Blog

  • ಮೊಸರು (curd), ಉಪಯೋಗಗಳು.

    ಮೊಸರು, ನಮ್ಮ ದೈನಂದಿನ ಆಹಾರದಲ್ಲಿ, ಪ್ರಮುಖ ಸ್ಥಾನ ಹೊಂದಿರುವ ಒಂದು ಆರೋಗ್ಯಕರ ಪದಾರ್ಥವಾಗಿದೆ. ವಿಶೇಷವಾಗಿ ಕರ್ನಾಟಕದಲ್ಲಿ ಹೆಚ್ಚು ಬಳಸುವ ಆಹಾರ, ಬಹುತೇಕ ಅನ್ನದ ಜೊತೆಗೆ ತಿನ್ನುವುದು ಸಾಮಾನ್ಯ. ಇದು ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೆ ಉಪಯುಕ್ತವಾಗಿದೆ.

    ಮೊಸರು ಎಂದರೆ ಏನು?

    ಮೊಸರು ಹಾಲಿನಿಂದ ತಯಾರಾಗುವ ಪ್ರಾಕೃತಿಕ ಆಹಾರವಾಗಿದೆ. ಹಾಲಿಗೆ ಒಳ್ಳೆಯ ಬ್ಯಾಕ್ಟೀರಿಯಾ ಸೇರಿಸಿದಾಗ ಅದು ಫರ್ಮೆಂಟೇಶನ್ ಮೂಲಕ ಮೊಸರಾಗಿ ರೂಪಾಂತರಗೊಳ್ಳುತ್ತದೆ. ಇದರಲ್ಲಿ ಪ್ರೊಬಯೋಟಿಕ್ಸ್ ಇರುತ್ತವೆ, ಇದು ಹೊಟ್ಟೆಯ ಆರೋಗ್ಯಕ್ಕೆ ಸಹಕಾರಿ.

    ಮೊಸರಿನಲ್ಲಿರುವ ಪೋಷಕಾಂಶಗಳು.

    • ಕ್ಯಾಲ್ಸಿಯಂ
    • ಪ್ರೋಟೀನ್
    • ಪೊಟಾಸಿಯಂ
    • ವಿಟಮಿನ್ B12
    • ಪ್ರೊಬಯೋಟೆಕ್ಸ್.(ಒಳ್ಳೆಯ ಬ್ಯಾಕ್ಟೀರಿಯಾ)

    ಮೊಸರು ತಿನ್ನುವುದರಿಂದಾಗುವ ಪ್ರಯೋಜನಗಳು.

    1.🔆ದೇಹಕ್ಕೆ ತಂಪು ನೀಡುತ್ತದೆ.

    ಬೆಚ್ಚಗಿನ ಹವಾಮಾನದಲ್ಲಿ ಮೊಸರು ದೇಹಕ್ಕೆ ತಂಪು ನೀಡುತ್ತದೆ.

    2.ಜೀರ್ಣಕ್ರಿಯೆ ಸುಧಾರಣೆ.

    ಮೊಸರು ಹೊಟ್ಟೆಯಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

    3. ತೂಕ ಇಳಿಕೆಗೆ ಸಹಕಾರಿ.

    ಮೊಸರು ತಿನ್ನುವುದರಿಂದ ಹೊಟ್ಟೆ ತುಂಬಿದ ಭಾವನೆ ಬರುತ್ತದೆ, ಇದರಿಂದ ತೂಕ ನಿಯಂತ್ರಣಕ್ಕೆ ಸಹಾಯವಾಗುತ್ತದೆ.

    4. ಚರ್ಮದ ಆರೈಕೆ ಮಾಡುತ್ತದೆ.

    ಮೊಸರು ಫೇಸ್ ಪ್ಯಾಕ್ ಆಗಿ ಬಳಸಿದರೆ ಚರ್ಮ ಮೃದುವಾಗುತ್ತದೆ ಮತ್ತು ಹೊಳಪು ಹೆಚ್ಚುತ್ತದೆ.

    5. ಎಲುಬುಗಳ ಬಲವರ್ಧನೆ.

    ಕ್ಯಾಲ್ಸಿಯಂ ಇರುವುದರಿಂದ ಎಲುಬುಗಳು ಮತ್ತು ಹಲ್ಲುಗಳು ಬಲವಾಗುತ್ತವೆ.

    🏠ಮನೆಯಲ್ಲಿ ಮೊಸರು ತಯಾರಿಸುವ ವಿಧಾನ.

    ಅಗತ್ಯಪದಾರ್ಥಗಳು.

    • ಹಾಲು
    • ಮೊಸರು (starter)–1ಚಮಚ

    ವಿಧಾನ.

    • ಹಾಲನ್ನು ಚೆನ್ನಾಗಿ ಕುದಿಸಿ ತಂಪಾಗಿಸಿ.
    • ಸ್ವಲ್ಪ ಬಿಸಿಯಾದಾಗ( starter) ಮೊಸರು ಅಥವಾ ಮಜ್ಜಿಗೆ ಒಂದು ಚಮಚ ಸೇರಿಸಿ
    • ತದನಂತರ ಮುಚ್ಚಿ 6–8 ಗಂಟೆಗಳ ಕಾಲ ಹಾಗೆ ಬಿಡಿ.
    • ಹೀಗೆ ಸಿದ್ಧವಾದ ಮೊಸರು ಬಳಸಬಹುದು.

    ⚠️ಎಚ್ಚರಿಕೆ

    • ಹೆಚ್ಚು ಹಳೆಯ ಮೊಸರನ್ನು ತಿನ್ನಬೇಡಿ
    • ಶೀತ/ಜ್ವರ ಇದ್ದರೆ ಕಡಿಮೆ ಪ್ರಮಾಣದಲ್ಲಿ ಸೇವಿಸಿ.
    • ಯಾವಾಗಲೂ ತಾಜಾ ಮೊಸರನ್ನು ಸೇವಿಸಿ.

    ಮೊಸರು ಒಂದು ಆರೋಗ್ಯಕರ ಮತ್ತು ಸರಳ ಆಹಾರವಾಗಿದೆ. ಇದನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ ದೇಹದ ಆರೋಗ್ಯ ಉತ್ತಮವಾಗಿರುತ್ತದೆ.

    ಇದೆ ತರಹದ ಆರೋಗ್ಯಕರ ಆಹಾರಗಳನ್ನು ತಿಳಿಯಲು ನಮ್ಮhttps://Foodforhealth.blog ನಲ್ಲಿ ಮಾಹಿತಿ ಪಡೆಯಿರಿ 🙏

  • ಕುಂಬಳಕಾಯಿಯ,🎃 ಪ್ರಯೋಜನಗಳು.!

    ಕುಂಭಳಕಾಯಿ ಬೀಜಗಳು(pumpkin seeds)ಆರೋಗ್ಯಕ್ಕೆ ತುಂಬಾ ಉಪಯುಕ್ತವಾದ ನೈಸರ್ಗಿಕ ಆಹಾರವಾಗಿದೆ. ಇವುಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು ದೇಹಕ್ಕೆ ಅನೇಕ ಲಾಭಗಳನ್ನು ನೀಡುತ್ತದೆ. ಈ ಲೇಖನದಲ್ಲಿ ನಾವು ಕುಂಭಳಕಾಯಿ ಬೀಜಗಳ ಪ್ರಯೋಜನಗಳು, ಪೋಷಕಾಂಶಗಳು ಮತ್ತು ಬಳಸುವ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.

    ಕುಂಬಳಕಾಯಿ ಬೀಜದಲ್ಲಿರುವ ಪೌಷ್ಟಿಕಾಂಶದ ಮೌಲ್ಯ.

    ಕುಂಬಳಕಾಯಿ ಬೀಜಗಳು ಪ್ರಮುಖ ಪೋಷಕಾಂಶಗಳನ್ನು ಪಡೆಯಲು ಉತ್ತಮ ಮಾರ್ಗವಾಗಿದೆ. ನೀವು 1 ಔನ್ಸ್ (ಸುಮಾರು 28 ಗ್ರಾಂ) ಕುಂಬಳಕಾಯಿ ಬೀಜಗಳನ್ನು ಸಿಪ್ಪೆ ಸುಲಿದು ಹುರಿದರೆ, ನೀವು ಈ ಕೆಳಗಿನವುಗಳನ್ನು ಪಡೆಯಬಹುದು .

    • ಪ್ರೋಟೀನ್ 7 ಗ್ರಾಂ.
    • ಕೊಬ್ಬು 13 ಗ್ರಾಂ.
    • ಕಾರ್ಬೋ ಹೈಡ್ರೇಟ್ 5 ಗ್ರಾಂ
    • 1.7ಗ್ರಾಂ ಫೈಬರ್
    • ಕಬ್ಬಿಣ 23 ಗ್ರಾಂ
    • ರಂಜಕವೂ RDI ನ 33 ರಸ್ಟಿಧೆ.
    • ಕ್ಯಾರೊಟಿನಾಯ್ಡ್‌ಗಳು, ವಿಟಮಿನ್ ಇ ಮತ್ತು ಫೀನಾಲಿಕ್ ಆಮ್ಲಗಳು ನಿಮಗೆ ಒಳ್ಳೆಯದು ಏಕೆಂದರೆ ಅವು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ.

    ಪೌಷ್ಟಿಕಾಂಶದ ಕೊಡುಗೆಯ ಒಂದು ಭಾಗ ಮಾತ್ರವಾಗಿರುವ ಪೌಷ್ಟಿಕಾಂಶದ ಮೌಲ್ಯವು, ಕುಂಬಳಕಾಯಿ ಬೀಜಗಳು ಸಸ್ಯ ಆಹಾರ ಜಗತ್ತಿನಲ್ಲಿ ಅತ್ಯಂತ ಪೌಷ್ಟಿಕ-ದಟ್ಟವಾದ ಆಹಾರಗಳಲ್ಲಿ ಒಂದಾಗಿದೆ ಎಂದು ತೋರಿಸುತ್ತದೆ.

    ಕುಂಬಳಕಾಯಿಯ, (pumkin seeds) ಆರೋಗ್ಯ ಪ್ರಯೋಜನಗಳು.

    ಕುಂಬಳಕಾಯಿ ಬೀಜಗಳು ಆರೋಗ್ಯಕರ ಆಹಾರವಾಗಿದ್ದು, ಏಕೆಂದರೆ ಅವು ಬಹಳಷ್ಟು ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತವೆ. ಈ ಪೋಷಕಾಂಶವನ್ನು ಮಿತವಾಗಿ ಸೇವಿಸುವುದರಿಂದ ನೀವು ಆರೋಗ್ಯವಾಗಿರಲು ಮತ್ತು ಅನಾರೋಗ್ಯಕ್ಕೆ ಒಳಗಾಗದಿರಲು ಸಹಾಯ ಮಾಡುತ್ತದೆ.

    1.ಚರ್ಮ, ಮತ್ತು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು:–ಕುಂಬಳಕಾಯಿ ಬೀಜಗಳು ಉತ್ಕರ್ಷಣ ನಿರೋಧಕಗಳು, ಒಮೆಗಾ-3ಗಳು ಮತ್ತು ಸತುವುಗಳಿಂದ ತುಂಬಿರುತ್ತವೆ, ಇದು ಕೂದಲು ಮತ್ತು ಚರ್ಮವು ಆರೋಗ್ಯಕರವಾಗಿರಲು ಮತ್ತು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ.

    2.ಮೂಳೆಗಳನ್ನು ಬಲಗೊಳಿಸುತ್ತದೆ:–ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಮ್ ಮತ್ತು ರಂಜಕ ಅಧಿಕವಾಗಿದ್ದು, ಇದು ಮೂಳೆಗಳಿಗೆ ಒಳ್ಳೆಯದು ಮತ್ತು ತಡೆಗಟ್ಟಲು ಸಹಾಯ ಮಾಡುತ್ತದೆ ಆಸ್ಟಿಯೊಪೊರೋಸಿಸ್.

    3.ಮನಸಿಕ ಆರೋಗ್ಯವನ್ನು ಸುಧಾರಿಸುತ್ತದೆ:–ಕುಂಬಳಕಾಯಿ ಬೀಜಗಳು ಮೆಗ್ನೀಸಿಯಮ್ ಮತ್ತು ಟ್ರಿಪ್ಟೊಫಾನ್‌ನ ಉತ್ತಮ ಮೂಲವಾಗಿದ್ದು, ಇದು ಮನಸ್ಥಿತಿಯನ್ನು ಸುಧಾರಿಸಲು ಮತ್ತು ಒತ್ತಡ ಅಥವಾ ದುಃಖದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    4. ತೂಕವನ್ನು ನಿಯಂತ್ರಣಕ್ಕೆ ತರುತ್ತದೆ:–ಕುಂಬಳಕಾಯಿ ಬೀಜಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಅಧಿಕವಾಗಿದ್ದು, ಇದು ನಿಮ್ಮನ್ನು ಹೊಟ್ಟೆ ತುಂಬಿರುವಂತೆ ಮಾಡುತ್ತದೆ ಮತ್ತು ಹೆಚ್ಚು ತಿನ್ನುವುದನ್ನು ತಡೆಯುತ್ತದೆ, ಇದು ನಿಮ್ಮ ತೂಕವನ್ನು ಹೆಚ್ಚಿಸಬಹುದು.

    5.ಮೂತ್ರಕೋಶ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ:–ಕುಂಬಳಕಾಯಿ ಬೀಜದ ಸಾರವು ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸೂಚಿಸಿವೆ ಅತಿಯಾದ ಮೂತ್ರಕೋಶ ಮತ್ತು ಮೂತ್ರದ ಕಾರ್ಯವನ್ನು ಉತ್ತಮಗೊಳಿಸುತ್ತದೆ, ವಿಶೇಷವಾಗಿ ವಯಸ್ಸಾದವರಲ್ಲಿ.

    6.ರೋಗನಿರೋಧಕ ವ್ಯವಸ್ಥೆಯನ್ನೂ ಉತ್ತಮಗೊಳಿಸುತ್ತದೆ.:–ಕುಂಬಳಕಾಯಿ ಬೀಜಗಳಲ್ಲಿ ಸತು ಮತ್ತು ಕಬ್ಬಿಣ ಹೇರಳವಾಗಿದ್ದು, ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ನಿರೋಧಕ ವ್ಯವಸ್ಥೆಯ ಮತ್ತು ನಿಮ್ಮನ್ನು ಉತ್ತಮ ಭಾವನೆ ಮೂಡಿಸುತ್ತದೆ.

    7. ಚೆನ್ನಾಗಿ ನಿದ್ರೆ ಮಾಡುತ್ತದೆ:–ಕುಂಬಳಕಾಯಿ ಬೀಜಗಳು ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲದ ನೈಸರ್ಗಿಕ ಮೂಲವಾಗಿದ್ದು, ಇದು ನಿಮಗೆ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಮೆಗ್ನೀಸಿಯಮ್ ಸಹ ನಿಮಗೆ ನಿದ್ರಿಸಲು ಸಹಾಯ ಮಾಡುತ್ತದೆ.

    ಕುಂಬಳಕಾಯಿಯನ್ನು, ಸೇವಿಸುವುದು ಹೇಗೆ?

    ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಕುಂಬಳಕಾಯಿ ಬೀಜಗಳನ್ನು ಸೇರಿಸುವುದು ಸುಲಭ. ನೀವು ಹಸಿ ಕುಂಬಳಕಾಯಿ ಬೀಜಗಳನ್ನು ತಿಂಡಿಯಾಗಿ ಸೇವಿಸಬಹುದು ಅಥವಾ ಅದನ್ನು ಇನ್ನಷ್ಟು ಉತ್ತಮಗೊಳಿಸಲು ನಿಮ್ಮ ನೆಚ್ಚಿನ ಸ್ಮೂಥಿಯಲ್ಲಿ ಸೇರಿಸಬಹುದು. ನೀವು ಕುಂಬಳಕಾಯಿ ಬೀಜಗಳನ್ನು ಹೇಗೆ ತಿಂದರೂ ಅಥವಾ ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಂಡರೂ, ನೀವು ಇನ್ನೂ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತೀರಿ. ನಿಮ್ಮ ದೈನಂದಿನ ಊಟದಲ್ಲಿ ಕುಂಬಳಕಾಯಿ ಬೀಜಗಳನ್ನು ಬಳಸುವ ಕೆಲವು ವಿಧಾನಗಳು ಇಲ್ಲಿವೆ, ಇದರಿಂದ ನೀವು ಅವು ನೀಡುವ ಎಲ್ಲಾ ಆರೋಗ್ಯ ಪ್ರಯೋಜನಗಳನ್ನು ಆನಂದಿಸಬಹುದು.

    • ದಿನಕ್ಕೆ 2–3ಚಮಚವನ್ನು ಹಾಗೆ ಸೇವಿಸಬಹುದು.
    • 🥗 ಸಲಾಡ್ ರೀತಿಯಲ್ಲಿ, ತೆಗೆದುಕೊಳ್ಳಬಹುದು.
    • ಹುರಿದು (roasted) ತಿನ್ನಬಹುದು.
    • ಜ್ಯೂಸ್ಗಳಲ್ಲಿ ಸೇವಿಸಿ ತೆಗೆದುಕೊಳ್ಳಬಹುದು.

    ಕುಂಬಳಕಾಯಿ ಬೀಜಗಳು ಸಣ್ಣದಾಗಿದ್ದರೂ ಆರೋಗ್ಯಕ್ಕೆ ದೊಡ್ಡ ಪ್ರಯೋಜನಗಳನ್ನು ಕೊಡುತ್ತವೆ. ದಿನನಿತ್ಯದ ಆಹಾರದಲ್ಲಿ ಇವುಗಳನ್ನು ಸೇರಿಸಿದರೆ ನಿಮ್ಮ ಆರೋಗ್ಯವನ್ನು ಸುಧಾರಿಸಬಹುದು.

    ಇದೆ ತರಹದ ಆರೋಗ್ಯಕರ ಆಹಾರಗಳನ್ನು ತಿಳಿಯಲು ನಮ್ಮ https://Foodforhealth.blog ನಲ್ಲಿ ಮಾಹಿತಿ ಪಡೆಯಿರಿ.

  • “ಬೀನ್ಸ್”🫛. ಉಪಯೋಗಗಳು.

    “ಬೀನ್ಸ್ “, ಪಲಾವ್, ವೆಜಿಟಬಲ್ ಪ್ರೈಡ್ ರೈಸ್, ಕೆಲವು ಪಲ್ಯ ಇವೆಲ್ಲ ಬೀನ್ಸ್, ಇಲ್ಲದೆ ಅಪೂರ್ಣ. ಕೆಲವರು ಈ ಬೀನ್ಸ್, ತಟ್ಟೆಯ ಪಕ್ಕದಲ್ಲಿಟ್ಟು ಉಳಿದೆಲ್ಲವನ್ನು, ತಿಂದು ಮುಗಿಸುತ್ತಾರೆ. ಆದರೆ ನಿಮಗೆ ಗೊತ್ತ. ಇ ಚಿಕ್ಕ ಬೀನ್ಸ್ ದೇಹಕ್ಕೆ ಬೇಕಾದ ಎಲ್ಲಾ ಸತ್ವಗಳನ್ನು, ಹೊಂದಿದೆ.

    ಬೀನ್ಸ್ ನಲ್ಲಿರುವ. ಅಗತ್ಯ ಪೋಷಕಾಂಶಗಳು.🫛

    ಬೀನ್ಸ್ ಚಿಕ್ಕದಾಗಿ ಕಂಡರೂ ಹಲವು ಆರೋಗ್ಯ ಲಾಭಗಳನ್ನು ನೀಡುತ್ತದೆ.
    • ಪ್ರೋಟೀನ್(protine)
    • ಫೈಬರ್(fiber)
    • ಐರನ್(iron)
    • ಕ್ಯಾಲ್ಸಿಯಂ(calsium)
    • ವಿಟಮಿನ್–A
    • ವಿಟಮಿನ್–C & ವಿಟಮಿನ್–K
    • ಕಬ್ಬಿಣಾಂಶ.

    “ಬೀನ್ಸ್”,ಸೇವನೆಯಿಂದ ಆಗುವ ಆರೋಗ್ಯ ಲಾಭಗಳು.

    ಹೃದಯದ ಆರೋಗ್ಯವನ್ನು ಕಾಪಾಡುತ್ತದೆ:–ಬೀನ್ಸ್, ನಲ್ಲಿರುವ ಪೊಟಾಸಿಯಂ. ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯಗಳನ್ನು ತಪ್ಪಿಸುತ್ತದೆ. ಹೀಗೆ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಬೀನ್ಸ್, ಸಹಕಾರಿ.

    ಜೀರ್ಣಕ್ರಿಯೆಗೆ ಸಹಕಾರಿ:–ಹೆಚ್ಚಿನ ನಾರಿನಂಶ (fiber) ಇರುವುದರಿಂದ. ಕರುಳಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಮತ್ತು ಮಲಬದ್ಧತೆಯನ್ನು ನಿಯಂತ್ರಿಸುತ್ತದೆ. ಇಗೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

    ತೂಕ ಇಳಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ:–ತೂಕ ಇಳಿಕೆಗೆ ಶ್ರಮ ಪಡುವವರು ಅವರ ಆಹಾರ ಸೇವನೆಯಲ್ಲಿ ಬೀನ್ಸ್ ಸೇರಿಸುವುದು ಉತ್ತಮ. ಬೀನ್ಸ್ ನಲ್ಲಿ ಇರುವ ಕಡಿಮೆ ಕ್ಯಾಲೋರಿಗಳು. ಹೆಚ್ಚಿನ ಫೈಬರ್ ಹೊಂದಿರುವುದರಿಂದ ಧೀರ್ಘಕಾಲದ ವರೆಗೆ ಹೊಟ್ಟೆ ತುಂಬಿದಂತಿರುತ್ತದೆ.ಈಗಾಗಿ ತೂಕ ಇಳಿಸಲು ಸಹಾಯ ಮಾಡುತ್ತದೆ.

    ಮಧುಮೇಹ (sugar), ನಿಯಂತ್ರಿಸುತ್ತದೆ:– ಮಧುಮೇಹ ನಿರ್ವಹಣೆ ಬೀನ್ಸ್ ಉತ್ತಮ ಆಹಾರ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇಗೆ ಮಧುಮೇಹಿಗಳಿಗೆ. ಉತ್ತಮ ಆಹಾರವಾಗಿ ಕಾರ್ಯ ನಿರ್ವಹಿಸುತ್ತದೆ.

    ಮೂಳೆಗಳಿಗೆ ಬಲ ನೀಡುತ್ತದೆ:–ಮೂಳೆಗಳ ಬಲವರ್ಧನೆಯಲ್ಲಿ, ಬೀನ್ಸ್ ಉತ್ತಮ ಆಹಾರ ಇದರಲ್ಲಿನ ವಿಟಮಿನ್ –C & ಕ್ಯಾಲ್ಸಿಯಂ (calsium) ಅಂಶವು ಮೂಳೆಗಳಿಗೆ ಬಲವನ್ನು ನೀಡಿ. ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ.

    ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:–ಬೀನ್ಸ್ನಲ್ಲಿನ, ವಿಟಮಿನ್ –C ಅಂಶವು ದೇಹದ ರೋಗನಿರೋಧಕ ಶಕ್ತಿಯನ್ನು. ಹೆಚ್ಚಿಸಲು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

    ಬೀನ್ಸ್, ತಿನ್ನುವುದರ ಮೊದಲು ಸರಿಯಾಗಿ ಬೇಯಿಸುವುದು ಅಥವಾ (ಅಡುಗೆ ಮಾಡುವುದು ಉತ್ತಮ. ಅಥವಾ ಹಾಗೆಯೇ 🥗 ಸಲಾಡ್ ಮುಖಾಂತರ ಸೇವಿಸಿ.

  • ಸಿಗಡಿಯ, 🦐(prawn) ಸೇವನೆಯ ಪ್ರಯೋಜನಗಳು

    ಮಾಂಸಾಹಾರಿಗಳ, ಪ್ರಿಯವಾದ ಸಮುದ್ರ ಆಹಾರಗಳಲ್ಲಿ, 🍤ಸಿಗಡಿ (prawns) ಪ್ರಮುಖ ಆಹಾರ. ಸಿಗಡಿ ಒಂದು ಸಮುದ್ರ ಆಹಾರ(Seafood ). ಇದು ಚಿಕ್ಕ ಗಾತ್ರದ ಜಲಚರ ಜೀವಿ(sellfish). ಇದನ್ನು ಕನ್ನಡದಲ್ಲಿ “ಸಿಗಡಿ”(prawns)ಎಂದು ಕರೆಯುತ್ತಾರೆ.

    🦐ಸಿಗಡಿ (prawns) ಭಾರತದಲ್ಲಿ ಹೆಚ್ಚು ಸೇವನೆ ಮಾಡಿದರು ಕೂಡ ಅತಿ ಹೆಚ್ಚು ಬಳಸುವವರು ಕರಾವತಿ ಪ್ರದೇಶದವರು , ಇವರ ನೆಚ್ಚಿನ ಆಹಾರ ಪದಾರ್ಥ ಸಿಗಡಿ ಆಗಿದೆ. ಸಿಗಡಿಯು ಒಂದು ಒಳ್ಳೆಯ ಆರೋಗ್ಯಕರ ಆಹಾರಗಳಲ್ಲಿ ಒಂದು.

    ಸಿಗಡಿಯಲ್ಲಿರುವ ಪೋಷಕಾಂಶಗಳು.

    ಸಿಗಡಿಯ ಸೇವನೆಯಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು, ಒದಗಿಸುತ್ತದೆ.
    • ಪ್ರೋಟೀನ್( protine)
    • ಒಮೆಗಾ–3 ಕೊಬ್ಬು ಆಮ್ಲಗಳು (fatty acide)
    • ವಿಟಮಿನ್ –B 12
    • ಐರನ್ (iron)
    • ಜಿಂಕ್(zink)
    • ಸೆಲೆನಿಯಂ (Selenium)

    ಸಿಗಡಿ (prawns) ಆರೋಗ್ಯ ಲಾಭಗಳು.

    • ಹೃದಯದ ಆರೋಗ್ಯವನ್ನು, ಕಾಪಾಡುತ್ತದೆ: ಇತ್ತೀಚಿನ ದಿನಗಳಲ್ಲಿ ಹೃದಯದ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ, ಇದಕ್ಕೆ ಮುಖ್ಯ ಕಾರಣ ಅವರವರ ಆಹಾರ ಪದ್ಧತಿ, ಒಂದು ಮುಖ್ಯ ಕಾರಣ. ಒಮೆಗಾ –3 ಇರುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಿಗಡಿ ಉತ್ತಮ ಆಹಾರ.
    • ತೂಕ ಇಳಿಕೆಗೆ ಸಹಕಾರಿ: ದೇಹದ ತೂಕ ಇಳಿಕೆಗೆ ಶ್ರಮ ಪಡುವವರು ಆಹಾರ ಸೇವನೆ ಪ್ರಮುಖ. ಅದರಲ್ಲಿ ಸಿಗಡಿ ತೂಕ ಇಳಿಕೆಗೆ ಸಹಾಯವಾಗುತ್ತದೆ. ಇದರಲ್ಲಿರುವ ಕಡಿಮೆ ಕ್ಯಾಲೊರಿಗಳು, ಇದ್ದು. ಕೊಬ್ಬು ಆಮ್ಲಗಳು (fatty acid) ದೇಹದ ತೂಕ ಇಳಿಕೆಗೆ ಸಹಾಕಾರಿ.
    • ಮೆದುಳಿನ ಕಾರ್ಯಕ್ಷಮತೆಯನ್ನು, ಹೆಚ್ಚಿಸುತ್ತದೆ: ಸಮುದ್ರ ಆಹಾರಗಳಲ್ಲಿ ಹೆಚ್ಚು ಬುದ್ಧಿಯನ್ನು, ಚುರುಕು ಗೊಳಿಸುವ ಗುಣವಿದೆ. ಅದರಲ್ಲಿ ಸಿಗಡಿಯು ಒಂದು. ಇದರಲ್ಲಿರುವ ವಿಟಮಿನ್–B 12 ಪೋಷಕಾಂಶವು ಮೆದುಳಿನ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
    • ರೋಗನಿರೋದಕ ಶಕ್ತಿಯನ್ನು, ಹೆಚ್ಚಿಸುತ್ತದೆ: ಹಲವಾರು ಆರೋಗ್ಯ ಸಮಸ್ಯೆಗಳು ಬರುವುದಕ್ಕೆ ಮುಖ್ಯ ಕಾರಣ ದೇಹದಲ್ಲಿನ ರೋಗನಿರೋಧಕ ಶಕ್ತಿಯ ಕೊರತೆ. ಸಿಗಡಿ ಸೇವನೆಯಿಂದ ಇದರಲ್ಲಿನ” ಜಿಂಕ್ ” ಮತ್ತು “ಸೆಲೆನಿಯಮ್ “, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

    ಸಿಗಡಿಯನ್ನು, ಬಳಸುವ ವಿಧಾನಗಳು.

    ಸಿಗಡಿಯನ್ನು ಹಲವು ರುಚಿಕರ ಪದಾರ್ಥಗಳಲ್ಲಿ ಬಳಸುತ್ತಾರೆ :

    • ಸಿಗಡಿ ಫ್ರೈ
    • ಸಿಗಡಿ ಕರ್ರಿ
    • ಸಿಗಡಿ ಕಬಾಬ್
    • 🍲 ಸಿಗಡಿ ಸೂಪ್
    • ಸಿಗಡಿ ಬಿರಿಯಾನಿ

    ಸಿಗಡಿ ಒಂದು ರುಚಿಕರ ಆಹಾರ ಮತ್ತು ಪೋಷಕಾಂಶಗಳ ಸಮೃದ್ಧ ಮೂಲ. ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಆರೋಗ್ಯಕ್ಕೆ , ಬಹಳ ಉಪಯುಕ್ತ.

    ಇದೆ ತರಹದ ಆರೋಗ್ಯಕರ ಆಹಾರಗಳನ್ನು ತಿಳಿಯಲು ನಮ್ಮhttps://Foodforhealth.blog ಮಾಹಿತಿ ಪಡೆಯಿರಿ 🙏

  • ರಾಗಿ ‘ ಹಿಟ್ಟಿನ, ಆರೋಗ್ಯಕರ ಲಾಭಗಳು.

    ರಾಗಿ, ಭಾರತದಲ್ಲಿ ಹೆಚ್ಚು ಬಳಸುವ ಆಹಾರಗಳಲ್ಲಿ ಒಂದು.ರಾಗಿ ಮುದ್ದೆ, ನಾಟಿ ಕೋಳಿ ಸಾರು ಎಂದರೆ ನಮ್ಮ ಕನ್ನಡಿಗರು ಹೆಚ್ಚಿನವರು ಬಾಯಿ ಚಪ್ಪರಿಸುವರು. ಇದು ತುಂಬಾ ರುಚಿಕರ ಮಾತ್ರವಲ್ಲದೆ, ಆರೋಗ್ಯಕ್ಕೂ ಒಳ್ಳೆಯದು. ಕರ್ನಾಟಕದ ಕೆಲವೊಂದು ಭಾಗಗಳಲ್ಲಿ ರಾಗಿ ಮುದ್ದೆಯನ್ನು ಪ್ರತಿನಿತ್ಯವೂ ಆಹಾರ ಕ್ರಮದಲ್ಲಿ ಬಳಕೆ ಮಾಡುವರು.

    ಇನ್ನು ಕೆಲವರು ರಾಗಿಯ ರೊಟ್ಟಿ ಮಾಡಿಕೊಂಡು ಅದನ್ನು ಬಳಸುವರು. ರಾಗಿ ದೋಸೆ ಕೂಡ ತುಂಬಾ ಜನಪ್ರಿಯವಾಗಿದೆ. ರಾಗಿಯಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ತುಂಬಾ ಒಳ್ಳೆಯದು ಇದು ನಮ್ಮ ಆರೋಗ್ಯ ಕಾಪಾಡಲು ತುಂಬಾ ಲಾಭಕಾರಿ.

    ರಾಗಿಯನ್ನು ನಾವು ನಿತ್ಯವೂ ಬಳಸಿಕೊಂಡರೆ ಅದರಿಂದ ಸಿಗುವಂತಹ ಆರೋಗ್ಯ ಲಾಭಗಳನ್ನು ಪಡೆಯಬಹುದು. ಇಂತಹ ರಾಗಿಯಲ್ಲಿ ಯಾವೆಲ್ಲಾ ಪೋಷಕಾಂಶಗಳು ಇವೆ.

    • ರಾಗಿ ಧಾನ್ಯವು ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್ B ಸಮೃದ್ಧವಾಗಿದೆ. ಫೈಬರ್ ಹೊಟ್ಟೆ ಆರೋಗ್ಯ, ಜಠರಚಟುವಟಿಕೆ ಮತ್ತು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ ಎಲುಬುಗಳ ದೃಢತೆಗೆ ಮತ್ತು ಹೃದಯ ಆರೋಗ್ಯಕ್ಕೆ ಉತ್ತಮ. ಕಬ್ಬಿಣ ರಕ್ತದಲ್ಲಿ ಹೆಮೋಗ್ಲೊಬಿನ್ ಮಟ್ಟವನ್ನು ಹೆಚ್ಚಿಸಲು, ಪ್ರೋಟೀನ್ ದೇಹದ ಕಬ್ಬಿಣದ ಜತೆಗೂಡಿ ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ವಿಟಮಿನ್ B ದೇಹದ ಎನರ್ಜಿಯ ಉತ್ಪಾದನೆ ಮತ್ತು ಮೆದುಳಿನ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ.

    ಈ ರೀತಿಯಾಗಿ, ರಾಗಿ ನಿಯಮಿತವಾಗಿ ಸೇವನೆಯಿಂದ ದೇಹಕ್ಕೆ ಬೇಕಾದ ಶಕ್ತಿ, ಸ್ಥೈರ್ಯ ಮತ್ತು ಆರೋಗ್ಯಕರ ಜೀವಚಟುವಟಿಕೆಗಳನ್ನು ಬೆಂಬಲಿಸುತ್ತದೆ. ಅದರ ಪೌಷ್ಟಿಕತೆಯ ಕಾರಣದಿಂದ, ರಾಗಿ ಈಗಿರುವ ಹೈಬ್ರೀಡ್ ಆಹಾರ ಪದ್ಧತಿಗಳಲ್ಲಿ ಸಹ ಜನಪ್ರಿಯ ಧಾನ್ಯವಾಗಿ ಪರಿಗಣಿಸಲಾಗಿದೆ,

    ರಾಗಿಯ ಆರೋಗ್ಯ ಲಾಭಗಳು .

    ರಾಗಿ ಭಾರತದಲ್ಲಿ ಹೆಚ್ಚು ಬಳಸುವ ಆಹಾರಗಳಲ್ಲಿ, ಒಂದು ಅದರ ಬಳಕೆಯ ಆರೋಗ್ಯಕರ ಲಾಭಗಳೇನು, ತಿಳಿಯೋಣ.

    ರಾಗಿ, ಭಾರತೀಯ ಆಹಾರದ ಪರಂಪರೆಯ ಅತ್ಯಂತ ಪೌಷ್ಟಿಕತಾಮಯ ಧಾನ್ಯಗಳಲ್ಲಿ ಒಂದಾಗಿದೆ.ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಶಕ್ತಿಶಾಲಿ ಆಹಾರವೆಂದು ಹೇಳಬಹುದು. ನಿತ್ಯವೂ ರಾಗಿ ಸೇವನೆಯು ಹಲವಾರು ಆರೋಗ್ಯ ಲಾಭಗಳನ್ನು ನೀಡುತ್ತದೆ. ಇದರಲ್ಲಿ ಪ್ರಮುಖವು ಹೃದಯ, ಮೂತ್ರ, ಎಲುಬು, ರಕ್ತದ ಶರ್ಕರೆ ನಿಯಂತ್ರಣ, ತೂಕ ನಿರ್ವಹಣೆ, ಚರ್ಮ ಮತ್ತು ಕೂದಲು ಆರೋಗ್ಯ, ಹೈಪರ್‌ಟೆನ್ಶನ್ ನಿಯಂತ್ರಣ ಮುಂತಾದ ಆಯಾಮಗಳನ್ನು ಒಳಗೊಂಡಿದೆ

    *ಹೈಪರ್ ಟೆನ್ಶನ್ ನಿಯಂತ್ರಣ.

    ರಾಗಿ ಹೈ ಪೋಟ್ಯಾಸಿಯಂ ವಸ್ತುಗಳನ್ನು ಹೊಂದಿರುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪೋಟ್ಯಾಸಿಯಂ ರಕ್ತನಾಳಗಳಲ್ಲಿ ತೀವ್ರತೆಯನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯ ಹಾಗೂ ಮೂತ್ರದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ನಿರಂತರವಾಗಿ ರಾಗಿ ಸೇವನೆಯಿಂದ ಹೈಪರ್‌ಟೆನ್ಶನ್ ಸಮಸ್ಯೆಗಳನ್ನು ತಡೆಯಬಹುದು ಮತ್ತು ದೀರ್ಘಕಾಲಿಕ ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸಬಹುದು.

    ತೂಕ ಇಳಿಕೆಗೆ ಉತ್ತಮ ಆಹಾರ.!

    • ರಾಗಿ ಹೈ ಫೈಬರ್ ಒಳಗೊಂಡಿರುವುದರಿಂದ ಹೊಟ್ಟೆ ತುಂಬಾ ಸಮಯ ಕಾಯುತ್ತದೆ. ಇದರ ಪರಿಣಾಮವಾಗಿ ಹೆಚ್ಚು ಆಹಾರ ಸೇವನೆಯ ಅವಶ್ಯಕತೆ ಕಡಿಮೆಯಾಗುತ್ತದೆ. ತೂಕ ಕಡಿಮೆ ಮಾಡಲು ಅಥವಾ ನಿರ್ವಹಿಸಲು ರಾಗಿ ಅತ್ಯುತ್ತಮ ಆಯ್ಕೆಯಾಗಿದೆ. ಫೈಬರ್ ದೇಹದಲ್ಲಿ ಕೊಬ್ಬಿನ ಶೋಷಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಜಠರದ ಚಟುವಟಿಕೆಯನ್ನು ಸುಧಾರಿಸುತ್ತದೆ.

    ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

    • ಇತ್ತೀಚಿನ ದಿನಗಳಲ್ಲಿ, ಹೃದಯದ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ರಾಗಿ ಇ ಸಮಸ್ಯೆಗೆ ಉತ್ತಮ ಆಹಾರ.ರಾಗಿ ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಯಲು ಅತ್ಯಂತ ಪರಿಣಾಮಕಾರಿಯಾಗಿದೆ. ಇದರಲ್ಲಿ ಇದ್ದ ಹೈ ಫೈಬರ್ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಕೊಲೆಸ್ಟ್ರಾಲ್ ಕಡಿಮೆಯಾಗುವ ಮೂಲಕ ಹೃದಯದ ರಕ್ತನಾಳಗಳಲ್ಲಿ ತೀವ್ರತೆ ಕಡಿಮೆಯಾಗುತ್ತದೆ ಮತ್ತು ಹೃದಯಕ್ಕೆ ರಕ್ತ ಸರಾಗವಾಗಿ ಪೂರೈಸಲಾಗುತ್ತದೆ. ಹಲವು ಅಧ್ಯಯನಗಳು ತೋರಿಸುತ್ತವೆ, ನಿಯಮಿತವಾಗಿ ರಾಗಿ ಸೇವನೆಯಿಂದ ಹೃದಯದ ಕಾರ್ಯಕ್ಷಮತೆ ಉತ್ತಮವಾಗುತ್ತದೆ ಮತ್ತು ಹೃದಯಾಘಾತದ ಸಂಭವನೀಯತೆ ಕಡಿಮೆಯಾಗುತ್ತದೆ. ಹೃದಯದ ಆರೋಗ್ಯವನ್ನು ಬೆಂಬಲಿಸುವ ಈ ಧಾನ್ಯವನ್ನು ದಿನನಿತ್ಯದ ಆಹಾರದಲ್ಲಿ ಸೇರಿಸುವುದು ಉಚಿತ ಮತ್ತು ನೈಸರ್ಗಿಕ ವಿಧಾನವಾಗಿದೆ. ಹೈ ಫೈಬರ್ ಮತ್ತು ಪೋಟ್ಯಾಸಿಯಂ ಇದ್ದರೆಯಿಂದ ಹೃದಯದ ಒತ್ತಡವೂ ನಿಯಂತ್ರಣದಲ್ಲಿರುತ್ತದೆ, ಇದರಿಂದ ಹೃದಯ ಸಂಬಂಧಿತ ಸಮಸ್ಯೆಗಳಿಗೆ ಶ್ರೇಷ್ಠ ನಿರೋಧಕ ಉಪಾಯವಾಗಿ ಕಾರ್ಯನಿರ್ವಹಿಸುತ್ತದೆ.

    ಎಲುಬುಗಳನ್ನು,ಬಲಪಡಿಸಿ ಆರೋಗ್ಯವಾಗಿಡುತ್ತದೆ.

    ರಾಗಿ ಪ್ರಮುಖವಾಗಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಕ್ಯಾಲ್ಸಿಯಂ ದೇಹದಲ್ಲಿ ಎಲುಬುಗಳ ದೃಢತೆಯನ್ನು ಉಳಿಸಲು ಅತ್ಯಂತ ಅವಶ್ಯಕವಾಗಿದೆ. ಮಕ್ಕಳ ಬೆಳವಣಿಗೆಯಲ್ಲಿಯೂ ಸಹ, ವೃದ್ಧರಲ್ಲಿಯೂ ಸಹ ರಾಗಿ ನಿಯಮಿತ ಸೇವನೆಯು ಎಲುಬುಗಳ ಹಾರ್ಡ್‌ನೆಸ್ ಮತ್ತು ದಿಟ್ಟತೆಗೆ ಸಹಾಯ ಮಾಡುತ್ತದೆ. ಇದರಿಂದ ಹಾರೀಕ್ಯುಲೆಸ್ ಅಥವಾ ಎಲುಬು ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು.

    ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.

    • ರಾಗಿ ಕಡಿಮೆ ಗ್ಲೈಸಮಿಕ್ ಇಂಡೆಕ್ಸ್ ಹೊಂದಿರುವ ಧಾನ್ಯವಾಗಿದೆ, ಅದರಿಂದ ಸಕ್ಕರೆ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ. ಈ ಗುಣವಲಯದ ಮೂಲಕ ಡಯಾಬಿಟಿಸ್ ರೋಗಿಗಳಿಗೆ ಇದು ಬಹುಮುಖ್ಯವಾಗಿದೆ. ಹಲವು ಅಧ್ಯಯನಗಳು ತೋರಿಸುತ್ತವೆ, ದಿನವೂ ಸರಿಯಾದ ಪ್ರಮಾಣದಲ್ಲಿ ಈ ಧಾನ್ಯವನ್ನು ಸೇವಿಸುವುದರಿಂದ ರಕ್ತದ ಶರ್ಕರೆಯ ಮಟ್ಟವನ್ನು ಸ್ಥಿರವಾಗಿರಿಸಲು ಸಾಧ್ಯವಾಗುತ್ತದೆ. ಇದರಿಂದ ಇನ್ಸುಲಿನ್ ಮಟ್ಟ ಸಮತೋಲನದಲ್ಲಿರುತ್ತದೆ ಮತ್ತು ಶರ್ಕರೆಯ ಅತಿಯಾಗಿ ಏರಿಕೆ ಅಥವಾ ಇಳಿಕೆಯನ್ನು ತಡೆಯಬಹುದು. ನಿಯಮಿತ ಸೇವನೆಯಿಂದ ದೇಹದ ಶರ್ಕರೆಯ ನಿರ್ವಹಣೆಯಲ್ಲಿ ಸಹಜವಾದ ಸಹಾಯ ದೊರಕುತ್ತದೆ, ಇದರಿಂದ ಆರೋಗ್ಯ ಸುಧಾರಿಸುತ್ತದೆ ಮತ್ತು ಡಯಾಬಿಟಿಸ್ ಸಂಬಂಧಿತ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ.

    ರಾಗಿಯನ್ನು ಹೇಗೆ ಬಳಸಬಹುದು?

    ರಾಗಿ ತನ್ನ ಪೌಷ್ಟಿಕತೆಯ ಕಾರಣದಿಂದ, ಹಲವು ರೀತಿಯ ಆಹಾರಗಳಲ್ಲಿ ಸುಲಭವಾಗಿ ಬಳಸಬಹುದಾಗಿದೆ. ಇದರ ಹಿಟ್ಟು, ಪುಡಿ ಅಥವಾ ತಾಜಾ ರೂಪವನ್ನು ಉಪಯೋಗಿಸಿ, ದಿನನಿತ್ಯದ ಆಹಾರದಲ್ಲಿ ಆರೋಗ್ಯಕರ ಉಪಾಹಾರಗಳನ್ನು ತಯಾರಿಸಬಹುದು. ಉದಾಹರಣೆಗೆ, ರೊಟ್ಟಿ, ಕೇಕ್, ಇಡ್ಲಿ, ದೊಸೆ ಅಥವಾ ಪಾನಕಗಳಲ್ಲಿ ಸೇರಿಸಬಹುದು. ಜೊತೆಗೆ, ರಾಗಿ ಮಿಲ್ಕ್, ಸ್ಮೂದಿ ಅಥವಾ ಜ್ಯೂಸಿನೊಂದಿಗೆ ಸೇರಿಸುವ ಮೂಲಕ ಅದರ ಪೌಷ್ಟಿಕತೆಯನ್ನು ಹೆಚ್ಚಿಸಬಹುದು. ಇದರ ಬಳಕೆಯಿಂದ ಆಹಾರದಲ್ಲಿ ಹೊಸ ರುಚಿ ಮತ್ತು ಆರೋಗ್ಯಕರತೆಯನ್ನು ಒಟ್ಟಾಗಿ ತರುವ ಸಾಧ್ಯತೆ ಇದೆ. ಹೀಗೆ, ಪೌಷ್ಟಿಕತೆಯೊಂದಿಗೆ ದಿನನಿತ್ಯದ ಆಹಾರದಲ್ಲಿ ಬದಲಾವಣೆ ಮಾಡಲು ರಾಗಿ ಅತ್ಯಂತ ಉಪಯುಕ್ತವಾಗಿ

    ಹೀಗೆ “ರಾಗಿ ಹುಟ್ಟು”, ರಾಗಿ ರೊಟ್ಟಿ “,ರಾಗಿ ಮಿಲ್ಕ್”, ರಾಗಿ ಪುಡಿ”, ಹೀಗೆ ಹಲವು ವಿಧಾನಗಳಲ್ಲಿ ರಾಗಿಯನ್ನು,ಸೇವಿಸಬಹುದು.

    ಇದೆ ತರಹದ ಆರೋಗ್ಯಕರ ಆಹಾರಗಳನ್ನು ತಿಳಿಯಲು ನಮ್ಮ .https://Foodforhealth.blog ನಲ್ಲಿ ಮಾಹಿತಿ ಪಡೆಯಿರಿ.

  • ದಾಳಿಂಬೆ ಹಣ್ಣು, ಆರೋಗ್ಯದ ಗುಪ್ತ ರಹಸ್ಯ.

    ದಾಳಿಂಬೆ (Pomegranate) ನಮ್ಮ ದೈನಂದಿನ ಜೀವನದಲ್ಲಿ ಅತ್ಯಂತ ಆರೋಗ್ಯಕರ ಹಣ್ಣುಗಳಲ್ಲಿ ಒಂದಾಗಿದೆ. ಇದನ್ನು “ರಕ್ತವರ್ಧಕ ಹಣ್ಣು” ಎಂದೂ ಕರೆಯಲಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ನಮ್ಮ ದೇಹವನ್ನು ಬಲಪಡಿಸುವುದರ ಜೊತೆಗೆ ಅನೇಕ ರೋಗಗಳಿಂದ ರಕ್ಷಿಸುತ್ತವೆ.

    ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಬಗೆಯ ಹಣ್ಣುಗಳಲ್ಲಿ ದಾಳಿಂಬೆ ಹಣ್ಣಿಗೆ ರಾಜ ಮರ್ಯಾದೆ! ಇದರ ಎದ್ದು ಕಾಣುವ ನೋಟದಿಂದ ಮಾತ್ರವಲ್ಲ, ಇದು ನೀಡುವ ಆರೋಗ್ಯ ಪ್ರಯೋಜನಗಳಿಂದಲೂ ಹೆಚ್ಚು ಹೆಸರುವಾಸಿಯಾಗಿದೆ. ಬಹುತೇಕ ಎಲ್ಲಾ ಕಾಲಗಳಲ್ಲಿಯೂ ಸಿಗುವ ದಾಳಿಂಬೆ ಹಣ್ಣುಗಳನ್ನು ತಂದು ತಿಂದು ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

    ದಾಳಿಂಬೆಹಣ್ಣಿನಲ್ಲಿರುವ, ಪೌಷ್ಟಿಕಾಂಶಗಳೇನು?

    • ವಿಟಮಿನ್–C
    • ವಿಟಮಿನ್–K
    • ಫೈಬರ್
    • ಪೊಟಾಸಿಯಂ
    • ಆಂಟಿ ಆಕ್ಸಿಡೆಂಟ್

    ದಾಳಿಂಬೆ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಸಾಮಾನ್ಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಲೈಂಗಿಕ ಕ್ರಿಯೆಗೆ ತಾಕತ್ತು ನೀಡು ವವರೆಗೂ ಇದರ ಪಾತ್ರವನ್ನು ನಾವು ನಿರ್ಲಕ್ಷ್ಯ ಮಾಡುವಂತಿಲ್ಲ. ದಾಳಿಂಬೆ ಹಣ್ಣಿನ ಸೇವನೆಯನ್ನು ಮಕ್ಕಳ ಸಹಿತ ದೊಡ್ಡವರು ವಯಸ್ಸಾದವರು ಕೂಡ ಮಾಡ ಬಹುದು. ಮುಖ್ಯವಾಗಿ ನಮ್ಮ ಮೂಳೆಗಳು, ನಮ್ಮ ಹೃದಯ, ಮಾಂಸ ಖಂಡಗಳು ಹಾಗೂ ನಮ್ಮ ಕರುಳಿನ ಆರೋಗ್ಯಕ್ಕೆ ದಾಳಿಂಬೆ ಹಣ್ಣಿನ ಒಳ್ಳೆಯ ಪ್ರಭಾವ ಸಮರ್ಪಕವಾಗಿ ಸಿಗುತ್ತದೆ. ಆರೋಗ್ಯಕರವಾದ ರೀತಿಯಲ್ಲಿ ನೀವು ಸಹ ದಾಳಿಂಬೆ ಹಣ್ಣನ್ನು ಸೇವಿಸಿ ಈ ಕೆಳಗಿನ ಲಾಭಗಳನ್ನು ಪಡೆದುಕೊಳ್ಳಬಹುದು.

    🩸ರಕ್ತದ ಒತ್ತಡ ನಿರ್ವಹಣೆಗೆ ಸಹಕಾರಿ.

    ಒಂದು ವೇಳೆ ನಿಮಗೆ ರಕ್ತದ ಒತ್ತಡ ಆಗಾಗ ಹೆಚ್ಚು ಕಡಿಮೆ ಆಗುತ್ತಿದ್ದರೆ, ಅದನ್ನು ದಾಳಿಂಬೆ ಹಣ್ಣುಗಳ ಸೇವನೆಯ ಮೂಲಕ ಸುಲಭವಾಗಿ ಸರಿಪಡಿಸಿಕೊಳ್ಳಬಹುದು ನೋಡಿ. ಸಂಶೋಧಕರು ಹೇಳುವಂತೆ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ನಮ್ಮ ರಕ್ತದ ಒತ್ತಡ ಹೆಚ್ಚಾಗಿರುವುದು ನಾರ್ಮಲ್ ಗೆ ಬರುತ್ತದೆ.

    ಬುದ್ಧಿಶಕ್ತಿ ಚುರುಕುಗೊಳಿಸುತ್ತದೆ.

    ದಾಳಿಂಬೆ ಹಣ್ಣು ತಿನ್ನುವವರು ಬುದ್ಧಿವಂತರಾಗಿರುತ್ತಾರೆ ಎಂದು ಕೇಳಿದ್ದೇವೆ. ಅದೇ ರೀತಿ ನಾಲ್ಕು ವಾರಗಳು ನಿರಂತರವಾಗಿ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ನಮ್ಮ ಬುದ್ಧಿ ಶಕ್ತಿ ಹೆಚ್ಚಾಗುವುದರ ಜೊತೆಗೆ ಕಣ್ಣಿನ ದೃಷ್ಟಿ ಕೂಡ ವೃದ್ಧಿಸುತ್ತದೆ. ಮುಖ್ಯವಾಗಿ ನಮ್ಮ ಮಾನಸಿಕ ಆರೋಗ್ಯವನ್ನು ಸರಿಪಡಿಸುವ ಜೊತೆಗೆ ಹೃದಯದ ಸಮಸ್ಯೆ ಹಾಗೂ ಅಲ್ಜಿಮರ್ ಕಾಯಿಲೆಯನ್ನು ಗುಣಪಡಿಸುವ ಲಕ್ಷಣ ಇದರಲ್ಲಿದೆ.

    ವ್ಯಾಯಮ,ಮಾಡುವವರಿಗೂ ಮತ್ತು ಆಟಗಾರರಿಗೂ ಉತ್ತಮ ಆಹಾರ.!

    ದಾಳಿಂಬೆ ಹಣ್ಣಿನ ಶಕ್ತಿ ಹೇಗಿದೆ ಎಂದರೆ ವ್ಯಾಯಾಮ ಮಾಡುವವರಿಗೂ ಕೂಡ ಇದು ಬೇಕೇ ಬೇಕು. ಏಕೆಂದರೆ ದಾಳಿಂಬೆ ಹಣ್ಣಿನಲ್ಲಿ ನೈಟ್ರೇಟ್ ಇರುವುದರಿಂದ ಇದು ನಮ್ಮ ಮಾಂಸಖಂಡಗಳಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗುವಂತೆ ನೋಡಿಕೊಳ್ಳುತ್ತದೆ. ವ್ಯಾಯಾಮ ಮಾಡುವುದಕ್ಕೆ 30 ನಿಮಿಷಗಳ ಮುಂಚೆ ದಾಳಿಂಬೆ ಹಣ್ಣಿನ ಜ್ಯೂಸ್ ಸೇವಿಸಿ ಆನಂತರ ವ್ಯಾಯಾಮಕ್ಕೆ ತೆರಳುವುದು ಒಳ್ಳೆಯ ಫಲಿತಾಂಶಗಳನ್ನು ಕೊಡುತ್ತದೆ.ದಾಳಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಪ್ರಮಾಣ ಹೇರಳವಾಗಿ ಕಂಡುಬರುವುದರಿಂದ ನಮ್ಮ ರಕ್ತದ ಲಿಪಿಡ್ ಪ್ರೊಫೈಲ್ ನಿರ್ವಹಣೆಯಲ್ಲಿ ಇದು ಸಾಕಷ್ಟು ಸಹಾಯಮಾಡುತ್ತದೆ. ಮುಖ್ಯವಾಗಿ ಹೃದಯದ ಅಪಧಮನಿಗಳಲ್ಲಿ ಯಾವುದೇ ತೊಂದರೆ ಆಗದಂತೆ ಉತ್ತಮ ರಕ್ತ ಸಂಚಾರ ನಿರ್ವಹಣೆ ಮಾಡುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ದಾಳಿಂಬೆ ಹಣ್ಣಿನ ಬೀಜಗಳ ಬಳಕೆಯಿಂದ ತಯಾರಿಸುವ ಎಣ್ಣೆ ಅಧಿಕ ಕೊಲೆಸ್ಟ್ರಾಲ್ ಇರುವವರಿಗೆ ರಾಮಬಾಣವಾಗಿ ಪರಿಣಮಿಸುತ್ತದೆ ಎಂದು ಹೇಳುತ್ತಾರೆ.

    ದಾಳಿಂಬೆ ಹಣ್ಣನ್ನು ಸುಮಾರು ವರ್ಷಗಳಿಂದಲೂ ಜನರು ಸೇವಿಸುತ್ತಾ ಬಂದಿದ್ದಾರೆ. ಏಕೆಂದರೆ ಇದರಲ್ಲಿರುವ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್ ಅಂಶಗಳು ನಮ್ಮ ಕಿಡ್ನಿ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ದಾಳಿಂಬೆ ಹಣ್ಣಿನ ಜ್ಯೂಸ್ ಆಗಾಗ ಕುಡಿಯುವುದರಿಂದ ನಮ್ಮ ಕಿಡ್ನಿಗಳು ಸ್ವಚ್ಛವಾಗುತ್ತವೆ ಎಂದು ಹೇಳುತ್ತಾರೆ. ಜೊತೆಗೆ ನಮ್ಮ ಕರುಳಿನ ಭಾಗದಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಗಳ ಪ್ರಮಾಣ ಕೂಡ ಹೆಚ್ಚಾಗುತ್ತದೆ

    ದಾಳಿಂಬೆ ಸೇವನೆಯಿಂದ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.

    ಇದೆ ತರಹದ ಆರೋಗ್ಯಕರ ಆಹಾರಗಳ ಬಗ್ಗೆ ತಿಳಿಯಲೂ ನಮ್ಮ https://Foodforhealth.blog ನಲ್ಲಿ ಮಾಹಿತಿ ಪಡೆಯಿರಿ.ಆರೋಗ್ಯವಾಗಿರಿ.🙏

  • “ಹಾಗಲಕಾಯಿ”{bitter gound} ಸೇವನೆಯ ಆರೋಗ್ಯ ಲಾಭಗಳು.

    “ಹಾಗಲಕಾಯಿ”,( Bitter gourd ) ಇದು ಒಂದು ಆರೋಗ್ಯಕರ ತರಕಾರಿಗಳಲ್ಲಿ.ಒಂದು ಉತ್ತಮ ಆಹಾರ. ಇದು ಕಹಿ ರುಚಿಯನ್ನು, ಹೊಂದಿದ್ದು. ಇದರಲ್ಲಿರುವ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ಹಲವಾರು ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆ.

    ಭಾರತದಲ್ಲಿ ಹಾಗಲಕಾಯಿ ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ ಮತ್ತು ಆಯುರ್ವೇದದಲ್ಲಿಯೂ ಇದು ಮಹತ್ವ ಹೊಂದಿದೆ.

    ಭಾರತದಲ್ಲಿ, ಹಾಗಲಕಾಯಿಗೆ {ಕರೇಲಾ }ಎಂಬ ಪದವನ್ನು ಬಳಸಲಾಗುತ್ತದೆ. ಹಾಗಲಕಾಯಿ ಸಾಮಾನ್ಯವಾಗಿ ಪ್ರಪಂಚದ ಉಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುವ ಒಂದು ತರಕಾರಿಯಾಗಿದ್ದು, ಬಲವಾದ ಕಹಿ ರುಚಿಯನ್ನು ಹೊಂದಿರುತ್ತದೆ, ಆದರೆ ಇದು ಅನೇಕ ಆರೋಗ್ಯ ಪ್ರಯೋಜನಗಳೊಂದಿಗೆ ಸಂಬಂಧ ಹೊಂದಿದೆ. ಇದು ಪ್ರಾಥಮಿಕವಾಗಿ ಏಷ್ಯಾ ಮತ್ತು ಆಫ್ರಿಕಾದಲ್ಲಿ ತಿನ್ನಲಾಗುವ ತರಕಾರಿಯಾಗಿದೆ, ಆದರೆ ಇದನ್ನು ಶತಮಾನಗಳಿಂದ ಆಯುರ್ವೇದ ಮತ್ತು ಸಾಂಪ್ರದಾಯಿಕ ಚೀನೀ ಔಷಧ (TCM) ಸೇರಿದಂತೆ ಸಾಂಪ್ರದಾಯಿಕ ಔಷಧ ವ್ಯವಸ್ಥೆಗಳಲ್ಲಿಯೂ ಬಳಸಲಾಗುತ್ತಿದೆ. ಸಹಜವಾಗಿ, ಅನೇಕ ಜನರು ಹಾಗಲಕಾಯಿಯ ರುಚಿಯನ್ನು ಇಷ್ಟಪಡುವುದಿಲ್ಲ ಎಂದು ಕಂಡುಕೊಳ್ಳುತ್ತಾರೆ, ಆದರೆ ಅದರ ಸುವಾಸನೆಯನ್ನು ಸಹಿಸಿಕೊಳ್ಳಬಲ್ಲವರಿಗೆ ಇದು ಆರೋಗ್ಯಕರ ಆಹಾರವಾಗಬಹುದು.

    ಹಾಗಲಕಾಯಿಯಲ್ಲಿರುವ. ಪೌಷ್ಟಿಕಾಂಶಗಳ ಮೌಲ್ಯ.(ಪ್ರತಿ 100ಗ್ರಾಂ)

    ಹಾಗಲಕಾಯಿ ಪೌಷ್ಟಿಕ-ದಟ್ಟವಾದ “ಸೂಪರ್ ಫುಡ್” ಆಗಿದ್ದು, ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಆರೋಗ್ಯವನ್ನು ಉತ್ತೇಜಿಸುವ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ.

    • ವಿಟಮಿನ್–C : 84 ಮಿಗ್ರಾಂ
    • ಕಾರ್ಬೋಹೈಡ್ರೇಟ್ಗಳು : 3.7ಗ್ರಾಂ.
    • ಪೋಲೆಟ್ :
    • ಕಬ್ಬಿನಾಂಶ : ೦.43ಮಿಗ್ರಾಂ
    • ಪೊಟಾಸಿಯಂ : 296ಮಿಗ್ರಾಂ
    • ಮೆಗ್ನೀಷಿಯಂ : 16ಮಿಗ್ರಾಂ
    • ಫೈಬರ್ : 2.8ಗ್ರಾಂ
    • ಪ್ರೋಟೀನ್ : 1ಗ್ರಾಂ
    • ಕ್ಯಾಲೋರಿಗಳು : 17kCL
    • ವಿಟಮಿನ್ –A : 271 IU

    ಚರಂಟಿನ್ ಮತ್ತು ಪಾಲಿಪೆಪ್ಟೈಡ್-ಪಿ ಎಂಬ ಎರಡು ಜೈವಿಕ ಸಕ್ರಿಯ ರಾಸಾಯನಿಕಗಳು ಹಾಗಲಕಾಯಿಯಲ್ಲಿ ಕಂಡುಬರುತ್ತವೆ, ಇವು ಮಧುಮೇಹ ಮತ್ತು ಉರಿಯೂತಕ್ಕೆ ಸಹಾಯ ಮಾಡುತ್ತವೆ ಎಂದು ಭಾವಿಸಲಾಗಿದೆ.

    ಹಾಗಲಕಾಯಿಯ ಆರೋಗ್ಯ, ಲಾಭಗಳು.

    ಚರ್ಮದ ಆರೋಗ್ಯ ಕಾಪಾಡುತ್ತದೆ.

    ಹಾಗಲಕಾಯಿ ಸೇವನೆಯಿಂದ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳು ಮೊಡವೆ ಮತ್ತು ಎಸ್ಜಿಮಾದಂತಹ ಚರ್ಮದ ಸಮಸ್ಯೆಗಳನ್ನು ಶಮನಗೊಳಿಸಲು ಮತ್ತು ಗುಣಪಡಿಸಲು ಸಹಾಯ ಮಾಡುತ್ತದೆ. ಮತ್ತು ಚರ್ಮವನ್ನು ಕಾಂತಿಯುತವಾಗಿಸುತ್ತದೆ.

    ಮೂತ್ರ ಪಿಂಡಗಳ ಕಾರ್ಯಕ್ಕೆ ಸಹಾಯ ಮಾಡುತ್ತದೆ.

    ಹಾಗಲಕಾಯಿ ನಿಮ್ಮ ದೇಹವು ವಿಷವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ಹೆಚ್ಚು ಮೂತ್ರ ವಿಸರ್ಜಿಸುವಂತೆ ಮಾಡುವ ಮೂಲಕ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

    ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು, ಕುಂಠಿತಗೊಳಿಸುತ್ತದೆ.

    ಕೆಲವು ಅಧ್ಯಯನಗಳು ಹಾಗಲಕಾಯಿ ಸಾರವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಎಂದು ಸೂಚಿಸುತ್ತವೆ, ವಿಶೇಷವಾಗಿ ಯಕೃತ್ತು, ಸ್ತನ ಮತ್ತು ಕೊಲೊನ್‌ನಲ್ಲಿ.

    ಅಸ್ತಮ, ಕಡಿಮೆ ಮಾಡುತ್ತದೆ.

    ಹಾಗಲಕಾಯಿಯನ್ನು ಬಹಳ ಹಿಂದಿನಿಂದಲೂ ಚಿಕಿತ್ಸೆಗಾಗಿ ಬಳಸಲಾಗುತ್ತದೆ ಉಬ್ಬಸ, ಬ್ರಾಂಕೈಟಿಸ್, ಮತ್ತು ದೀರ್ಘಕಾಲದವರೆಗೆ ಇರುವ ಕೆಮ್ಮುಗಳು. ಇದು ಉಸಿರಾಟದ ಸಮಸ್ಯೆಗಳಿಗೆ ಸಹಾಯ ಮಾಡಬಹುದು. ನಿಮ್ಮ ವಾಯುಮಾರ್ಗಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಇದು ಹೆಚ್ಚುವರಿ ಲೋಳೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

    ಹಾರ್ಮೋನ್ ಗಳಿಗೆ ಬೆಂಬಲಿಸುತ್ತದೆ.

    ಹಾಗಲಕಾಯಿ ಇನ್ಸುಲಿನ್ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಮೂಲಕ ಹಾರ್ಮೋನುಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದು ಪಾಲಿಸಿಸ್ಟಿಕ್ ಅಂಡಾಶಯದ ಸಿಂಡ್ರೋಮ್ ಮತ್ತು ನಿಮ್ಮ ಋತುಚಕ್ರವನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿ.

    ಕೆಟ್ಟ, ಕೊಲೆಸ್ಟ್ರಾಲ್ {LDL}ಮಟ್ಟವನ್ನು ಕಡಿಮೆ ಮಾಡುತ್ತದೆ .

    ಪ್ರತಿದಿನ ಹಾಗಲಕಾಯಿ ತಿನ್ನುವುದರಿಂದ ನಿಮ್ಮ ಎಲ್‌ಡಿಎಲ್ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟಗಳು ಕಡಿಮೆಯಾಗಬಹುದು, ಇದು ನಿಮ್ಮ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ

    ರೋಗನಿರೋದಕ ಶಕ್ತಿಯನ್ನು ಹೆಚ್ಚಿಸುತ್ತದೆ.

    ಹಾಗಲಕಾಯಿಯಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು, ಇದು ನಿರೋಧಕ ವ್ಯವಸ್ಥೆಯ ಮತ್ತು ದೇಹವನ್ನು ಸೋಂಕುಗಳು ಮತ್ತು ಉರಿಯೂತದಿಂದ ಸುರಕ್ಷಿತವಾಗಿರಿಸುತ್ತವೆ.

    ಮಧುಮೇಹವನ್ನು , ನಿಯಂತ್ರಿಸುತ್ತದೆ.

    ಹಾಗಲಕಾಯಿಯಲ್ಲಿ ಚರಂಟಿನ್ ನಂತಹ ಸಸ್ಯ ಇನ್ಸುಲಿನ್ ತರಹದ ರಾಸಾಯನಿಕಗಳು ಸೇರಿವೆ ಎಂದು ವರದಿಯಾಗಿದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಇದು 2 ಮಧುಮೇಹ. ಕಡಿಮೆ ಮಾಡುತ್ತದೆ.

    ಹಾಗಲಕಾಯಿ ಕೇವಲ ತುಂಬಾ ಕಹಿಯಾದ ತರಕಾರಿಯಲ್ಲ; ಇದು ಪೋಷಕಾಂಶಗಳು ಮತ್ತು ಕೆಲವು ಔಷಧೀಯ ಗುಣಗಳನ್ನು ಹೊಂದಿರುವ ನೈಸರ್ಗಿಕ ಆಹಾರವೆಂದು ಪರಿಗಣಿಸಲಾದ ತರಕಾರಿಯಾಗಿದೆ. ಅಂತೆಯೇ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು, ತೂಕ ನಷ್ಟ ಮತ್ತು ಆರೋಗ್ಯಕರ ಜೀರ್ಣಕ್ರಿಯೆಗೆ ಸಹಾಯ ಮಾಡಲು ಮತ್ತು ರೋಗನಿರೋಧಕ ಬೆಂಬಲವನ್ನು ಒದಗಿಸಲು ಸಹಾಯ ಮಾಡುತ್ತದೆ.

    ಹಾಗಲಕಾಯಿ ಬಳಕೆ ಮಾಡುವ ವಿಧಾನಗಳು.

    • ಹಾಗಲಕಾಯಿ ಜ್ಯೂಸ್.
    • ಹಾಗಲಕಾಯಿ ಪಲ್ಯ.
    • ಹಾಗಲಕಾಯಿ ಚಿಪ್ಸ್.
    • ಹಾಗಲಕಾಯಿ ಸಾಂಬಾರ್.

    ಹಾಗಲಕಾಯಿ ಕಹಿಯಾದರೂ ಆರೋಗ್ಯಕ್ಕೆ ಅಮೂಲ್ಯವಾದ ತರಕಾರಿ. ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು.

  • “ತುಳಸಿ ಗಿಡ”: ಆರೋಗ್ಯ ಮತ್ತು ಧಾರ್ಮಿಕ, ಮಹತ್ವದ ಸಮಗ್ರ ಮಾರ್ಗದರ್ಶಕ”

    “ತುಳಸಿ”, ನಾವು ಪೂಜಿಸಲ್ಪಡುವ. ಒಂದು ದೈವಿಕ ಸಸ್ಯ.ತುಳಸಿ (Holy Basil) ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಬಹು ಮುಖ್ಯವಾದ ಔಷಧೀಯ ಗಿಡವಾಗಿದೆ. ಇದು ಮನೆಗಳ ಮುಂದೆ ಸಾಮಾನ್ಯವಾಗಿ ಬೆಳೆಯುವ ಗಿಡವಾಗಿದ್ದು, ಆರೋಗ್ಯಕ್ಕೂ ಮತ್ತು ಆಧ್ಯಾತ್ಮಿಕತೆಯಿಗೂ ಮಹತ್ವದ್ದಾಗಿದೆ.

    ತುಳಸಿಯನ್ನು, ‘ಸಸ್ಯಗಳ ರಾಣಿ’ ಎಂದು ಕರೆಯಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡವಿರುವುದು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯಕ್ಕೆ (ಶೀತ, ಕೆಮ್ಮು) ಉತ್ತಮವಾಗಿದೆ. ಇದು ಪ್ರತಿದಿನ ನೇರ ಸೂರ್ಯನ ಬೆಳಕು ಮತ್ತು ನಿಯಮಿತ ನೀರು ಬಯಸುವ ಗಿಡ.

    ತುಳಸಿ ಗಿಡವನ್ನು ದೇವರಂತೆ ಪೂಜಿಸಲಾಗುತ್ತದೆ. ವಿಶೇಷವಾಗಿ ಹಿಂದೂ ಸಂಪ್ರದಾಯದಲ್ಲಿ ತುಳಸಿ ಪೂಜೆ ಮಾಡುವುದು ಶುಭಕರ ಎಂದು ನಂಬಲಾಗಿದೆ.

    ತುಳಸಿ ಗಿಡವು ನಮ್ಮ ಭಾರತೀಯ ಮನೆಗಳಲ್ಲಿ ಬಹಳ ಸಾಮಾನ್ಯವಾಗಿ ಕಾಣುವ ಪವಿತ್ರ ಮತ್ತು ಔಷಧೀಯ ಗಿಡವಾಗಿದೆ. ಹಿಂದೂ ಸಂಪ್ರದಾಯದಲ್ಲಿ ತುಳಸಿಯನ್ನು ದೇವಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಇದರ ಆರೋಗ್ಯ ಲಾಭಗಳು ಅಪಾರವಾಗಿವೆ.

    ತುಳಸಿ”ಯಲ್ಲಿ (holy basil) ಪ್ರಮುಖ ಪ್ರಭೇದಗಳಿವೆ. ಅವುಗಳಲ್ಲಿ 3 ಪ್ರಬೇಧ ಮುಖ್ಯ,.

    • ಕೃಷ್ಣ ,ತುಳಸಿ
    • ರಾಮ ತುಳಸಿ
    • ವನ , ತುಳಸಿ

    ಪ್ರತಿಯೊಂದು ತುಳಸಿಗೂ ,ಬೇರೆ ,ಬೇರೆ, ಔಷಧಿಯ ಗುಣಗಳಿವೆ.

    ತುಳಸಿ ಗಿಡವನ್ನು ಮನೆ ಮುಂದೆ ಬೆಳೆಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳು:

    • ಗಾಳಿಯನ್ನು,ಶುದ್ಧಗೊಳಿಸುತ್ತದೆ:

    ತುಳಸಿ ಗಿಡವು, ವಾತಾವರಣಗಳಲ್ಲಿ ಹಾದುಹೋಗುವ ಹಾನಿಕಾರಕ. ಜೀವಣಗಳನ್ನು ಕಡಿಮೆ ಮಾಡುತ್ತದೆ. ಮತ್ತು ಮನೆಯ ಸುತ್ತಲಿನ ಗಾಳಿಯನ್ನು ಸ್ವಚ್ಛವಾಗಿರುತ್ತದೆ ಇ ಪ್ರಕ್ರಿಯೆಯಿಂದ ಪರಿಶುದ್ಧ ಗಾಳಿ ನಮಗೆ ಕೊಡುತ್ತದೆ.

    • ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

    ಮನೆ ಮುಂದೆ ಬೆಳೆಸುವ, ತುಳಸಿ ಗಿಡದ ಎಲೆಗಳನ್ನು ದಿನನಿತ್ಯ ಒಂದೆರಡು ಸೇವಿಸುವುದರಿಂದ, ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

    • ಶೀತ, ಮತ್ತು ಕೆಮ್ಮು, ಸಮಸ್ಯೆಯನ್ನು ನಿವಾರಿಸುತ್ತದೆ:

    ತುಳಸಿ ಗಿಡದಲ್ಲಿರುವ, ಹಲವಾರು ಔಷಧಿಯ ಗುಣಗಳು ಮತ್ತು ರೋಗನಿರೋಧಕ ಶಕ್ತಿಗಳ. ಪರಿಣಾಮದಿಂದ ಶೀತ ,ಮತ್ತು ಕೆಮ್ಮು, ಇನ್ನಿತರ ಆರೋಗ್ಯಕರ ಸಮಸ್ಯೆಗಳನ್ನು ನಿವಾರಿಸುತ್ತದೆ

    ಮನಸ್ಸಿಗೆ ಶಾಂತಿ. ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

    ತುಳಸಿ ಗಿಡದ ಸುತ್ತಲಿನ ವಾತಾವರಣ ಮನಸ್ಸಿಗೆ ಶಾಂತಿ ಮತ್ತು ಹಿತವನ್ನು ನೀಡುತ್ತದೆ. ಇದರಲ್ಲಿ ದೈವಿಕ ಗುಣವಿರುವುದರಿಂದ ಪಾಸಿಟಿವ್ ಎನರ್ಜಿ, ಇನ್ನು ನೀಡುತ್ತದೆ. ಇದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಹಾಗಾಗಿ ಒತ್ತಡವನ್ನು ನಿಯಂತ್ರಿಸುತ್ತದೆ

    ಕೀಟಗಳನ್ನು.ಹೋಗಲಾಡುತ್ತದೆ:

    ತುಳಸಿ ಗಿಡದ ವಾಸನೆ ಕೀಟಗಳನ್ನು (mosquitoes) ದೂರ ಇಡಲು ಸಹಕಾರಿ.

    ತುಳಸಿ ಗಿಡವನ್ನು ಮನೆ ಮುಂದೆ ಬೆಳೆಸುವುದು ಆರೋಗ್ಯ, ಮನಶಾಂತಿ ಮತ್ತು ಪರಿಸರದ ಶುದ್ಧತೆಯನ್ನು ನೀಡುವ ಉತ್ತಮ ಅಭ್ಯಾಸವಾಗಿದೆ. ಪ್ರತಿಯೊಂದು ಮನೆಯಲ್ಲಿ ತುಳಸಿ ಗಿಡ ಇದ್ದರೆ ಅದು ನೈಸರ್ಗಿಕ ಔಷಧಿಯಂತೆಯೇ ಕೆಲಸ ಮಾಡುತ್ತದೆ.

    ಇದೇ ಕಾರಣದಿಂದ ತುಳಸಿ ಗಿಡವನ್ನು ಔಷಧೀಯ ಸಸ್ಯ, (medicine plant) ಇಂದು ಕರೆಯಲಾಗುತ್ತದೆ .

    ಹಾಗಾಗಿ ತುಳಸಿ ಗಿಡ ಅದಕ್ಕೆ ಭಾರತೀಯ ಸಂಪ್ರದಾಯದಲ್ಲಿ, ದೇವಿ ರೂಪವೆಂದು ಭಕ್ತಿಯಿಂದ ಪೂಜಿಸಲ್ಪಡುತ್ತದೆ.

    “ಸಾರ್ವಜನಿಕ ಜೀವನದಲ್ಲಿಯೇ ಅಲ್ಲ, ತುಳಸಿ ಗಿಡ ನಮ್ಮ ದಿನಚರಿಯ ಭಾಗವಾಗುವಂತೆ ಮಾಡುವುದರಿಂದ, ನಮ್ಮ ಮನಸ್ಸಿಗೂ, ದೇಹಕ್ಕೂ ಹಾಗೂ ಪರಿಸರಕ್ಕೂ ಸಹ ಶುದ್ಧತೆ ಮತ್ತು ಸಮತೋಲನವನ್ನು ನೀಡುತ್ತದೆ. ಪ್ರತಿದಿನ ತುಳಸಿ ಗಿಡವನ್ನು ಬೆಳೆಸುವ ಮೂಲಕ, ನಾವು ನಾವೇ ನಮ್ಮ ಆರೋಗ್ಯ ಮತ್ತು ಶಾಂತಿಯನ್ನು ಬೆಳೆಸಿಕೊಳ್ಳಬಹುದು.”

  • ನೀರನ್ನೂ, ಅಮೃತ ಮಾಡುವ ವಿಧಾನ? ತಾಮ್ರದ ಪಾತ್ರೆಯ ನೀರಿನ ಸೇವನೆಯಿಂದ ಆಗುವ ಆರೋಗ್ಯ ಲಾಭಗಳು!.

    ತಾಮ್ರದ ಪಾತ್ರೆಗಳಿಂದ ನೀರು ಕುಡಿಯುವ ಪ್ರಾಚೀನ ಭಾರತೀಯ ಅಭ್ಯಾಸದ ಹಿಂದಿನ ವಿಜ್ಞಾನವನ್ನು ಇತರ ಹಲವಾರು ಅಧ್ಯಯನಗಳೂ ಬೆಂಬಲಿಸಿವೆ ಹಾಗೂ ಎಲ್ಲವೂ ಸಕಾರಾತ್ಮಕ ತೀರ್ಮಾನವನ್ನೇ ನೀಡಿವೆ.

    ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರು ತಾಮ್ರದ ಪಾತ್ರೆಗಳಿಂದ ನೀರು ಕುಡಿಯುತ್ತಾ ಬಂದಿದ್ದಾರೆ ಹಾಗೂ ಇದರ ಪ್ರಯೋಜನಗಳನ್ನು ಪಡೆದಿದ್ದಾರೆ. ಇಂದಿಗೂ ಹಲವು ಹಿರಿಯರು ತಾಮ್ರದ ಲೋಟಗಳಿಂದಲೇ ನೀರು ಕುಡಿಯುವುದನ್ನು ಬೆಂಬಲಿಸುತ್ತಾರೆ. ಆದರೆ ಯುವಜನತೆ ಕೈಗೆ ಸಿಕ್ಕಿದ ಪ್ಲಾಸ್ಟಿಕ್ ಅಥವಾ ಇತರ ಲೋಹಗಳ ಲೋಟಗಳಿಂದಲೇ ನೀರು ಕುಡಿಯುತ್ತಾರೆ. ಇಂದು ನಮ್ಮ ಹಳೆಯ ಸಂಪ್ರದಾಯಗಳು ವೈಜ್ಞಾನಿಕ ಕಾರಣಗಳಿಂದಾಗಿ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿವೆ. ಇವುಗಳಲ್ಲೊಂದು ತಾಮ್ರದ ಪಾತ್ರೆಗಳ ಮರುಬಳಕೆ. ಇದಕ್ಕೂ ಮುನ್ನ ತಾಮ್ರ ನಮ್ಮ ದೇಹಕ್ಕೇಕೆ ಅವಶ್ಯ ಎಂಬುದನ್ನು ನೋಡೋಣ…

    ತಾಮ್ರದ, ಮಹತ್ವವೇನು?

    ತಾಮ್ರವು ದೇಹಕ್ಕೆ ಅಲ್ಪಪ್ರಮಾಣದಲ್ಲಿ ಅಗತ್ಯವಾದ ಖನಿಜಗಳಲ್ಲಿ ಒಂದಾಗಿದೆ, ಇದು ಹಲವಾರು ಆರೋಗ್ಯಕರ ಪ್ರಯೋಜನ ಗಳನ್ನು ನೀಡುತ್ತದೆ. ಇದು ಕೆಂಪು ರಕ್ತ ಕಣಗಳು ಮತ್ತು ಕೊಲ್ಯಾಜೆನ್‌ಗಳನ್ನು ನಿರ್ಮಿಸಲು ಅಗತ್ಯವಾಗಿವೆ. ಅಲ್ಲದೇ ಆಹಾರದಿಂದ ದೇಹಕ್ಕೆ ಅಗತ್ಯವಿರುವ ಶಕ್ತಿಯ ಉತ್ಪಾದನೆ ಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.

    “ತಾಮ್ರದ “(copper ) ಬಳಕೆ ನಮ್ಮ ಪೂರ್ವಜರಿಂದಲೇ ಪರಿಚಯಿಸಲ್ಪಟ್ಟಿದೆ.

    ಅಧ್ಯಾಯನದ ವರದಿಯ ಪ್ರಕಾರ ತಾಮ್ರದ ಪಾತ್ರೆಗಳಲ್ಲಿ ಸುಮಾರು ಹದಿನಾರು ಗಂಟೆಗಳ ಕಾಲ ಶೇಖರಿಸಿಟ್ಟ ನೀರಿನಲ್ಲಿ ಸಾಲ್ಮೋನೆಲ್ಲಾ ಮತ್ತು ಈ ಕೊಲೈಗಳಂತರ ಮಾರಕ ಬ್ಯಾಕ್ಟೀರಿಯಾಗಳು ಇಲ್ಲವಾಗುತ್ತವೆ. ಅಲ್ಲದೇ ನೀರು ಕುಡಿಯುವ ಅರ್ಹತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿರುತ್ತದೆ. ಈ ಬಗ್ಗೆ ನಡೆದ ಅಧ್ಯಯನಗಳಲ್ಲಿ ಈ ಮಾಹಿತಿ ಪ್ರಮುಖವಾಗಿ ಕಂಡುಬಂದಿದ್ದು ಇನ್ನೂ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

    ತಾಮ್ರದ ಪಾತ್ರೆಗಳಿಂದ ನೀರು ಕುಡಿಯುವ ಪ್ರಾಚೀನ ಭಾರತೀಯ ಅಭ್ಯಾಸದ ಹಿಂದಿನ ವಿಜ್ಞಾನವನ್ನು ಇತರ ಹಲವಾರು ಅಧ್ಯಯನಗಳೂ ಬೆಂಬಲಿಸಿವೆ ಹಾಗೂ ಎಲ್ಲವೂ ಸಕಾರಾತ್ಮಕ ತೀರ್ಮಾನವನ್ನೇ ನೀಡಿವೆ. ಒಂದು ವೇಳೆ ನೀವು ಕುಡಿಯುವ ನೀರನ್ನು ನೈಸರ್ಗಿಕವಾಗಿ ಶುದ್ಧೀಕರಿಸಲು ಬಯಸಿದರೆ, ಅದನ್ನು ತಾಮ್ರದ ಪಾತ್ರೆಯಲ್ಲಿ ಕನಿಷ್ಠ ನಾಲ್ಕು ಗಂಟೆಗಳ ಕಾಲ ಸಂಗ್ರಹಿಸಿಟ್ಟ ಬಳಿಕ ಕುಡಿಯಿರಿ ತಾಮ್ರದ ಪಾತ್ರೆಯಿಂದ ನೀರನ್ನು ಕುಡಿಯುವ ಅಭ್ಯಾಸ ಒಳ್ಳೆಯದು.

    ತಾಮ್ರದ ಪಾತ್ರೆಯ ನೀರು ದೇಹಕ್ಕೆ ಆರೋಗ್ಯಕರ ಪ್ರಯೋಜನಗಳನ್ನು ನೀಡುತ್ತದೆಯೇ?

    ನೀರನ್ನು ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನಂತರ, ನೀರಿನಲ್ಲಿ ತಾಮ್ರದ ಅಂಶ ಆರೋಗ್ಯಕ್ಕೆ ಸಾಕಷ್ಟಾಗುವ ಮಿತಿಯನ್ನು ಮೀರಿ ಹೆಚ್ಚಾಗುತ್ತದೆ ಎಂಬ ಆರೋಪವೂ ಕೇಳಿಬರುತ್ತಿದೆ. ಇದನ್ನು ತಾಮ್ರದ ಪಾತ್ರೆಯಿಂದ ಕುಡಿಯುವ ನೀರಿನ ಅಡ್ಡಪರಿಣಾಮಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ ಆದರೆ ವಿಶ್ವ ಆರೋಗ್ಯ ಸಂಸ್ಥೆ ಈ ಆರೋಪದಲ್ಲಿ ಹುರುಳಿಲ್ಲ ಎಂದಿದೆ. ಮತ್ತು ಅಧ್ಯಯನವೊಂದರಲ್ಲಿ ನೀರಿಗೆ ಬಿಡುಗಡೆಗೊಂಡ ತಾಮ್ರದ ಅಂಶ ಅನುಮತಿಸುವ ಮಿತಿಯೊಳಗೇ ಉಳಿಯುತ್ತದೆ ಹಾಗೂ ಈ ನೀರು ಆರೋಗ್ಯಕರ ಮತ್ತು ಸುರಕ್ಷಿತ ಎಂದು ತಿಳಿಸಿದೆ.

    ವೃದ್ಯಾಪ್ಯ (over age)ಆಗುವುದನ್ನು, ನಿಧಾನಗೊಳಿಸುತ್ತದೆ.

    • ವೃದಾಪ್ಯದ ಚಿಹ್ನೆಗಳಾದ ನೆರಿಗೆಗಳು ವಯಸ್ಸಾದಂತೆ ಹೆಚ್ಚು ಆಳವಾಗುತ್ತವೆ. ತಾಮ್ರದಲ್ಲಿ ನೈಸರ್ಗಿಕ ಆಂಟಿ ಆಕ್ಸಿಡೆಂಟ್ ಗುಣಗಳಿದ್ದು ಜೀವಕೋಶಗಳ ಹುಟ್ಟುವಿಕೆಗೆ ನೆರವಾಗ್ತುತದೆ. ಅಲ್ಲದೇ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳನ್ನು ಹಿಮ್ಮೆಟ್ಟಿಸಲೂ ತಾಮ್ರ ನೆರವಾಗುವ ಮೂಲಕ ಈ ಗುರುತುಗಳು ಮೂಡುವುದನ್ನು ತಡವಾಗಿಸುತ್ತದೆ.

    ಹೃದಯದ, ಆರೋಗ್ಯವನ್ನು ಕಾಪಾಡುತ್ತದೆ. ಮತ್ತು ರಕ್ತದೊಟ್ಟ ಒತ್ತಡವನ್ನು, ನಿಯಂತ್ರಿಸುತ್ತದೆ

    • ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ ರಕ್ತದೊತ್ತಡವನ್ನು ನಿಯಂತ್ರಿಸಲು ಹಾಗೂ ಹೃದಯದ ಬಡಿತವನ್ನು ಕ್ರಮಬದ್ದಗೊಳಿಸಲು ತಾಮ್ರ ಉತ್ತಮವಾಗಿದೆ. ಅಲ್ಲದೇ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸಿ ಅಧಿಕ ರಕ್ತದೊತ್ತಡವನ್ನು ತಗ್ಗಿಸಲೂ ನೆರವಾಗುತ್ತದೆ

    ರಕ್ತ ಹೀನತೆಯನ್ನು ಹೋಗಲಾಡಿಸುತ್ತದೆ.

    ದೇಹದಲ್ಲಿ ತಾಮ್ರ ಕಡಿಮೆಯಾದರೆ ನಮ್ಮ ದೇಹ ಕಬ್ಬಿಣವನ್ನು ಹೀರಿಕೊಳ್ಳುವ ಸಾಮರ್ಥವೂ ಕಡಿಮೆಯಾಗುತ್ತದೆ. ಪರಿಣಾಮ, ರಕ್ತಹೀನತೆ. ಹಾಗಾಗಿ ಆಹಾರದಲ್ಲಿ ಕಬ್ಬಿಣದ ಅಂಶವಿದ್ದರೂ, ಇದನ್ನು ಹೀರಿಕೊಳ್ಳಲು ತಾಮ್ರದ ನೆರವು ಬೇಕೇ ಬೇಕು. ತಾಮ್ರದ ಅಂಶ ದೇಹದಲ್ಲಿ ಹೆಚ್ಚಿದರೆ ಕಬ್ಬಿಣದ ಅಂಶವೂ ಹೆಚ್ಚುತ್ತದೆ, ತನ್ಮೂಲಕ ರಕ್ತಹೀನತೆಯ ತೊಂದರೆ ಇಲ್ಲವಾಗಿಸುತ್ತದೆ

    ಚರ್ಮದ ಆರೋಗ್ಯ ಮತ್ತು ಮೆಲನಿನ್(melaline) ಉತ್ಪಾದನೆಯನ್ನು ಹೆಚ್ಚಿಸುತ್ತದೆ.

    • ನಿಮ್ಮ ಚರ್ಮದ ಆರೋಗ್ಯವನ್ನು ಉತ್ತಮಗೊಳಿಸಲು ತಾಮ್ರವೂ ನೆರವು ನೀಡುತ್ತದೆ. ಇದು ನಿಮ್ಮ ಚರ್ಮ, ಕೂದಲು ಮತ್ತು ಕಣ್ಣುಗಳ ಬಣ್ಣಕ್ಕೆ ಕಾರಣವಾಗುವ ವರ್ಣದ್ರವ್ಯವಾದ ಮೆಲನಿನ್ ಉತ್ಪಾದನೆ ಯನ್ನು ಹೆಚ್ಚಿಸುತ್ತದೆ. ತನ್ಮೂಲಕ ಕೂದಲು ಉದುರುವುದನ್ನು ತಡೆಯುತ್ತದೆ. ತಾಮ್ರದ ಅಂಶ ಅದರ ಕೋಶ ಉತ್ಪಾದಿಸುವ ಗುಣಲಕ್ಷಣಗಳಿಂದಾಗಿ ಚರ್ಮದ ಪುನರುತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಚರ್ಮದ ಮೃದುತ್ವ, ಸ್ಥಿತಿಸ್ಥಾಪಕತ್ವ ಮತ್ತು ದೃಢತೆಯನ್ನೂ ಹೆಚ್ಚಿಸುತ್ತದೆ.

    ಅತಿಸೂಕ್ಷ್ಮಜೀವಿಗಳಿಂದ ಎದುರಾಗುವ ಸೋಂಕುಗಳ ವಿರುದ್ಧ ಹೋರಾಡುತ್ತದೆ

    • ತಾಮ್ರವು ಅತಿಸೂಕ್ಷ್ಮಜೀವಿ ನಿರೋಧಕ ಗುಣವನ್ನು ಹೊಂದಿದೆ ಎಂದು ಸಾಬೀತಾಗಿದೆ. ಇದು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಪರಿಣಾಮಕಾರಿಯಾಗಿ ಕೊಲ್ಲುತ್ತದೆ ಮತ್ತು ಸೋಂಕಿನ ವಿರುದ್ಧ ಪ್ರಬಲವಾಗಿ ಹೋರಾಡಲು ನೆರವಾಗುತ್ತದೆ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟ ನೀರನ್ನು ಕುಡಿಯುವ ಬಗ್ಗೆ ಸಲಹೆಗಳು, ಸರಿಯಾದ ಮತ್ತು ಸುರಕ್ಷಿತ ವಿಧಾನ: ಈಗಾಗಲೇ ಚರ್ಚಿಸಿದಂತೆ ತಾಮ್ರದ ಪಾತ್ರೆಯಿಂದ ನೀರು ಕುಡಿಯುವುದು ತುಂಬಾ ಪ್ರಯೋಜನಕಾರಿ. ಆದರೆ, ಕೇವಲ ತಾಮ್ರದ ಪಾತ್ರೆಯಿಂದ ನೀರನ್ನು ಕುಡಿಯುವುದು ಸಾಕಾಗುವುದಿಲ್ಲ. ಗರಿಷ್ಠ ಪ್ರಯೋಜನಗಳನ್ನು ಪಡೆಯಬೇಕಾದರೆ ತಾಮ್ರದ ಪಾತ್ರೆಯಲ್ಲಿ ನೀರನ್ನು ಸರಿಯಾಗಿ ಮತ್ತು ಸುರಕ್ಷಿತ ಕ್ರಮದಲ್ಲಿ ಸಂಗ್ರಹಿಸಿಟ್ಟು ಕುಡಿಯುವುದು ಅತ್ಯಗತ್ಯ. ತಾಮ್ರದ ಪಾತ್ರೆಯಿಂದ ನೀರನ್ನು ಕುಡಿಯುವುದು,ಉತ್ತಮ.

    ತಾಮ್ರದ ಪಾತ್ರೆ ನಿರ್ಮಿಸಲು ಬಳಸುವ ತಾಮ್ರದ ತಗಡಿನ ಗುಣಮಟ್ಟವು ಪ್ರಮುಖ ಪಾತ್ರ ವಹಿಸುತ್ತದೆ. ಅಧಿಕೃತ ತಾಮ್ರ ಮಾರಾಟಗಾರರಿಂದ ತಾಮ್ರದ ಪಾತ್ರೆಯನ್ನು ಖರೀದಿಸಿ. ಅಲ್ಲದೆ, ಈ ಪಾತ್ರೆ 100% ತಾಮ್ರದಿಂದ ಮಾಡಲ್ಪಟ್ಟಿದೆ ಎಂದು ಖಚಿತಪಡಿಸಿಕೊಳ್ಳಿ. ನೀವು ಹೊಸ ತಾಮ್ರದ ಜಗ್ ಅಥವಾ ಬಾಟಲಿಯನ್ನು ಖರೀದಿಸಿದ ನಂತರ, ಅದರಿಂದ ನೇರವಾಗಿ ನೀರನ್ನು ಕುಡಿಯಬೇಡಿ. ಬದಲಾಗಿ, ಮೊದಲಿಗೆ ನೈಸರ್ಗಿಕ ಆಮ್ಲೀಯ ದ್ರಾವಣದಿಂದ ತೊಳೆದು ಒಣಗಿಸಿ. ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸಲು ನೀವು ನಿಂಬೆ ಮತ್ತು ಉಪ್ಪನ್ನು ಸಹಾ ಬಳಸಬಹುದು.

    • ತಾಮ್ರದ ಪಾತ್ರೆಯಲ್ಲಿ ಸಂಗ್ರಹವಾಗಿರುವ ನೀರಿನ ಗರಿಷ್ಠ ಲಾಭವನ್ನು ಪಡೆಯಲು ನೀವು ಬಯಸಿದರೆ, ನಂತರ ನೀರನ್ನು ತಾಮ್ರದ ಪಾತ್ರೆಯಲ್ಲಿ ಕನಿಷ್ಠ ಎಂಟು ಗಂಟೆಗಳ ಕಾಲ ಸಂಗ್ರಹಿಸಿ.
    • ನೀವು ರಾತ್ರಿಯಲ್ಲಿ ನೀರನ್ನು ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ನಂತರ ಮುಂಜಾನೆ ಕುಡಿಯಬಹುದು. ತಾಮ್ರದ ಪಾತ್ರೆಯಲ್ಲಿ 12 ಗಂಟೆಗಳಿಗಿಂತ ಹೆಚ್ಚು ಕಾಲ ಸಂಗ್ರಹವಾಗಿರುವ ನೀರನ್ನು ಕುಡಿಯಬೇಡಿ.
    • ತಾಮ್ರದ ಬಾಟಲ್ ಅಥವಾ ಜಗ್ ಅನ್ನು ಎಂದಿಗೂ ಫ್ರೀಜರ್ ನಲ್ಲಿ ಇರಿಸಬೇಡಿ.
    • ತಾಮ್ರದ ಅಂಶವಿರುವ ನೀರನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿಯುದು ದೇಹದಲ್ಲಿ ತಾಮ್ರದ ಪ್ರಮಾಣವನ್ನು ಸಮತೋಲನದಲ್ಲಿರಿಸಲು ಬೇಕಾದಷ್ಟಾಯಿತು.
    • ಕುಡಿಯುವ ನೀರನ್ನು ದಿನವಿಡೀ ತಾಮ್ರದ ಪಾತ್ರೆಯಲ್ಲಿಇಡಬೇಡಿ. ಅತಿಯಾದರೆ ಅಮೃತವೂ ವಿಷವಂತೆ, ಮತ್ತು ತಾಮ್ರದ ವಿಷಯದಲ್ಲೂ ಅದೇ ಅನ್ವಯವಾಗುತ್ತದೆ.

    ನಮ್ಮ ದೇಹದಲ್ಲಿ ತಾಮ್ರವು ನೈಸರ್ಗಿಕವಾಗಿ ಉತ್ಪತ್ತಿಯಾಗುವುದಿಲ್ಲ. ಆದ್ದರಿಂದ ನಮಗೆ ಆಹಾರ ಅಥವಾ ನೀರಿನ ಮೂಲಕವೇ ತಾಮ್ರದ ಪೂರೈಕೆಯಾಗೇಕು. ತಾಮ್ರದ ಅಂಶವಿರುವ ಆಹಾರದ ಸೇವನೆಗಿಂತಲೂ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದು ಉತ್ತಮ ಮಾರ್ಗವಾಗಿದೆ.ಅಲ್ಲದೆ, ಕೇವಲ ತಾಮ್ರದ ಪಾತ್ರೆಯಿಂದ ನೀರನ್ನು ಕುಡಿಯುವುದು ಸಾಕಾಗುವುದಿಲ್ಲ. ತಾಮ್ರದ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ತಾಮ್ರದ ಪಾತ್ರೆಯಲ್ಲಿ ಕನಿಷ್ಠ ಎಂಟು ಗಂಟೆಗಳ ಕಾಲ ನೀರನ್ನು ಸಂಗ್ರಹಿಸಬೇಕು ಮತ್ತು ನಂತರ ಈ ನೀರನ್ನು ಸೇವಿಸಬೇಕು. ನೀರನ್ನು ಇನ್ನೂ ಹೆಚ್ಚು ಗಂಟೆ ಕಾಲ ಸಂಗ್ರಹಿಸಿಟ್ಟರೆ ಹೆಚ್ಚು ತಾಮ್ರದ ಅಂಶ ನೀರಿನಿಂದ ಹೀರಲ್ಪಡುತ್ತದೆ, ಮತ್ತು ಇದು ದೇಹಕ್ಕೆ ಪ್ರಯೋಜನಕಾರಿ ಯಾದ ಅನೇಕ ಅಮೂಲ್ಯವಾದ ಗುಣಗಳನ್ನು ಪಡೆಯುತ್ತದೆ.

    ಈಗೆ ತಾಮ್ರದ ನೀರನ್ನು ಕುಡಿಯುವುದು ಉತ್ತಮ ಆರೋಗ್ಯಕ್ಕೆ, ಒಳ್ಳೆಯದು.

    ಗಾಯಗಳು ಶೀಘ್ರವಾಗಿ ಮಾಗಲು ನೆರವಾಗುತ್ತದೆ

    ತಾಮ್ರದ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಮತ್ತು ವೈರಸ್ ನಿವಾರಕ ಗುಣಗಳು ನಮ್ಮ ದೇಹದ ಸರಿಪಡಿಸಿಕೊಳ್ಳುವಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅಲ್ಲದೇ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಹಾಗಾಗಿ ಕೇವಲ ಬಾಹ್ಯ ಗಾಯಗಳು ಮಾತ್ರವಲ್ಲ, ಆಂತರಿಕ ಗಾಯಗಳೂ ಶೀಘ್ರವಾಗಿ ಮಾಗುತ್ತವೆ.

    ನಿಮ್ಮ ದೇಹಕ್ಕೆ ತಾಮ್ರವು ವಿಷಕಾರಿಯಾಗಿದೆ ಎಂಬುದು ಒಂದು ಪ್ರಚಲಿತ ಮಿಥ್ಯೆಯಾಗಿದೆ. ಆದರೆ ಇದು ನಿಜವಲ್ಲ; ವಾಸ್ತವವಾಗಿ, ತಾಮ್ರವು ದೇಹದ ಅಗತ್ಯ ಅಂಶಗಳಲ್ಲಿ ಒಂದಾಗಿದೆ. ಇದು ನಮ್ಮ ಕಿಣ್ವ ವ್ಯವಸ್ಥೆಗೆ ಅಗತ್ಯವಿರುವ ಒಂದು ಪ್ರಮುಖ ಖನಿಜವಾಗಿದೆ, ಮತ್ತು ಇದು ವಿಭಿನ್ನ ರೀತಿಯ ಜೀವ ರಾಸಾಯನಿಕ ಕ್ರಿಯೆಗಳು ನಡೆಯಲು ಸಹಾಯ ಮಾಡುತ್ತದೆ. ಆದರೆ ತುಕ್ಕು ಹಿಡಿದ ತಾಮ್ರವನ್ನು ಸೇವಿಸಿದರೆ ಮಾತ್ರ ತಾಮ್ರವು ವಿಷಕಾರಿಯಾಗುತ್ತದೆ. ಆದ್ದರಿಂದ 100% ತಾಮ್ರದಿಂದ ಮಾಡಿದ ತಾಮ್ರದ ಜಗ್ ಅಥವಾ ಬಾಟಲಿಯನ್ನು ಖರೀದಿಸುವುದು ಅತ್ಯಗತ್ಯ.

  • “ಸ್ಟ್ರಾಬೆರಿ”, ರುಚಿಗಷ್ಟೇ ಅಲ್ಲ, ನಿಮ್ಮ ಆರೋಗ್ಯಕ್ಕೂ, ಸೂಪರ್ ಫುಡ್.

    ಸ್ಟ್ರಾಬೆರಿ(strawberry )ಒಂದು ರುಚಿಕರವಾದ ಮತ್ತು ಸುಗಂಧಭರಿತ ಹಣ್ಣು. ಇದರ ಕೆಂಪು ಬಣ್ಣ ಮತ್ತು ಸಿಹಿ-ಹುಳಿ ರುಚಿ ಎಲ್ಲರಿಗೂ ಇಷ್ಟವಾಗುತ್ತದೆ. ಇದು ಕೇವಲ ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾ ಉಪಯುಕ್ತವಾಗಿದೆ.

    ಸ್ಟ್ರಾಬೆರಿ(strawberry )ಒಂದು ಚಿಕ್ಕ ಗಾತ್ರದ ಕೆಂಪು ಹಣ್ಣು. ಇದರ ಮೇಲ್ಭಾಗದಲ್ಲಿ ಸಣ್ಣ ಬೀಜಗಳು ಕಾಣಿಸುತ್ತವೆ. ಇದನ್ನು ಸಾಮಾನ್ಯವಾಗಿ ತಂಪಾದ ಪ್ರದೇಶಗಳಲ್ಲಿ ಬೆಳೆಸಲಾಗುತ್ತದೆ.

    ಸ್ಟ್ರಾಬೆರಿ,ಯಲ್ಲಿನ ಪೌಷ್ಟಿಕಾಂಶಗಳು.

    • ಫೈಬರ್.
    • ಆಂಟಿಆಕ್ಸಿಡೆಂಟ್.
    • ಪೋಲಿಕ್ ಆಸಿಡ್.
    • ವಿಟಮಿನ್–C.
    • ಪೊಟ್ಯಾಶಿಯಂ.

    ಇವು ದೇಹದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ.

    ಇ ಪೋಷಕಂಶಗಳು ಹೇಗೆ ಸಹಾಯ ಮಾಡುತ್ತದೆ.

    ವಿಟಮಿನ್ –C:ರೋಗನಿರೋಧಕ ಕಾರ್ಯವನ್ನು ಹೆಚ್ಚಿಸುತ್ತದೆ, ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಶಕ್ತಿಶಾಲಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.

    ಫೈಬರ್:ಜೀರ್ಣಕ್ರಿಯೆಯ ಆರೋಗ್ಯವನ್ನು ಬೆಂಬಲಿಸುತ್ತದೆ, ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

    ಪೋಲಿಕ್ ಆಸಿಡ್: ಜೀವಕೋಶದ ಕಾರ್ಯ ಮತ್ತು ಅಂಗಾಂಶ ಬೆಳವಣಿಗೆಗೆ ಅತ್ಯಗತ್ಯ, ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ಮುಖ್ಯವಾಗಿದೆ.

    ಹೃದಯಕ್ಕೆ, ಸಿಹಿಯಾದ ಹಣ್ಣು.

    ಭಾರತದಲ್ಲಿ ಹೃದಯ ಕಾಯಿಲೆಯು ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆದಾಗ್ಯೂ, ಸ್ಟ್ರಾಬೆರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸ್ಟ್ರಾಬೆರಿಗಳು HDL (ಉತ್ತಮ ಕೊಲೆಸ್ಟ್ರಾಲ್) ಮಟ್ಟವನ್ನು ಹೆಚ್ಚಿಸಬಹುದು, ರಕ್ತದೊತ್ತಡವನ್ನು ಸುಧಾರಿಸಬಹುದು ಮತ್ತು ಪ್ಲೇಟ್‌ಲೆಟ್ ಕಾರ್ಯವನ್ನು ಬೆಂಬಲಿಸಬಹುದು ಎಂದು ಸಂಶೋಧನೆ ಸೂಚಿಸುತ್ತದೆ. ಅವು ಈ ಕೆಳಗಿನವುಗಳಲ್ಲಿಯೂ ಪರಿಣಾಮಕಾರಿಯಾಗುತ್ತವೆ:

    ~:ರಕ್ತದ ಉತ್ಕರ್ಷಣ ನಿರೋಧಕ ಸ್ಥಿತಿಯನ್ನು ಸುಧಾರಿಸುವುದು

    ~:ಉರಿಯೂತವನ್ನು ಕಡಿಮೆ ಮಾಡುವುದು

    ~:ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವುದು

    ~:ನಾಳೀಯ ಕಾರ್ಯವನ್ನು ಹೆಚ್ಚಿಸುವುದು

    ~:ರಕ್ತದ ಲಿಪಿಡ್ ಪ್ರೊಫೈಲ್‌ಗಳನ್ನು ಸುಧಾರಿಸುವುದು

    ~: – LDL (ಕೆಟ್ಟ ಕೊಲೆಸ್ಟ್ರಾಲ್) ನ ಆಕ್ಸಿಡೀಕರಣವನ್ನು ಕಡಿಮೆ ಮಾಡುತ್ತದೆ.

    ಇದಲ್ಲದೆ, ಹೆಪ್ಪುಗಟ್ಟಿದ ಸ್ಟ್ರಾಬೆರಿಗಳು ಎಲ್ಡಿಎಲ್ ಮಟ್ಟಗಳು ಮತ್ತು ಉರಿಯೂತದ ಗುರುತುಗಳನ್ನು ಕಡಿಮೆ ಮಾಡುವ ಮೂಲಕ ಮಧುಮೇಹ ರೋಗಿಗಳಿಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.

    ರೋಗ ನಿರೋಧಕ ಶಕ್ತಿಯನ್ನು, ಹೆಚ್ಚಿಸುತ್ತದೆ.

    ಸ್ಟ್ರಾಬೆರಿಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಕೇಂದ್ರವಾಗಿದ್ದು, ಅವುಗಳಲ್ಲಿರುವ ಹೆಚ್ಚಿನ ವಿಟಮಿನ್ ಸಿ ಅಂಶಕ್ಕೆ ಧನ್ಯವಾದಗಳು.

    ವಿಟಮಿನ್ ಸಿ : ಶೀತ, ಜ್ವರ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಅತ್ಯಗತ್ಯ.

    ಕೇವಲ ಒಂದು ಸೇವೆಯು 51.5 ಮಿಗ್ರಾಂ ವಿಟಮಿನ್ ಸಿ ಅನ್ನು ಒದಗಿಸುತ್ತದೆ, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದಲ್ಲದೆ, ಉತ್ಕರ್ಷಣ ನಿರೋಧಕವಾಗಿಯೂ ಕಾರ್ಯನಿರ್ವಹಿಸುತ್ತದೆ, ದೇಹವನ್ನು ಸ್ವತಂತ್ರ ರಾಡಿಕಲ್ ಹಾನಿಯಿಂದ ರಕ್ಷಿಸುತ್ತದೆ.

    ಚರ್ಮವನ್ನು, ಕಾಂತಿಯುತಗೊಳಿಸುತ್ತದೆ.

    ಸ್ಟ್ರಾಬೆರಿಗಳು ಕಾಂತಿಯುತ ಮತ್ತು ಆರೋಗ್ಯಕರ ಚರ್ಮವನ್ನು ಪಡೆಯಲು ಒಂದು ರಹಸ್ಯ ಅಸ್ತ್ರವಾಗಿದೆ. ವಿಟಮಿನ್ ಸಿ ಮತ್ತು ಎಲಾಜಿಕ್ ಆಮ್ಲದಂತಹ ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಅವು ನಿಮ್ಮ ಚರ್ಮವನ್ನು ಹಾನಿಯಿಂದ ರಕ್ಷಿಸಲು ಮತ್ತು ಅದನ್ನು ಯೌವ್ವನದಿಂದ ಕಾಣುವಂತೆ ಮಾಡಲು ಸಹಾಯ ಮಾಡುತ್ತದೆ. ಸ್ಟ್ರಾಬೆರಿಗಳಲ್ಲಿನ ವಿಟಮಿನ್ ಸಿ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಚರ್ಮದ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ ಮತ್ತು ನೈಸರ್ಗಿಕ ಹೊಳಪನ್ನು ಉತ್ತೇಜಿಸುತ್ತದೆ. ಹೆಚ್ಚುವರಿಯಾಗಿ, ಎಲಾಜಿಕ್ ಆಮ್ಲವು ಅಕಾಲಿಕ ವಯಸ್ಸಾಗುವಿಕೆಗೆ ಎರಡು ಪ್ರಮುಖ ಕಾರಣಗಳಾದ UV ಹಾನಿ ಮತ್ತು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಪ್ರಬಲ ರಕ್ಷಣೆ ನೀಡುತ್ತದೆ.ಕಾಲಜನ್ ಸ್ಥಗಿತವನ್ನು ತಡೆಗಟ್ಟುವ ಮತ್ತು ಉರಿಯೂತದ ಪ್ರತಿಕ್ರಿಯೆಗಳನ್ನು ಕಡಿಮೆ ಮಾಡುವ ಮೂಲಕ, ಸ್ಟ್ರಾಬೆರಿಗಳು ಸುಕ್ಕುಗಳ ರಚನೆಯನ್ನು ಪರಿಣಾಮಕಾರಿಯಾಗಿ ಎದುರಿಸುತ್ತವೆ, ಇದು ರೋಮಾಂಚಕ, ಹೊಳೆಯುವ ಚರ್ಮಕ್ಕಾಗಿ ನಿಮ್ಮ ಆಹಾರದಲ್ಲಿ ಕಡ್ಡಾಯವಾಗಿದೆ.

    ರಕ್ತದೊತ್ತಡದ ನಿಯಂತ್ರಿಸುತ್ತದೆ.

    ಅಧಿಕ ರಕ್ತದೊತ್ತಡವು ಹೃದಯ ಕಾಯಿಲೆ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸ್ಟ್ರಾಬೆರಿಗಳು ಪ್ರತಿ ಸೇವೆಗೆ ಸುಮಾರು 135 ಮಿಲಿಗ್ರಾಂಗಳಷ್ಟು ಪೊಟ್ಯಾಸಿಯಮ್ ಅಂಶದಿಂದಾಗಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪೊಟ್ಯಾಸಿಯಮ್ ಬಫರ್ ಆಗಿ ಕಾರ್ಯನಿರ್ವಹಿಸುತ್ತದೆ, ಸೋಡಿಯಂನ ಪ್ರತಿಕೂಲ ಪರಿಣಾಮಗಳನ್ನು ಎದುರಿಸುತ್ತದೆ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಸ್ಟ್ರಾಬೆರಿಗಳು ಹೃದಯಾಘಾತಕ್ಕೆ ಪೂರ್ವಗಾಮಿಯಾದ LDL ಉರಿಯೂತವನ್ನು ಕಡಿಮೆ ಮಾಡಬಹುದು

    ಮನಸ್ಥಿತಿಯನ್ನು, ಉತ್ತಮಗೊಳಿಸುತ್ತದೆ

    ಸ್ಟ್ರಾಬೆರಿಯಲ್ಲಿರುವ ಉತ್ಕರ್ಷಣ ನಿರೋಧಕಗಳು, ಫೋಲೇಟ್ ಮತ್ತು ವಿಟಮಿನ್ ಸಿ ಮನಸ್ಥಿತಿಯನ್ನು ಹೆಚ್ಚಿಸುವಲ್ಲಿ ಮತ್ತು ಒತ್ತಡವನ್ನು ಕಡಿಮೆ ಮಾಡುವಲ್ಲಿ ಪಾತ್ರವಹಿಸುತ್ತವೆ. ಫೋಲೇಟ್ ಸಿರೊಟೋನಿನ್ ಉತ್ಪಾದನೆಯನ್ನು ಬೆಂಬಲಿಸುತ್ತದೆ, ಇದು ಮನಸ್ಥಿತಿ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಸ್ಟ್ರಾಬೆರಿಗಳನ್ನು ಸೇರಿಸುವುದರಿಂದ ನಿಮ್ಮ ಚೈತನ್ಯವನ್ನು ನೈಸರ್ಗಿಕವಾಗಿ ಹೆಚ್ಚಿಸಬಹುದು.

    ಮೆದೂಳಿನ ಆರೋಗ್ಯವನ್ನು ಕಾಪಾಡುತ್ತದೆ.

    ಸ್ಟ್ರಾಬೆರಿಗಳು ಆಂಥೋಸಯಾನಿನ್‌ಗಳಂತಹ ಫ್ಲೇವನಾಯ್ಡ್‌ಗಳನ್ನು ಹೊಂದಿರುತ್ತವೆ, ಇದು ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ವಯಸ್ಸಿಗೆ ಸಂಬಂಧಿಸಿದ ಮಾನಸಿಕ ಕುಸಿತದ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಸಂಯುಕ್ತಗಳು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಎದುರಿಸುತ್ತವೆ, ಇವೆರಡೂ ಮೆದುಳಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.ಸ್ಟ್ರಾಬೆರಿಗಳನ್ನು ನಿಯಮಿತವಾಗಿ ತಿನ್ನುವುದರಿಂದ ಸ್ಮರಣಶಕ್ತಿ ಮತ್ತು ಒಟ್ಟಾರೆ ಮೆದುಳಿನ ಕಾರ್ಯಕ್ಷಮತೆ ಹೆಚ್ಚಾಗುತ್ತದೆ, ಇದು ಮೆದುಳಿಗೆ ಆರೋಗ್ಯಕರವಾದ ಸೂಪರ್‌ಫುಡ್ ಆಗಿರುತ್ತದೆ.

    ಸ್ಟ್ರಾಬೆರಿಗಳು ಕೇವಲ ರುಚಿಕರವಾದ ಹಣ್ಣಲ್ಲ; ಅವು ನಿಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಹೃದಯದ ಆರೋಗ್ಯದಿಂದ ಹಿಡಿದು ಕ್ಯಾನ್ಸರ್ ತಡೆಗಟ್ಟುವಿಕೆ, ದೃಷ್ಟಿ ಸುಧಾರಣೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವವರೆಗೆ, ಸ್ಟ್ರಾಬೆರಿಗಳು ನಿಮ್ಮ ಆಹಾರಕ್ರಮಕ್ಕೆ ಬಹುಮುಖ ಸೇರ್ಪಡೆಯಾಗಿದೆ. ನೀವು ಅವುಗಳನ್ನು ಸ್ಮೂಥಿಗಳು, ಸಲಾಡ್‌ಗಳು ಅಥವಾ ರುಚಿಕರವಾದ ತಿಂಡಿಯಾಗಿ ಆನಂದಿಸಿದರೂ, ಸ್ಟ್ರಾಬೆರಿಗಳನ್ನು ಸೇರಿಸುವುದರಿಂದ ಅವುಗಳ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದ್ದರಿಂದ, ಮುಂದಿನ ಬಾರಿ ನೀವು ಮಾರುಕಟ್ಟೆಗೆ ಭೇಟಿ ನೀಡಿದಾಗ, ಈ ಮಾಣಿಕ್ಯ-ಕೆಂಪು ರತ್ನಗಳ ಒಂದು ಪಿಂಟ್ ಅನ್ನು ತೆಗೆದುಕೊಳ್ಳಲು ಮರೆಯಬೇಡಿ!

    j