ಬಡವರ,ಬಾದಾಮಿ.🥜

ಶೇಂಗಾ[ಕಡಲೆಬೀಜ] ತನ್ನದೇ ಆದ ಮಹತ್ವವಾವನ್ನು , ಹೊಂದಿದೆ. ಬಡವರ ಬಾದಾಮಿ ಎಂದು ಕರೆಯಲಾಗುವ ಶೇಂಗಾ [ಕಡಲೆ ಬೀಜ] ಬಹುಉಪಕಾರಿಯಾಗಿದೆ.

ಆರೋಗ್ಯದ ವಿಚಾರ ಬಂದಾಗ ನಾವು ಹಲವು ರೀತಿಯಲ್ಲಿ ನಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತಂದುಕೊಳ್ಳಬೇಕಾಗುತ್ತದೆ ಜೊತೆಗೆ ಆಹಾರ ಪದ್ಧತಿಯಲ್ಲಿ ಕೂಡ ಹೊಸ ಹೊಸ ಬದಲಾ ವಣೆಗಳನ್ನು ನಾವಾಗಿಯೇ ಮಾಡಿಕೊಳ್ಳಬೇಕಾಗುತ್ತದೆ. ಸಾಧ್ಯವಾದಷ್ಟು ನಮ್ಮ ಪದ್ಧತಿ ನೈಸರ್ಗಿಕವಾಗಿದ್ದರೆ ಒಳ್ಳೆಯದು. ಏಕೆಂದರೆ ಅಂಶಗಳಿಂದ ಕೂಡಿದ ಯಾವುದೇ ಆಹಾರ ಪದಾರ್ಥಗಳು ನಮ್ಮ ದೇಹಕ್ಕೆ ಮತ್ತು ಆರೋಗ್ಯಕ್ಕೆ ಮಾರಕ. ನೆನೆಸಿದ ಕಡಲೆ ಬೀಜಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ ಎಂದು ಕೇಳಿದ್ದೇವೆ.

ನೆನೆಸಿದ ಶೇಂಗಾ, ಕಡಲೆಬೀಜ ಆರೋಗ್ಯಕ್ಕೆ. ಬಹುಪ್ರಯೋಜನಕರ!

ಹಸಿ ಕಡಲೆ ಬೀಜ ತಿನ್ನುವುದಕ್ಕೂ, ಹುರಿದ ಕಡಲೆಬೀಜ ತಿನ್ನುವುದಕ್ಕೂ, ಬೇಯಿಸಿದ ಕಡಲೆ ಬೀಜ ತಿನ್ನುವುದಕ್ಕೂ ಹಾಗೂ ನೆನೆಸಿದ ಕಡಲೆ ಬೀಜ ತಿನ್ನುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕಡಲೆ ಬೀಜಗಳನ್ನು ನೆನೆಸಿ ಏಕೆ ತಿನ್ನಬೇಕು ಎಂದು ಬನ್ನಿ, ತಿಳಿಯೋಣ!

ಆರೋಗ್ಯದ ವಿಚಾರ ಬಂದಾಗ ನಾವು ಹಲವು ರೀತಿಯಲ್ಲಿ ನಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತಂದುಕೊಳ್ಳಬೇಕಾಗುತ್ತದೆ ಜೊತೆಗೆ ಆಹಾರ ಪದ್ಧತಿಯಲ್ಲಿ ಕೂಡ ಹೊಸ ಹೊಸ ಬದಲಾ ವಣೆಗಳನ್ನು ನಾವಾಗಿಯೇ ಮಾಡಿಕೊಳ್ಳಬೇಕಾಗುತ್ತದೆ. ಸಾಧ್ಯವಾದಷ್ಟು ನಮ್ಮ ಪದ್ಧತಿ ನೈಸರ್ಗಿಕವಾಗಿದ್ದರೆ ಒಳ್ಳೆಯದು. ಕೆಂದರೆ ರಾಸಾಯನಿಕ ಅಂಶಗಳಿಂದ ಕೂಡಿದ ಯಾವುದೇ ಆಹಾರ ಪದಾರ್ಥಗಳು ನಮ್ಮ ದೇಹಕ್ಕೆ ಮತ್ತು ಆರೋಗ್ಯಕ್ಕೆ ಮಾರಕ. ನೆನೆಸಿದ ಕಡಲೆ ಬೀಜಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ ಎಂದು ಕೇಳಿದ್ದೇವೆ.ನಮ್ಮ ಹಿಂದಿನ ಕಾಲದ ಜನರು ಕೂಡ ಇದನ್ನು ಅನುಸರಿಸುತ್ತಾ ಬಂದಿದ್ದರು ಮತ್ತು ಅಷ್ಟೇ ಆರೋಗ್ಯವಾಗಿ ಕೂಡ ಇದ್ದರು. ಈಗ ಅವರ ಧಾಟಿಯಲ್ಲಿ ನಾವು ಹೋದರೆ ನಮಗೆ ಏನೆಲ್ಲಾ ಲಾಭಗಳು ಸಿಗುತ್ತವೆ .

ಕ್ಯಾನ್ಸರ್ ಬೆಳವಣಿಗೆಯ ಜೀವಕೋಶಗಳನ್ನು, ತಡೆಯುತ್ತದೆ.

•. ದೇಹದಲ್ಲಿ ಒಂದು ವೇಳೆ ಕ್ಯಾನ್ಸರ್ ಜೀವಕೋಶಗಳು ಅಭಿವೃದ್ಧಿ ಆಗುವ ಸಂಭವ ಇದ್ದರೆ, ಅದರ ಲಕ್ಷಣ ಗಳು ಮಾತ್ರ ನಿಮಗೆ ಆನಂತರದಲ್ಲಿ ಕಂಡುಬರುತ್ತದೆ. ಆರೋಗ್ಯಕರವಾದ ಜೀವಕೋಶಗಳು ಇದ್ದಕ್ಕಿದ್ದಂತೆ ಅನಿಯಮಿತವಾಗಿ ವಿಪರೀತ ಬೆಳವಣಿಗೆ ಹೊಂದಿ ನಿರ್ದಿಷ್ಟ ಭಾಗದಲ್ಲಿ ಕ್ಯಾನ್ಸರ್ ಸಮಸ್ಯೆಗೆ ಕಾರಣ ವಾಗುತ್ತದೆ.

•. ಆರೋಗ್ಯಕರ ಜೀವಕೋಶಗಳ ಜೊತೆಗೆ ಇನ್ನಿತರ ಜೀವಕೋಶಗಳು ಸಹ ತೊಂದರೆಗೆ ಒಳಗಾಗುತ್ತದೆ. ಇದು ಕೊನೆಗೆ ದೇಹದ ವಿವಿಧ ಅಂಗಾಂಗಗಳಿಗೆ ಹರಡಿ ಸಂಪೂರ್ಣ ದೇಹವನ್ನು ಆಹುತಿ ಪಡೆ ಯುತ್ತದೆ. ಹೀಗಾಗಿ ನೆನೆಸಿದ ಕಡಲೆ ಬೀಜಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಆಂಟಿಆಕ್ಸಿಡೆಂಟ್ ಅಂಶಗಳು, ಕಬ್ಬಿಣದ ಅಂಶ, ಕ್ಯಾಲ್ಸಿಯಂ ಮತ್ತು ಜಿಂಕ್ ಸಿಗುತ್ತದೆ

•. ನಿಮ್ಮ ದೇಹದಲ್ಲಿ ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ನಿಯಂತ್ರಣ ಮಾಡಲು ಇದು ಸಹಕಾರಿ. ಪ್ರತಿದಿನ ಒಂದು ಹಿಡಿ ನೆನೆಸಿದ ಕಡಲೆ ಬೀಜಗಳನ್ನು ತಿನ್ನುವುದರಿಂದ ನೀವು ಇದರಿಂದ ಪರಿಹಾರ ಕಂಡುಕೊಳ್ಳ ಬಹುದು

ರಕ್ತಸಂಚಾರ ಉತ್ತಮಗೊಳಿಸುತ್ತದೆ.

•. ಇದು ಆರೋಗ್ಯಕರವಾಗಿ ನಡೆಯಬೇಕಾದರೆ, ನೀವು ಬೆಳಗಿನ ಸಮಯದಲ್ಲಿ ಹಾಗೂ ಸಂಜೆಯ ಸಮಯ ದಲ್ಲಿ ನೆನೆಸಿದ ಕಡಲೆ ಬೀಜಗಳನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು.

•. ನಿಮ್ಮ ದೇಹದಲ್ಲಿ ರಕ್ತ ಹರಿಯುವಿಕೆ ಉತ್ತಮಗೊಂಡು ಆರೋಗ್ಯಕರವಾದ ಹೃದಯ ನಿಮ್ಮ ದಾಗುತ್ತದೆ. ನಿಮ್ಮ ಕೆಲವೊಂದು ಕೆಟ್ಟ ಅಭ್ಯಾಸಗಳು, ಕೆಟ್ಟ ಆಹಾರ ಪದ್ಧತಿ ಇತ್ಯಾದಿಗಳಿಂದ ಕೆಲವೊಮ್ಮೆ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ.

•. ನಿಮ್ಮ ಮೆದುಳು ಇದರಿಂದ ಚುರುಕಾಗುವುದು ಮಾತ್ರವಲ್ಲದೆ ನಿಮ್ಮ ದೇಹದಲ್ಲಿ ಉಷ್ಣಾಂಶ ಹೆಚ್ಚಾ ಗುತ್ತದೆ ಜೊತೆಗೆ ರಕ್ತ ಸಂಚಾರ ಉತ್ತಮವಾಗಿ ನಿಮ್ಮ ಹೃದಯ ಆರೋಗ್ಯಕರವಾಗಿ ಉಳಿಯುತ್ತದೆ. ಹೃದಯಾಘಾತ ಅಥವಾ ಇನ್ನಿತರ ಆರೋಗ್ಯ ಸಮಸ್ಯೆಗಳು ಕಂಡು ಬರಲು ಸಾಧ್ಯವಿಲ್ಲ.

ಗ್ಯಾಸ್ಟಿಕ್ ಮತ್ತು ಅಸಿಡಿಟಿ ದೂರವಾಗುತ್ತದೆ

ಕ್ರಮೇಣ ನೀವು ಜಾಸ್ತಿ ಹೊತ್ತು ಮನೆಯಲ್ಲಿದ್ದು, ಕಡಿಮೆ ಕ್ರಿಯಾಶೀಲರಾಗಿದ್ದರೆ, ನಿಮಗೆ ಹೊಟ್ಟೆ ಉಬ್ಬರ ಸಮಸ್ಯೆ ಕಾಣಿಸಿಕೊಳ್ಳಬಹುದು. ನಿಮ್ಮ ಕರುಳಿನ ಅಸ್ವಸ್ಥತೆಗೆ ಕೂಡ ಇದು ಕಾರಣವಾಗ ಬಹುದು. ಇದಕ್ಕೆ ಕಾರಣ ಪ್ರಮುಖವಾಗಿ ನಿಮ್ಮ ಹೊಟ್ಟೆಯ ಆಮ್ಲೀಯತೆ ಅಥವಾ ಗ್ಯಾಸ್ಟ್ರಿಕ್ ಎಂದು ಹೇಳಬಹುದು.

ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮಲಬದ್ಧತೆ ಸಮಸ್ಯೆ ಕೂಡ ಕಂಡು ಬರುತ್ತದೆ. ಗ್ಯಾಸ್ಟಿಕ್ ಮತ್ತು ಮಲಬದ್ಧತೆಯನ್ನು ಸರಿಯಾದ ಸಮಯಕ್ಕೆ ಪರಿಹಾರ ಮಾಡದೆ ಹೋದರೆ ಅದರಿಂದ ಹೊಟ್ಟೆ ಹಸಿವು ಕಡಿಮೆಯಾಗುತ್ತದೆ, ಎದೆನೋವು ಕಂಡು ಬರಬಹುದು ಜೊತೆಗೆ ಉಸಿರಾಟದ ತೊಂದರೆ ಕೂಡ ಎದುರಾಗುತ್ತದೆ.ಹೀಗಾಗಿ ಒಂದು ವೇಳೆ ನಿಮಗೂ ಕೂಡ ಇಂತಹ ಸಮಸ್ಯೆ ಇದ್ದರೆ, ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಕಡಲೆ ಬೀಜಗಳನ್ನು ಒಂದು ಹಿಡಿ ಪ್ರತಿದಿನ ತಿನ್ನಿ. ನಿಮಗೆ ಬೇಗ ಪರಿಹಾರ ಸಿಗುತ್ತದೆ.

ಫಿಟ್ ಆಗಿರಲು ಸಹಾಯಕಾರಿ.!

•. ಇತ್ತೀಚಿನ ದಿನಗಳಲ್ಲಿ. ದೇಹವನ್ನು ಸದೃಡವಾಗಿರಲು, ದುಬಾರಿಯ ಪ್ರೋಟೀನ್ [Protien ] ಪೂರೈಸುವುದು ಒಂದು ಕಷ್ಟಕರ ಸಂಗತಿ. ಆದರೆ ಶೇಂಗಾ [ಕಡಲೆಬೀಜ] ಒಂದು ಪ್ರೋಟೀನ್ ನ ಸಮೃದ್ಧ ಮೂಲವಾಗಿದೆ.

•. ನೀವು ಒಂದು ವೇಳೆ ದೈಹಿಕವಾಗಿ ಸದೃಢವಾಗಲು ವ್ಯಾಯಾಮ ಮಾಡುತ್ತಿದ್ದರೆ, ನಿಮ್ಮ ದೇಹದ ಮಾಂಸ ಖಂಡಗಳ ಪ್ರಮಾಣವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಳ್ಳುವುದು ಬಹಳ ಮುಖ್ಯ ವಾಗಿದೆ.

•. ಇದಕ್ಕಾಗಿ ಉತ್ತಮವಾದ ಆಹಾರ ಪದ್ಧತಿಯನ್ನು ಅನುಸರಿಸುವುದರ ಜೊತೆಗೆ ದೇಹದ ತೂಕ ನಿಯಂತ್ರಣ ಮಾಡುವ ಡಯಟ್ ಪದ್ಧತಿಯನ್ನು ಸಹ ಹೊಂದಬೇಕು. ಇದಕ್ಕೆ ನಿಮಗೆ ನೆನೆಸಿದ ಕಡಲೆ ಬೀಜಗಳು ಸಹಕಾರಿ. ಬೆಲ್ಲದ ಸಹಿತ ನೆನೆಸಿದ ಕಡಲೆ ಬೀಜಗಳನ್ನು ಸೇವನೆ ಮಾಡುವುದರಿಂದ ಕೀಲು ನೋವು ಹಾಗೂ ಮೈಕೈನೋವು ದೂರವಾಗುತ್ತದೆ. ನೀವು ನೋಡಲು ಕೂಡ ದುಂಡು ದುಂಡಾಗಿ ಕಾಣುತ್ತೀರಿ.

ನೆನೆಸಿದ ಶೇಂಗಾ[ ಕಡಲೆಬೀಜ ] ತಿನ್ನುವುದರಿಂದ, ಇನ್ನಿತರ ಉಪಯೋಗಗಳಿವೆ ಎಂದು ಹೇಳಲಾಗುತ್ತದೆ..

ಇತ್ತೀಚಿನ ದಿನಗಳಲ್ಲಿ ಆರೋಗ್ಯ ದ ಸಮಸ್ಯೆಗಳು.. ಹೆಚ್ಚಾಗಿ ಕಂಡುಬರುತ್ತದೆ.. ಆದ್ದರಿಂದ ತಿನ್ನುವ ಆಹಾರ ಪದ್ಧತಿಯಲ್ಲಿ, ಶುದ್ಧ ಆರೋಗ್ಯಕರ ಆಹಾರವನ್ನು ನಮ್ಮ ಊಟದಲ್ಲಿ ಸೇರಿಸಿ ಸೇವಿಸೋಣ !! ಆರೋಗ್ಯವು ನಮ್ಮ blog https //foodforhealth.blog/ ನ ಮುಖ್ಯ ಉದ್ದೇಶವಾಗಿದೆ….🙏

Comments

Leave a Reply

Your email address will not be published. Required fields are marked *