸಮತೋಲನಿತ ಆಹಾರ ಮತ್ತು ಸಕ್ರಿಯ ಜೀವನಶೈಲಿಯ ಭಾಗವಾಗಿ ಹೃದಯ-ರಕ್ತನಾಳಗಳ ಆರೋಗ್ಯಕ್ಕೆ ಬೆಂಬಲ ನೀಡಬಹುದು ಎಂದು ಸೂಚಿಸುತ್ತವೆ; ನಿಂಬೆ ರುಚಿ ಮತ್ತು ವಿಟಮಿನ್ C ಅನ್ನು ಹೆಚ್ಚಿಸುವುದರಿಂದ ಈ ಅಭ್ಯಾಸವನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಹಾಯವಾಗುತ್ತದೆ.
    • ದೇಹಕ್ಕೆಅಗತ್ಯವಿರುವಕಬ್ಬಿಣಾಂಶವನ್ನೂ, ಒದಗಿಸುತ್ತದೆ:NIH ಉಲ್ಲೇಖಿಸಿರುವ ಸಂಶೋಧನೆಯ ಪ್ರಕಾರ, ವಿಟಮಿನ್ C ಅನ್ನು ಊಟಗಳ ಮಧ್ಯದಲ್ಲಿ ಸೇವಿಸಿದಾಗ ನಾನ್-ಹೀಮ್ ಕಬ್ಬಿಣದ ಹೀರಿಕೆಯನ್ನು ಹೆಚ್ಚಿಸುತ್ತದೆ. ನಿಂಬೆ ಚಹಾವನ್ನು ಊಟಗಳ ಮಧ್ಯದಲ್ಲಿ ತೆಗೆದುಕೊಂಡಾಗ ವಿಟಮಿನ್ C ನಾನ್-ಹೀಮ್ ಕಬ್ಬಿಣದ ಹೀರಿಕೆಯನ್ನು ಹೆಚ್ಚಿಸುತ್ತದೆ. ಆದರೆ ಕಬ್ಬಿಣಯುಕ್ತ ಊಟದೊಂದಿಗೆ ಚಹಾ ಕುಡಿದರೆ ಅದರಲ್ಲಿರುವ ಟ್ಯಾನಿನ್‌ಗಳು ಕಬ್ಬಿಣದ ಹೀರಿಕೆಯನ್ನು ತಡೆಯಬಹುದು—ಆದ್ದರಿಂದ ಸರಿಯಾದ ಸಮಯದಲ್ಲಿ ಸೇವಿಸುವುದರಿಂದ ಈ ನಿಂಬೆ ಚಹಾ ಪ್ರಯೋಜನ ಉಳಿಯುತ್ತದೆ.
    • ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ಕರಗಿಸುವ ಕಾರ್ಯವನ್ನು ನಿರ್ವಹಿಸುತ್ತದೆ:

    ನಿಂಬೆಯಲ್ಲಿರುವ ಸಹಜ ಸಿಟ್ರೇಟ್, ಸಾಕಷ್ಟು ನೀರಿನ ಸೇವನೆಯೊಂದಿಗೆ ಸೇರಿ ಕೆಲವು ವಿಧದ ಕ್ಯಾಲ್ಸಿಯಮ್ ಆಕ್ಸಲೇಟ್ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು (ಇದು ನಿಂಬೆ ನೀರಿನ ಪ್ರಯೋಜನಗಳಲ್ಲಿಯೂ ಕಂಡುಬರುವ ಲಾಭ). ದೇಹದಲ್ಲಿ ನೀರಿನ ಸಮತೋಲನವೇ ಮುಖ್ಯ.

    ಇ ರೀತಿ ಹಲವು ಆರೋಗ್ಯ ಲಾಭಗಳನ್ನು (lemon tea) 🍋 ದೇಹಕ್ಕೆ ಬೇಕಾದ ಹಲವು ಪೋಷಕಾಂಶಗಳನ್ನು ಒದಗಿಸುತ್ತದೆ.

    ನಿಂಬೆ,ಚಹಾ ಮಾಡುವ ವಿಧಾನ:

    ನಿಂಬೆ,ಚಹಾ( lemon tea ☕) ತಯಾರಿಸುವುದು tumba ಸುಲಬ. ಉತ್ತಮ ಗುಣಮಟ್ಟದ. ಚಹಾ ಪುಡಿಯನ್ನು, ತೆಗೆದುಕೊಂಡು. ನೀರನ್ನು ಬಿಸಿ ಮಾಡಿ, ಅದೇ ನೀರಿನೊಳಗೆ, ರುಚಿಗೆ ತಕ್ಕಷ್ಟು ಸಕ್ಕರೆ (sugar)ಹಾಕಿ ಅಥವಾ ಬೆಲ್ಲವನ್ನು,(jigger) ಆದರೆ ಬೆಲ್ಲ , ತುಂಬ ಒಳ್ಳೆಯದು , ಬೇಕಾದರೆ ಸ್ವಲ್ಪ ಹಾಲನ್ನು, ಸೇರಿಸಿ ಕನಿಷ್ಠ, 5ರಿಂದ 6ನಿಮಿಷಗಳಷ್ಟು, ಚೆನ್ನಗಿ, ಕುದಸಬೇಕು.ಅದರೊಳಗೆ,ಒಂದರಡೆ ನಿಂಬೆ ತುಂಡುಗಳನ್ನು, ಹಾಕಿ ಬೇಯಿಸಿದರೆ, ತಾಜಾ (lemon tea) nimbe ಚಹಾ ರೆಡಿ. ಅದಕ್ಕೆ ಸ್ವಲ್ಪ ಪುದೀನಾ ಸೇರಿಸಿ ಸೇವಿಸುವ ರುಚಿಯನ್ನು ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ.

    ಆರೋಗ್ಯಕರ. ಆಹಾರಗಳ ತಿಳಿಯಲು ನಮ್ಮ https://foodforhealth.blog/ ಚಾನೆಲ್ ನಲ್ಲಿ ಮಾಹಿತಿ ಪಡೆಯಿರಿ.🙏

  • ಪಾಲಕ್ ಸೊಪ್ಪು, ಒಂದು ಆರೋಗ್ಯಕರ ಆಹಾರ!

    ಪಾಲಕ್ ಸೊಪ್ಪು,[spinach] ಪ್ರತಿಯೊಬ್ಬರಿಗೂ. ಗೊತ್ತಿರುವ ಸೊಪ್ಪಾಗಿದೆ. ದೇಹವೂ ಆರೋಗ್ಯವಾಗಿರಲು. ಹಣ್ಣು, ತರಕಾರಿಗಳು ತುಂಬಾ ಮುಖ್ಯ, ಅದರಲ್ಲೂ ಹಸಿ ಸೊಪ್ಪುಗಳು ದೇಹಕ್ಕೆ ಬೇಕಾದ ಪೋಷಕಾಂಶಗಳು ಹೆಚ್ಚಾಗಿ ಸಿಗುತ್ತವೆ.

    ಪಾಲಕ್ ಸೊಪ್ಪು ,[spinach] ನಲ್ಲಿರುವ ಅರೋಗ್ಯಕರ. ಅಂಶಗಳು

    • ಐರನ್{iron}
    • ವಿಟಮಿನ್–a
    • ಕ್ಯಾಲ್ಸಿಯಂ{calsium}& ಮೆಗ್ನೀಷಿಯಂ
    • ಫೈಬರ್{fiber}
    • ರೋಗನೀರೊದಕ ಶಕ್ತಿ ಹೆಚ್ಚಿಸುವ ಗುಣ.

    ಪಾಲಕ್ ಸೊಪ್ಪು, ತಿನ್ನುವುದರಿಂದ, ದೇಹಕ್ಕೆ ದೊರೆಯುವ ಪ್ರಯೋಜನಗಳು.

    • ರಕ್ತಹೀನತೆ(ಅನಿಮಿಯಾ) ನಿವಾರಣೆಗೆ ಸಹಾಯ ಮಾಡುತ್ತದೆ. ಐರನ್ ಅಂಶವೀರದರಿಂದ ರಕ್ತ ಹೀನತೆಯನ್ನು ನಿವಾರಿಸುತ್ತದೆ
    • ವಿಟಮಿನ್ ಎ ಇರವುದರಿಂದ “ಕಣ್ಣಿನ ದೃಷ್ಟಿಯನ್ನು” ಬಲಪಡಿಸುತ್ತದೆ.
    • ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
    • ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
    • ಚರ್ಮದ ಒಳಪು, ಮತ್ತು ತಾಜಾತನವನ್ನು ಹೆಚ್ಚಿಸುತ್ತದೆ.
    • ದೇಹದ ವಿಷಕಾರಿ ಅಂಶಗಳನ್ನು ತೆಗೆದು ಹಾಕತ್ತದೆ.
    • ಪಾಲಕ್ ಸೊಪ್ಪಿನಲ್ಲಿರುವ ನಾರಿನಂಶ ಜೀರ್ಣಕ್ರಿಯೆಯನ್ನು ಸುಧಾರಿಸಿ. ಮಲಬದ್ಧತೆ ನಿವಾರಿಸುತ್ತದೆ.

    ಪಾಲಕ್ ಸೊಪ್ಪು , ಭಾರತದಲ್ಲಿ ಹೇರಳವಾಗಿ ಸಿಗುವ ಒಂದು ಸೊಪ್ಪಾಗಿದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ, ಮೇಲಿನ ಎಲ್ಲಾ ಆರೋಗ್ಯ ಲಾಭಗಳನ್ನು ಪಡೆಯಬಹುದಾಗಿದೆ. ಆದ್ದರಿಂದ ದೈನಂದಿನ ಆಹಾರ ಶೈಲಿಯಲ್ಲಿ ಪಲಾಕ್ ಸೇರಿಸುವುದು ಉತ್ತಮವಾಗಿದೆ.

  • ಮೊಟ್ಟೆಯ, ಅದ್ಭುತ ಆರೋಗ್ಯಕರ ,ಲಾಭ.

    ಪ್ರಕೃತಿ ಮಾತೆಯ ಮೂಲ ಸೂಪರ್‌ಫುಡ್ – ಮೊಟ್ಟೆಗಳು ಪ್ರಾಚೀನ ಕಾಲದಿಂದಲೂ ನಮ್ಮ ಆಹಾರಕ್ರಮದ ಭಾಗವಾಗಿದೆ. ಆದರೆ ಈಗ ಮಾತ್ರ ಅವು ಪ್ಯಾಕ್ ಮಾಡುವ ಪೌಷ್ಟಿಕಾಂಶದ ಅದ್ಭುತಗಳ ಪೂರ್ಣ ಪ್ರಮಾಣವನ್ನು ಮತ್ತು ಶಾಶ್ವತ ಆರೋಗ್ಯ ಪ್ರಯೋಜನಗಳನ್ನು ಉತ್ತೇಜಿಸುವಲ್ಲಿ ಅವು ಎಷ್ಟು ಪ್ರಯೋಜನಕಾರಿ ಎಂಬುದನ್ನು ನಾವು ಕಲಿಯುತ್ತಿದ್ದೇವೆ. ವಿಟಮಿನ್ ಎ, ಡಿ ಮತ್ತು ಇ, ಫೋಲೇಟ್, ಕಬ್ಬಿಣ ಮತ್ತು ಸೆಲೆನಿಯಮ್ ಸೇರಿದಂತೆ 17 ವಿಭಿನ್ನ ಜೀವಸತ್ವಗಳು ಮತ್ತು ಪೋಷಕಾಂಶಗಳಿಂದ ತುಂಬಿದ್ದು, ಪ್ರಮುಖ ಉತ್ಕರ್ಷಣ ನಿರೋಧಕಗಳು, ಪ್ರೋಟೀನ್ ಮತ್ತು ಒಮೆಗಾ-3 ಗಳೊಂದಿಗೆ, ಪ್ರತಿದಿನ ನೀವು ಉತ್ತಮವಾಗಿರಲು ಸಹಾಯ ಮಾಡಲು ಆರೋಗ್ಯಕರ ಆಹಾರದ ಭಾಗವಾಗಿ ಅಗತ್ಯವಿದೆ.

    ಮೊಟ್ಟೆಗಳು, ನಮಗೆ ಹೇಗೆ ಒಳ್ಳೆಯದು?

    ಹೌದು. ನಿಮ್ಮ ದೈನಂದಿನ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುವ ವಿಷಯಕ್ಕೆ ಬಂದಾಗ, ಮೊಟ್ಟೆಗಳನ್ನು ಸೋಲಿಸುವುದು ತುಂಬಾ ಕಷ್ಟ. ಮೊಟ್ಟೆಗಳು ಗುಣಮಟ್ಟದ ಪ್ರೋಟೀನ್‌ನ ಅಮೂಲ್ಯ ಮೂಲವನ್ನು ಒದಗಿಸುತ್ತವೆ – ಜೊತೆಗೆ 12 ಅಗತ್ಯ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುತ್ತವೆ, ಜೊತೆಗೆ ಅಗತ್ಯವಾದ ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಸಹ ಒಳಗೊಂಡಿರುತ್ತವೆ. ಮೊಟ್ಟೆಗಳಲ್ಲಿರುವ ಉತ್ತಮ ಗುಣಮಟ್ಟದ ಪ್ರೋಟೀನ್‌ನ 60% ಮೊಟ್ಟೆಯ ಬಿಳಿ ಭಾಗದಲ್ಲಿ ಕಂಡುಬರುತ್ತದೆ, ಆದರೆ ಹಳದಿ ಲೋಳೆಯು ಉಳಿದವುಗಳನ್ನು ಪ್ರಮುಖ ಆರೋಗ್ಯಕರ ಕೊಬ್ಬುಗಳು, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳೊಂದಿಗೆ ಹೊಂದಿರುತ್ತದೆ – ಇವೆಲ್ಲವೂ ನಿಮ್ಮ ದೈನಂದಿನ ಪೌಷ್ಟಿಕಾಂಶದ ಅಗತ್ಯಗಳಿಗೆ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತವೆ.

    1. ಮೊಟ್ಟೆಗಳು ಪ್ರೋಟೀನ್ ನ, ಸಮೃದ್ಧ, ಮೂಲ.

    ಮೊಟ್ಟೆಯು ಅತ್ಯುತ್ತಮ ಗುಣಮಟ್ಟದ ಪ್ರೋಟೀನ್, ವಿಟಮಿನ್‌ಗಳು (ಡಿ, ಬಿ12) ಮತ್ತು ಖನಿಜಾಂಶಗಳ (ಐರನ್, ಕೋಲಿನ್) ಸಮೃದ್ಧ ಮೂಲವಾಗಿದೆ. ದಿನಕ್ಕೊಂದು ಬೇಯಿಸಿದ ಮೊಟ್ಟೆ ತಿನ್ನುವುದರಿಂದ ಸ್ನಾಯುಗಳ ಬೆಳವಣಿಗೆ, ಕಣ್ಣಿನ ಆರೋಗ್ಯ, ತೂಕ ನಿರ್ವಹಣೆ ಮತ್ತು ಮೆದುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು ದೇಹಕ್ಕೆ ಅಗತ್ಯವಾದ ಅಮೈನೋ ಆಮ್ಲಗಳನ್ನು, ದೇಹಕ್ಕೆ ಒದಗಿಸುತ್ತವೆ

    ಮೊಟ್ಟೆಗಳು ಅತ್ಯುತ್ತಮ ಗುಣಮಟ್ಟದ ಪ್ರೋಟೀನ್ ಅನ್ನು ಒದಗಿಸುತ್ತವೆ.

    • ಮೊಟ್ಟೆಗಳು ಅತ್ಯುನ್ನತ ಗುಣಮಟ್ಟದ ಪ್ರೋಟೀನ್ ಅನ್ನು ಹೊಂದಿರುತ್ತವೆ ಮತ್ತು ಈ ಪ್ರಮುಖ ಪೋಷಕಾಂಶದ ಅಮೂಲ್ಯ ಮೂಲವಾಗಿದೆ. ಪ್ರೋಟೀನ್ಗಳು ಜೀವನದ ಕಟ್ಟಡ ಸಾಮಗ್ರಿಗಳಾಗಿವೆ, ಸ್ನಾಯುಗಳು ಮತ್ತು ಅಂಗಾಂಶಗಳ ಶಕ್ತಿ ಮತ್ತು ದುರಸ್ತಿಗೆ ಅವಶ್ಯಕವಾಗಿದೆ – ಒಂದು ಮೊಟ್ಟೆಯಲ್ಲಿ ಸುಮಾರು 6.3 ಗ್ರಾಂ ಪ್ರೋಟೀನ್ ಇರುತ್ತದೆ. ಮೊಟ್ಟೆಯಲ್ಲಿರುವ ಪ್ರೋಟೀನ್‌ನ ಪ್ರಬಲ ಪ್ರಯೋಜನವೆಂದರೆ ಮೊಟ್ಟೆಗಳು ಎಲ್ಲಾ ಒಂಬತ್ತು ಅಗತ್ಯ ಅಮೈನೋ ಆಮ್ಲಗಳನ್ನು ಹೊಂದಿರುತ್ತವೆ – ಸಾಕಷ್ಟು ಪ್ರಮಾಣದಲ್ಲಿ – ಪರಿಣಾಮಕಾರಿ ಸ್ನಾಯುಗಳ ಬೆಳವಣಿಗೆ, ಚೇತರಿಕೆ ಮತ್ತು ನಿರ್ವಹಣೆಯನ್ನು ಬೆಂಬಲಿಸಲು. ಇತರ ಕೆಲವು ಆಹಾರಗಳು ಮೊಟ್ಟೆಗಳಿಗಿಂತ ಪ್ರಮಾಣಾನುಗುಣವಾಗಿ ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿದ್ದರೂ – ಮೊಟ್ಟೆಗಳಲ್ಲಿನ ಪ್ರೋಟೀನ್‌ನ ಉತ್ತಮ-ಗುಣಮಟ್ಟದ ಮತ್ತು ಜೈವಿಕ ಲಭ್ಯತೆಯು ಅವುಗಳನ್ನು ಆಹಾರದಲ್ಲಿ ನಿಜವಾಗಿಯೂ ಅಮೂಲ್ಯವಾದ ಮೂಲವನ್ನಾಗಿ ಮಾಡುತ್ತದೆ.

    .

    ಮೊಟ್ಟೆಗಳು “ಉತ್ತಮ” ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತವೆ.

    • ಇತ್ತೀಚಿನ ಸಂಶೋಧನೆಗಳು ಮೊಟ್ಟೆಗಳನ್ನು ತಿನ್ನುವುದರಿಂದ ಹೃದಯ ಕಾಯಿಲೆಯ ಅಪಾಯ ಹೆಚ್ಚಾಗುವುದಿಲ್ಲ ಎಂದು ತೋರಿಸುತ್ತವೆ ಮತ್ತು ಇದಕ್ಕೆ ಒಂದು ಕಾರಣವೆಂದರೆ ಅವು ರಕ್ತದ ಕೊಲೆಸ್ಟ್ರಾಲ್ ಮಟ್ಟಗಳ ಮೇಲೆ ಕಡಿಮೆ ಅಥವಾ ಯಾವುದೇ ಪರಿಣಾಮ ಬೀರುವುದಿಲ್ಲ. ಮೊಟ್ಟೆಗಳು ರಕ್ತದ ಕೊಲೆಸ್ಟ್ರಾಲ್ ಮೇಲೆ ಪರಿಣಾಮ ಬೀರಿದಾಗ (ಕೆಲವು ವ್ಯಕ್ತಿಗಳು ಇತರರಿಗಿಂತ ಹೆಚ್ಚು ಪ್ರತಿಕ್ರಿಯಿಸುತ್ತಾರೆ), ಪರಿಣಾಮವು ಚಿಕ್ಕದಾಗಿರುತ್ತದೆ ಮತ್ತು ಉತ್ತಮ ರೀತಿಯ HDL ಕೊಲೆಸ್ಟ್ರಾಲ್ ಮತ್ತು ಕೆಟ್ಟ ರೀತಿಯ LDL ಕೊಲೆಸ್ಟ್ರಾಲ್ ಎರಡರಲ್ಲೂ ಹೆಚ್ಚಳ ಕಂಡುಬರುತ್ತದೆ, ಅಂದರೆ ಎರಡರ ನಡುವಿನ ಅನುಪಾತವನ್ನು ಕಾಪಾಡಿಕೊಳ್ಳಲಾಗುತ್ತದೆ. ಇದು ಹೃದಯ ಕಾಯಿಲೆಯ ಅಪಾಯದಲ್ಲಿ ಯಾವುದೇ ಬದಲಾವಣೆಯನ್ನು ಉಂಟುಮಾಡುವುದಿಲ್ಲ.ಮತ್ತೊಂದೆಡೆ, ಸ್ಯಾಚುರೇಟೆಡ್ ಕೊಬ್ಬು ಮತ್ತು ಟ್ರಾನ್ಸ್-ಕೊಬ್ಬುಗಳು ಅಧಿಕವಾಗಿರುವ ಊಟಗಳು, ಉದಾಹರಣೆಗೆ ಕರಿದ ಟೇಕ್‌ಅವೇ ಆಹಾರಗಳು, ವಾಣಿಜ್ಯ ಪೈಗಳು, ಪೇಸ್ಟ್ರಿಗಳು ಮತ್ತು ಬಿಸ್ಕತ್ತುಗಳು, LDL ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಅಪರಾಧಿಗಳಾಗಿವೆ ಮತ್ತು ಪರಿಣಾಮವಾಗಿ, ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತವೆ. ವಾಸ್ತವವಾಗಿ ಇತ್ತೀಚಿನ ಆಸ್ಟ್ರೇಲಿಯಾದ ಸಂಶೋಧನೆಯು ಆರೋಗ್ಯಕರ, ಕಡಿಮೆ ಸ್ಯಾಚುರೇಟೆಡ್ ಕೊಬ್ಬಿನ ಆಹಾರದ ಭಾಗವಾಗಿ ದಿನಕ್ಕೆ 2 ಮೊಟ್ಟೆಗಳನ್ನು ಸೇರಿಸುವುದರಿಂದ ದೇಹದಲ್ಲಿ “ಕೆಟ್ಟ” LDL ಕೊಲೆಸ್ಟ್ರಾಲ್ ಮಟ್ಟಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ ಎಂದು ಕಂಡುಹಿಡಿದಿದೆ. ಈ ರೀತಿಯ ತಿನ್ನುವ ಮಾದರಿಯು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸುವ ಪದಾರ್ಥಗಳಾದ ಅಪೋಲಿಪೋಪ್ರೋಟೀನ್ ಬಿ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ. ಮತ್ತೊಂದೆಡೆ, ಸ್ಯಾಚುರೇಟೆಡ್ ಕೊಬ್ಬು ವಿರುದ್ಧ ಪರಿಣಾಮವನ್ನು ಬೀರುತ್ತದೆ ಎಂದು ಕಂಡುಬಂದಿದೆ, ಇದು ಗಮನಹರಿಸಬೇಕಾದ ಕ್ಷೇತ್ರವಾಗಿದೆ ಎಂದು ದೃಢಪಡಿಸುತ್ತದೆ.

    ಆರೋಗ್ಯಕರ ವಯಸ್ಸಿಗೆ ಪೋಷಕಾಂಶಗಳ ಸೇವನೆಯನ್ನು ಹೆಚ್ಚಿಸಲು ಮೊಟ್ಟೆಗಳು ಸಹಾಯ ಮಾಡುತ್ತವೆ.

    • ಮೊಟ್ಟೆಗಳು ಅತ್ಯುತ್ತಮ ಗುಣಮಟ್ಟದ ಪ್ರೋಟೀನ್ ಮತ್ತು ಅಗತ್ಯ ಜೀವಸತ್ವಗಳು ಮತ್ತು ಖನಿಜಗಳ ಪ್ರವೇಶಿಸಬಹುದಾದ, ಆರ್ಥಿಕ ಮತ್ತು ಸುಲಭವಾಗಿ ಜೀರ್ಣವಾಗುವ ಮೂಲವಾಗಿದೆ – ಇದು ವಯಸ್ಸಾದ ಆಸ್ಟ್ರೇಲಿಯನ್ನರಿಗೆ ಸೂಕ್ತವಾದ ಆಹಾರ ಸೇರ್ಪಡೆಯಾಗಿದೆ.ತಯಾರಿಸಲು ಸುಲಭವಾದ ಮೊಟ್ಟೆಗಳು ವಯಸ್ಸಾದವರಿಗೆ ಪೋಷಕಾಂಶಗಳ ಸೇವನೆಯನ್ನು ಹೆಚ್ಚಿಸಲು ಸರಳವಾದ ಮಾರ್ಗವಾಗಿದ್ದು, ಇದು ವ್ಯಾಪಕ ಶ್ರೇಣಿಯ ಕೊರತೆಗಳು ಮತ್ತು ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಅವುಗಳು ಸ್ನಾಯುಗಳ ನಿರಂತರ ಬೆಂಬಲಕ್ಕೆ ಮುಖ್ಯವಾದ ಅಮೈನೋ ಆಮ್ಲವಾದ ಲ್ಯೂಸಿನ್ ಅನ್ನು ಗಮನಾರ್ಹ ಪ್ರಮಾಣದಲ್ಲಿ ಒಳಗೊಂಡಿರುತ್ತವೆ, ಜೊತೆಗೆ ವಿಟಮಿನ್ ಡಿ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳು ಸೇರಿದಂತೆ ಇತರ ಪ್ರಮುಖ ಪೋಷಕಾಂಶಗಳು, ಜೊತೆಗೆ ಮೆದುಳಿನ ಕಾರ್ಯಕ್ಕೆ ಮುಖ್ಯವಾದ ಕೋಲೀನ್ ಎಂಬ ಸ್ವಲ್ಪ ತಿಳಿದಿರುವ ಪೋಷಕಾಂಶವನ್ನು ಸಹ ಒಳಗೊಂಡಿರುತ್ತವೆ

    ಮೊಟ್ಟೆಗಳು ಮಾನಸಿಕ ಆರೋಗ್ಯವನ್ನು ಬೆಂಬಲಿಸುತ್ತವೆ

    • ಒತ್ತಡ ಕಡಿತ ಮತ್ತು ಉತ್ತಮ ಮಾನಸಿಕ ಆರೋಗ್ಯ ಅಭ್ಯಾಸಗಳನ್ನು ಬೆಂಬಲಿಸುವಲ್ಲಿ ಸಮತೋಲಿತ ಆಹಾರವು ಬಹಳ ದೂರ ಹೋಗಬಹುದು – ರೋಗಲಕ್ಷಣಗಳ ಪ್ರಭಾವವನ್ನು ಕಡಿಮೆ ಮಾಡುವುದು ಮತ್ತು ಹೆಚ್ಚಿನ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುವುದು ಎರಡಕ್ಕೂ. ಮತ್ತು ಮೊಟ್ಟೆಗಳ ಅದ್ಭುತ ಪ್ರಯೋಜನಗಳ ವಿಷಯಕ್ಕೆ ಬಂದರೆ – ವಿಟಮಿನ್ ಬಿ 2, ಬಿ 12, ಕೋಲೀನ್, ಕಬ್ಬಿಣ ಮತ್ತು ಟ್ರಿಪ್ಟೊಫಾನ್ ಸಂಯೋಜನೆಯು ಆತಂಕದ ಅಪಾಯವನ್ನು ಕಡಿಮೆ ಮಾಡಲು, ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ನೈಸರ್ಗಿಕವಾಗಿ ನಿದ್ರೆಗೆ ಸಹಾಯ ಮಾಡುತ್ತದೆ.

    ಮೊಟ್ಟೆಗಳು ಒಮೆಗಾ-3 ಗಳ ಉತ್ತಮ ಮೂಲವಾಗಿದೆ.

    ಒಮೆಗಾ-3ಗಳು ವಿಶೇಷ ರೀತಿಯ ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳಾಗಿವೆ ಮತ್ತು ಅವು ನಿಮ್ಮ ಜೀವಕೋಶ ಪೊರೆಗಳು ಕಾರ್ಯನಿರ್ವಹಿಸುವ ರೀತಿಯಲ್ಲಿ ಪ್ರಮುಖ ಪಾತ್ರ ವಹಿಸುವ “ಅಗತ್ಯ ಕೊಬ್ಬುಗಳ” ಕುಟುಂಬವಾಗಿದೆ; ಹೃದಯ ಮತ್ತು ಮೆದುಳಿನ ಆರೋಗ್ಯದಿಂದ ಹಿಡಿದು ನಿಮ್ಮ ಕಣ್ಣುಗಳನ್ನು ರಕ್ಷಿಸುವವರೆಗೆ. ಮತ್ತು ನಿಮ್ಮ ದೇಹವು ಸೀಮಿತ ಪ್ರಮಾಣದ ಒಮೆಗಾ-3ಗಳನ್ನು ಸ್ವಂತವಾಗಿ ಉತ್ಪಾದಿಸುವುದರಿಂದ, ವಿವಿಧ ಆಹಾರ ಮೂಲಗಳ ಮೂಲಕ ಅವುಗಳನ್ನು ಸಕ್ರಿಯವಾಗಿ ಸೇವಿಸುವುದು ಪ್ರಯೋಜನಕಾರಿಯಾಗಿದೆ.ಮೊಟ್ಟೆಗಳು ಪ್ರಕೃತಿ ಮಾತೆಯ ಅದ್ಭುತ ಮತ್ತು ಖಾದ್ಯ ಒಮೆಗಾ-3 ಕೊಬ್ಬಿನಾಮ್ಲಗಳ ಮೂಲವಾಗಿದ್ದು, ಪ್ರತಿ ಸೇವೆಗೆ ಸರಾಸರಿ 180 ಮಿಗ್ರಾಂ (2 ಮೊಟ್ಟೆಗಳು) ನೀಡುತ್ತದೆ. ಈ ಪ್ರಮಾಣದಲ್ಲಿ, 114 ಮಿಗ್ರಾಂ ಒಮೆಗಾ-3 ಕೊಬ್ಬಿನಾಮ್ಲದ ದೀರ್ಘ ಸರಪಳಿ ವಿಧವಾಗಿದೆ – ಇದು ವಯಸ್ಕರಿಗೆ ಅಪೇಕ್ಷಿತ ಸೇವನೆಯ 71-127% ರ ನಡುವೆ ಪ್ರತಿನಿಧಿಸುತ್ತದೆ.ಎಣ್ಣೆಯುಕ್ತ ಮೀನು ಒಮೆಗಾ-3 ಗಳ ಅತ್ಯಂತ ಪ್ರಸಿದ್ಧ ಮೂಲಗಳಲ್ಲಿ ಒಂದಾಗಿದೆ, ಆದಾಗ್ಯೂ, ಮೀನುಗಳನ್ನು ತಪ್ಪಿಸುವ ಅಥವಾ ತಿನ್ನಲು ಸಾಧ್ಯವಾಗದ ಜನರಿಗೆ, ಮೊಟ್ಟೆಗಳು ಈ ಆರೋಗ್ಯಕರ ಕೊಬ್ಬಿನ ವಿಶೇಷವಾಗಿ ಉಪಯುಕ್ತ ಮೂಲವಾಗಿದೆ.

    ಮೊಟ್ಟೆಗಳು ಕೋಲೀನ್‌ನ ಅತ್ಯುತ್ತಮ ಆಹಾರ ಮೂಲಗಳಲ್ಲಿ ಸೇರಿವೆ.

    ಕೋಲೀನ್ ಯಕೃತ್ತಿನಲ್ಲಿ ಉತ್ಪತ್ತಿಯಾಗುವ ಒಂದು ಪ್ರಮುಖ ಪೋಷಕಾಂಶವಾಗಿದೆ, ಆದಾಗ್ಯೂ, ಹೆಚ್ಚಿನ ಜನರು ದೈನಂದಿನ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ಕೋಲೀನ್ ಅನ್ನು ಉತ್ಪಾದಿಸುವುದಿಲ್ಲವಾದ್ದರಿಂದ, ನೀವು ಸೇವಿಸುವ ಆಹಾರದ ಮೂಲಕವೂ ಇದನ್ನು ಸೇವಿಸಬೇಕಾಗುತ್ತದೆ.ಬಿ ಜೀವಸತ್ವಗಳ ಕಾರ್ಯದಂತೆಯೇ, ಕೋಲೀನ್ ಸಾಮಾನ್ಯ ಜೀವಕೋಶದ ಕಾರ್ಯನಿರ್ವಹಣೆಗೆ ಅತ್ಯಗತ್ಯ, ಗರ್ಭಾವಸ್ಥೆಯಲ್ಲಿ ಮೆದುಳು ಮತ್ತು ಬೆನ್ನುಹುರಿಯ ಬೆಳವಣಿಗೆಯಲ್ಲಿ ಪ್ರಭಾವಶಾಲಿ ಪಾತ್ರವನ್ನು ವಹಿಸುತ್ತದೆ, ಶಿಶುಗಳಲ್ಲಿ ಅರಿವಿನ ಬೆಳವಣಿಗೆ ಮತ್ತು ವಯಸ್ಸಾದವರಲ್ಲಿ ಅರಿವಿನ ಕುಸಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇತ್ತೀಚಿನವರೆಗೂ, ಸಮತೋಲಿತ ಆಹಾರದ ಭಾಗವಾಗಿ ಕೋಲೀನ್‌ನ ಪಾತ್ರವನ್ನು ಹೆಚ್ಚಾಗಿ ಕಡೆಗಣಿಸಲಾಗಿತ್ತು.ಮೊಟ್ಟೆಗಳು ಕೋಲೀನ್‌ನ ಸಮೃದ್ಧ ಮೂಲವಾಗಿದ್ದು, ಸಾಮಾನ್ಯವಾಗಿ ಸೇವಿಸುವ ಯಾವುದೇ ಆಹಾರಕ್ಕಿಂತ 100 ಗ್ರಾಂಗೆ ಎರಡು ಪಟ್ಟು ಹೆಚ್ಚು ಕೋಲೀನ್ ಅನ್ನು ಒದಗಿಸುತ್ತದೆ. ಇದು ಮೊಟ್ಟೆಗಳನ್ನು ನಿಮ್ಮ ದೈನಂದಿನ ಪೌಷ್ಟಿಕಾಂಶ ಸೇವನೆಯನ್ನು ಪೂರೈಸಲು ಹೆಚ್ಚು ಪರಿಣಾಮಕಾರಿ ಮತ್ತು ಸರಳ ಮಾರ್ಗವನ್ನಾಗಿ ಮಾಡುತ್ತದೆ.

    ವಿಶೇಷ ಎಚ್ಚರಿಕೆ: ದಿನಕ್ಕೆ,1 ರಿಂದ 2 ಮೊಟ್ಟೆಯನ್ನು ಸೇವಿಸುವುದು, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮತ್ತು ಮೊಟ್ಟೆಯನ್ನು, ಯಾವಾಗಲೂ ಬೇಯಿಸಿ ಸೇವಿಸುವುದು ಉತ್ತಮ.

  • ಮಾಂಸಕ್ಕಿಂತ, ಉತ್ತಮ ಸೋಯಾ!.

    ಸಸ್ಯಾಹಾರಿ ಪ್ರಿಯರಿಗೆ, ಮಾಂಸಕ್ಕಿಂತ ಮಿಗಿಲಾದ ಆಹಾರ, ಸೋಯಾ!

    ಮಾಂಸಾಹಾರ, ಹೆಚ್ಚಿನ ಜನಗಳ ಪ್ರಿಯವಾದ ಆಹಾರ , ಮಾಂಸಾಹಾರ ಇಲ್ಲದೆ ದಿನವೂ ಪೂರ್ತಿಯಾಗಲಾರದು , ಎಂಬುದು ಮಾಂಸಾಹಾರ ಪ್ರಿಯರ ಅಭಿಪ್ರಾಯ..

    ಆದರೆ ಸಸ್ಯಹಾರಿಗಳು, ಮಾಂಸದಲ್ಲಿನ, ಪ್ರೋಟೀನ್ಸ್ ಇನ್ನಿತರ ಜೀವ ಸತ್ವಗಳನ್ನು, ಯಾವ ಆಹಾರಗಳ ಮೂಲಕ ತೆಗೆದುಕೊಳ್ಳಬೇಕು, ಎಂಬುದು ತಿಳಿದೇ ಇಲ್ಲ. ಮಾಂಸಹಾರಕ್ಕಿಂತ ಸಸ್ಯಹಾರದಲ್ಲಿ, ಹೆಚ್ಚಿನ ಪ್ರೋಟೀನ್ ಜೀವಸತ್ವಗಳು ಅಡಗಿದೆ. ಅದರಲ್ಲಿ ಉತ್ತಮವಾದ, ಆಹಾರವೆಂದರೆ! ಸೋಯಾ ಚಂಕ್ಸ್,

    ಸೋಯಾ ಚಂಕ್ಸ್ ಆರೋಗ್ಯಕರ ಉತ್ತಮ ಆಹಾರ!?

    • ಸೋಯಾ ಚಂಕ್ಸ್ ನಲ್ಲಿ, ವಿಟಮಿನ್ –ಡಿ [vitamin –D ] ಸಮೃದ್ಧವಾಗಿದೆ.
    • ಮೊಟ್ಟೆ,[egg] ಮತ್ತು ಹಾಲು, ಎಲ್ಲದಕ್ಕಿಂತ ಹೆಚ್ಚು ಪ್ರೋಟೀನ್ ನ ಅಂಶವಾಗಿದೆ.
    • ಅಮೈನ್ಆಮ್ಲಗಳು ಅಧಿಕವಾಗಿದೆ.ಇದು ದೇಹದ ಅಗತ್ಯತೆಗಳನ್ನು, ಪೂರೈಸುತ್ತದೆ.
    • ದೇಹದಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
    • ದೇಹದಲ್ಲಿನ ಬೇಡವಾದ ಅಂಗಗಳಲ್ಲಿನ ,ಸುತ್ತ ಆವರಿಸುವ, ಅಧಿಕ ಕೊಬ್ಬನ್ನು, ನಿಯಂತ್ರಿಸುತ್ತದೆ.
    • ಸೋಯಾದಲ್ಲಿ.ತುಂಡುಗಳಲ್ಲಿ, ಪ್ರೋಟೀನ್ ಸಮೃದ್ಧವಾಗಿದೆ.

    ಸೋಯಾ ಚಂಕ್ಸ್ ಬಳಸುವ ವಿಧಾನಗಳು:

    • ಸೋಯಾ ಪಲಾವ್/ಬಿರಿಯಾನಿ: ಅಕ್ಕಿಯೊಂದಿಗೆ ಸೇರಿಸಿ, ಪೌಷ್ಟಿಕ ಪುಲಾವ್ ಮಾಡಬಹುದು
    • ಸೋಯಾ ಚಂಕ್ಸ್ , ಗ್ರೇವಿ/ಕರಿ: ಈರುಳ್ಳಿ, ಟೊಮೇಟೊ,ಮಸಾಲೆಯೊಂದಿಗೆ ರುಚಿಕರವಾದ ಗ್ರೇವಿ.
    • ಸೋಯಾ ಸಲಾಡ್: ಬೇಯಿಸಿದ ಸೋಯಾ ಚಂಕ್ಸ್ ಗಳನ್ನೂ,ತರಕಾರಿಗಳೊಂದಿಗೆ,ಸೇರಿಸಿ ಸಲಾಡ್ ಮಾಡಿ ಸೇವಿಸಬಹುದು.
    • ಸೋಯಾ ಫ್ರೈ./ ಕಬಾಬ್: ಮಸಾಲೆ ಹಾಕಿ ಕಬಾಬ್ ತರಹ ಕರಿದು ತಿನ್ನಬಹುದು.

    ದಿನಕ್ಕೆ 20 ರಿಂದ 30ಗ್ರಾಂ (ಒಂದು ಸಣ್ಣ ಬೌಲ್) ಸೇವನೆ ಸೂಕ್ತವಾದ ಆಹಾರ. 🙏

  • ದಿನವಿಡಿ, ಉತ್ಸಾಹದಿಂದ ಇರಲು ಮೊಳಕೆಒಡೆದ,ಹೆಸರುಕಾಳನ್ನು,ಸೇವಿಸಿ.

    ಮೊಳಕೆ ಬಂದ ಹೆಸರುಕಾಳನ್ನು, ಸೇವಿಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಿ,!

    ಇವಗಿನ ಬಿಡುವಿಲ್ಲದ ಸಮಯದಲ್ಲಿ,ಆರೋಗ್ಯದ ಬಗ್ಗೆ ಕಾಳಜಿ ವಹಿಸೂಕೆ, ಸಮಯವೇ ಸಿಗ್ತಾ ಇಲ್ಲ. ಆದ್ದರಿಂದ “ಆರೋಗ್ಯಕರ ಆಹಾರಗಳು” ಯಾವುದು ಎಂದು ತಿಳಿದೇ ಇಲ್ಲ. ಫಾಸ್ಟ್ ಫುಡ್ಗಳ [fastFood] ರುಚಿಗೆ ಮನಸೂತ ಮಂದಿಗೆ ಅದರಿಂದ ಅಷ್ಟೇ ಫಾಸ್ಟಾಗಿ ಆರೋಗ್ಯದ ಮೇಲೆ “ದುಷ್ಪರಿಣಾಮ”ಬೀರುತ್ತದೆ ಎಂದು ಅನೇಕರಿಗೆ ತಿಳಿದೇ ಇಲ್ಲ.

    ಮೊಳಕೆ ಒಡೆದ ಹೆಸರು ಕಾಳನ್ನು, ಹಾಸಿಗೆ ಸೇವಿಸಿ,

    ಹೆಸರು ಕಾಳನ್ನು ಹಾಗೆಯೇ ತಿಂದರೆ ಅದರಿಂದ ಪೌಷ್ಟಿಕಾಂಶ ನಮ್ಮ ದೇಹಕ್ಕೆ ಸಿಗುವುದಿಲ್ಲ,ಹೆಸರುಕಾಳನ್ನು ನೆನೆಸಿ ಹಾಗೆ ಹಸಿಯಾಗಿ ತಿಂದರೆ ಅದರಿಂದ ತುಂಬಾ ಬಗೆಯ “ಪೌಷ್ಟಿಕಾಂಶಗಳು” ನಮ್ಮ ದೇಹಕ್ಕೆ ಸಿಗುತ್ತವೆ.

    ಮೊಳಕೆಒಡೆಡ ಹೆಸರು ಕಾಳು ದೇಹಕ್ಕೆ ಯಾಕೆ ಒಳ್ಳೆಯದು?

    • ಪ್ರೋಟೀನ್(protein)
    • ಫೈಬರ್(fiber)
    • ವಿಟಮಿನ್(vitamins)
    • ಕಬ್ಬಿಣದ ಅಂಶ
    • ಕ್ಯಾಲ್ಸಿಯಂ( calsium)

    ಹೀಗೆ ದೇಹಕ್ಕೆ ಬೇಕಾದ ಆರೋಗ್ಯಕರ, ಅಂಶಗಳು ಸಿಗುತ್ತವೆ.

    ಅನೇಕ ಅದ್ಭುತ ಲಾಭಗಳನ್ನು, ತನ್ನೊಳಗೆ ಅಡಗಿಸಿಕೊಂಡಿರುವ, ಮೊಳಕೆ ಒಡೆದ ಹೆಸರು ಕಾಳುಗಳಲ್ಲಿ. ಅನೇಕ ಲಾಭಗಳಿವೆ.

    ಮೊಳಕೆ ಬಂದ ಹೆಸರುಕಾಳಿನ ಲಾಭಗಳೇನು?

    • ಜೀರ್ಣ ಶಕ್ತಿ ವೃದ್ಧಿ.

    *ಹೆಸರುಕಾಳಿನಲ್ಲಿರುವ ಪೌಷ್ಟಿಕಾಂಶವು ಮತ್ತು ಫೈಬರ್ ಅಂಶವು ದೇಹದಲ್ಲಿ, ಆಹಾರ ಸಂಚಾರ ದೇಹದಲ್ಲಿ ಸರಿ ಆಗುವಂತೆ ನೋಡಿಕೊಳ್ಳುತ್ತದೆ. ಮಲಬದ್ಧತೆ‘ ಸಮಸ್ಯೆಯನ್ನು ನಿವಾರಿಸುತ್ತದೆ.

    • ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
    • ಹೆಸರುಕಾಳನ್ನು , ದಿನನಿತ್ಯ ಸೇವಿಸುವುದರಿಂದ, ಹೃದಯದ ಆರೋಗ್ಯವನ್ನು ಇದರಲ್ಲಿನ” ಒಮೇಗೋ, ಫ್ಯಾಟಿ ಆಸಿಡ್.” [Omego fatty acids]ದೇಹಕ್ಕೆ ಬೇಕಾದ ಒಳ್ಳೆಯ ಕೊಬ್ಬಿನಂಶ ನೀಡಿ, ರಕ್ತನಾಳದ ಆರೋಗ್ಯವನ್ನು ಕಾಪಾಡುತ್ತದೆ. ಇದರಲ್ಲಿನ “ಆಂಟಿ ರಿಪ್ಲೈಮೆಂಟರಿ”[anti replo mentory] ಗುಣ ರಕ್ತನಾಳದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ದೇಹಕ್ಕೆ ಹೆಚ್ಚು ಆಕ್ಸಿಜನ್ ಸಿಗುವ ಹಾಗೆ ಮಾಡಿ. ಸ್ಟ್ರೋಕ್ ಬರದಾಗೆ ತಡೆಯುತ್ತದೆ.
    • ರೋಗನಿರೋಧಕ ಶಕ್ತಿಯ ಹೆಚ್ಚಳ

    ಮೊಳಕೆ ಒಡೆದ ಹೆಸರು ಕಾಳು,ಇದರಲ್ಲಿನ ವಿಟಮಿನ್ ಸಿ ಅಂಶವು ದೇಹಕ್ಕೆ, ಇನ್ಫೆಕ್ಷನ್ ಆಗದ ಹಾಗೆ ತಡೆಯುತ್ತದೆ. ವಿಟಮಿನ್ ಎ [ vitamin–A] ದೇಹಕ್ಕೆ ಆಂಟಿ ಆಕ್ಸಿಡೆಂಟ್ ಸಿಗುವ ಹಾಗೆ ನೋಡಿಕೊಳ್ಳುತ್ತದೆ. ಹೀಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ .

    • ಮೊಳಕೆ ಬರಿಸುವವಿಧಾನ: ರಾತ್ರಿ ಒಂದು ಕಪ್ ಗೆ ಸಾಕಷ್ಟು ಹೆಸರುಕಾಳನ್ನು ,ನೆನೆಸಿ ಮರುದಿನ ಅದೇ ಕಾಳನ್ನು ಬಟ್ಟೆಯಲ್ಲಿ ಗಟ್ಟಿಯಾಗಿ 5ರಿಂದ 6 ಗಂಟೆಗಳ ಕಾಲ ಹಾಗೆ ಬಿಟ್ಟು ನಂತರ ಪೌಷ್ಟಿಕಾಂಶದ ಮೂಲವಾದ ಮೊಳಕೆ ಒಡೆದ ಹೆಸರು ಕಾಳು ತಯಾರಾಗಿರುತ್ತದೆ.

    ದಿನವಿಡೀ ಉತ್ಸಾಹದಿಂದ, ಇರಿಸುತ್ತದೆ ಮೊಳಕೆ ಒಡೆದ ಹೆಸರು ಕಾಳು,!

    ಮೊಳಕೆ ಹೊಡೆದ ಹೆಸರುಕಾಳನ್ನು, ದಿನನಿತ್ಯದ ಬೆಳಗಿನ ಉಪಹಾರದಲ್ಲಿ ,ಸೇವಿಸುವುದರಿಂದ. ಇದರಲ್ಲಿನ ದೇಹಕ್ಕೆ, ಬೇಕಾದ ಪೌಷ್ಟಿಕಾಂಶವನ್ನು, ಪೂರ್ಣಗೊಳಿಸುತ್ತದೆ. ಮತ್ತು ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಮತ್ತು ಉತ್ತಮ ತ್ವಚೆಯನ್ನು ಕಾಂತಿಯುತವಾಗಿ ಮಾಡುತ್ತದೆ. ಇದನ್ನು ಸೇವಿಸಿದ ತಕ್ಷಣ ಹೊಟ್ಟೆ ತುಂಬಿದಂತಿರುತ್ತದೆ ಹೀಗಾಗಿ ದಿನವಡಿ ಉತ್ಸಾಹದಿಂದರಲು ಮೊಳಕೆ ಹೊಡೆದ ಹೆಸರು ಕಾಳು ಸಹಾಯಕಾರಿಯಾಗಿದೆ.

    ಹೀಗೆ ಬೆಳಗಿನ ಉಪಹಾರದಲ್ಲಿ, ಮೊಳಕೆ ಹೊಡೆದ ಹೆಸರುಕಾಳನ್ನು, ಸೇರಿಸಿದ್ದೇನೆ ನಿತ್ಯ ಸೇವಿಸಿ ಆರೋಗ್ಯದ ಲಾಭಗಳನ್ನು ಪಡೆದುಕೊಳ್ಳಿ.