ಭೂಮಿಯ ಮೇಲಿನ ಸಂಜೀವಿನಿ…

ನೆಲ್ಲಿಕಾಯಿಯು , ಇವಗಿನ ಆರೋಗ್ಯ ಪದ್ಧತಿಯಲ್ಲಿ, ಒಂದು ಅದ್ಭುತ ಹಣ್ಣಾಗಿದೆ, ಇದು ಭಾರತಾದ್ಯಂತ ಹೇರಳವಾಗಿ ಮತ್ತು ಅರಣ್ಯ ಪ್ರದೇಶದಲ್ಲಿ ಕಂಡುಬರುತ್ತದೆ. ನೆಲ್ಲಿಯೂ, ಹಲವಾರು ಔಷಧೀಯ! ಗುಣಗಳನ್ನು ಹೊಂದಿದೆ. ಆದ್ದರಿಂದ ಆಯುರ್ವೇದದಲ್ಲಿ ನೆಲ್ಲಿಯನ್ನು ಅಗ್ರಸ್ಥಾನದಲ್ಲಿ ನೋಡಲಾಗುತ್ತದೆ . ಆಯುರ್ವೇದದಲ್ಲಿ ನೆಲ್ಲಿಕಾಯಿಯನ್ನು [ಅಮೃತ ಫಲ] ಎಂದು ಕರೆಯುತ್ತಾರೆ. ಹೀಗೆ ನೆಲ್ಲಿಕಾಯಿಯನ್ನು ಬಹುಪಯೋಗಿಯಾಗಿದೆ.

ನೆಲ್ಲಿಯ, ಉಪಯೋಗಗಳು:–

ನೆಲ್ಲಿಕಾಯಿಯ ರಸವನ್ನು ಅರಶಿನದೊಂದಿಗೆ ದಿನನಿತ್ಯವು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಹಾಗೆಯೇ ಸಕ್ಕರೆ ಖಾಯಿಲೆಯಲ್ಲಿ ನೆಲ್ಲಿಕಾಯಿಯ ಚೂರ್ಣವನ್ನು ಖಾಲಿ ಹೊಟ್ಟೆಯಲ್ಲಿ ನೀಡುತ್ತಾರೆ. ಇದರ ರಸವನ್ನು ತುಪ್ಪದೊಂದಿಗೆ ಬೆರೆಸಿ ಜ್ವರವನ್ನು ಕಡಿಮೆ ಮಾಡಲು ಕೊಡುತ್ತಾರೆ. ರಕ್ತಹೀನತೆಯಲ್ಲಿ ಇದರ ಚೂರ್ಣವನ್ನು ಜೇನುತುಪ್ಪದೊಂದಿಗೆ ಸೇವಿಸಬಹುದು. ಕಾಮಾಲೆಯಲ್ಲಿ ಇದರ ರಸವನ್ನು ದ್ರಾಕ್ಷಿಯೊಂದಿಗೆ ನೀಡುತ್ತಾರೆ. ರಕ್ತಸ್ರಾವದಲ್ಲಿ ಇದರ ಚೂರ್ಣವನ್ನು ಸಕ್ಕರೆ ಹಾಗೂ ಜೇನುತುಪ್ಪದೊಂದಿಗೆ ನೀಡಬಹುದು. ಕೂದಲು ಹಾಗೂ ಕಣ್ಣಿನ ಆರೈಕೆಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೆಟ್ಟದ ನಲ್ಲಿಕಾಯಿ ವಿಟಮಿನ್ ಸಿ ಪ್ರಮಾಣವು ಅತ್ಯಧಿಕವಾಗಿದೆ. ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣ, ಕ್ಯಾರೋಟಿನ್, ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ‌ನಂತಹ ಅನೇಕ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿದೆ. ನೆಲ್ಲಿಕಾಯಿಯಲ್ಲಿ ರೋಗ ನಿರೋಧಕ ಶಕ್ತಿ ಇರುವ ಕಾರಣ ಇದನ್ನು ಆಯುರ್ವೇದ ಚಿಕಿತ್ಸೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಕೂದಲು, ಮತ್ತು ಚರ್ಮದ ರಕ್ಷಣೆ:–

ಕೂದಲಿನ ಕಿರುಚೀಲಗಳಲ್ಲಿ ಮೆಲನೊಸೈಟ್ ಗಳಿಂದ ಉತ್ಪತ್ತಿಯಾಗುವ ವರ್ಣದ್ರವ್ಯವಾದ ಮೆಲನಿನ್ ಕೂದಲಿನ ಬಣ್ಣವನ್ನು ನಿರ್ಧರಿಸುತ್ತದೆ. ವಯಸ್ಸಾಗುತ್ತಾ ಸಾಗಿದಂತೆ ಮೆಲನಿನ್ ಅಂಶವು ಕುಸಿಯುವುದು. ಹಾಗೆಯೇ ಚರ್ಮದ ಕಾಂತಿ ಕಳೆದುಕೊಳ್ಳುವಿಕೆಗೆ’ಮುಖ್ಯ ಕಾರಣವಾದ ಕಾಜಲಿನ್ ಉತ್ಪಾದನೆಯ ಕೊರತೆಯನ್ನು, ತಡಗಟ್ಟಿ ಕಾಜಲಿನ್ ನ, ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ಯ ಅಂಶವು ಕೂದಲು ಮತ್ತು ಚರ್ಮದ ಕಾಂತಿಯನ್ನು, ಸುಧಾರಿಸುತ್ತದೆ ನೆಲ್ಲಿಕಾಯಿಯಲ್ಲಿ ಇರುವ ವಿಟಮಿನ್ ಮತ್ತು ಖನಿಜಾಂಶಗಳು ಕೂದಲಿಗೆ ಆಗುವ ಹಾನಿ ತಪ್ಪಿಸುವುದು ಮತ್ತು ಇನ್ನಷ್ಟು ಹಾನಿ ಆಗುವುದನ್ನು ತಪ್ಪಿಸುವುದು. ಇದರಿಂದ ಕೂದಲಿನ ಆರೋಗ್ಯವೂ ಸರಿಯಾಗಿರುವುದು ಮತ್ತು ಕೂದಲು ತುಂಬಾ ಕಾಂತಿ ಮತ್ತು ಯೌವನಯುತವಾಗಿರುವುದು.

ನಲ್ಲಿಯೂ ,ಮಧುಮೇಹವನ್ನು ನೈಸರ್ಗಿಕವಾಗಿ ನಿಯಂತ್ರಿಸುತ್ತದೆ:– ಹೇಳಿದಂತೆ ವಿಟಮಿನ್ ‘ ಸಿ ‘ ಮತ್ತು ಇನ್ನಿತರ ಪೋಷಕಾಂಶಗಳು ಯಥೇಚ್ಛವಾಗಿದ್ದು, ಇವುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕರುಳಿನ ಸೂಕ್ಷ್ಮಜೀವಿಗಳನ್ನು ಬಲಪಡಿಸುತ್ತವೆ. ನೆಲ್ಲಿಕಾಯಿ ಹೆಚ್ಚಿನ ಮಧುಮೇಹ ಹೊಂದಿರುವವರಿಗೆ ಅವರು ದೇಹದಲ್ಲಿನ ಸಕ್ಕರೆ ಅಂಶದ ಮಟ್ಟವನ್ನು ಸಮತೋಲನ ಗೊಳಿಸಿ ಇನ್ಸುಲಿನ್ ಪ್ರತಿರೋಧಕ್ಕೆ ಸಹಾಯ ಮಾಡುತ್ತದೆ.

ನೆಲ್ಲಿಕಾಯಿ ಇಂದು ನೆನ್ನೆಯ ಆಹಾರ ಪದಾರ್ಥವಲ್ಲ. ಬಹಳ ಹಿಂದಿನ ಕಾಲದಿಂದಲೂ ಇದರ ಆರೋಗ್ಯ ಸಹಕಾರಿ ಪ್ರಯೋಜನಗಳು ಮನೆ ಮಾತಾಗಿವೆ. ಊಟವಾದ ತಕ್ಷಣ ಇದ್ದಕ್ಕಿದ್ದಂತೆ ದೇಹದಲ್ಲಿ ಸಕ್ಕರೆಯ ಪ್ರಮಾಣ ಏರಿಕೆಯಾಗುವುದನ್ನು ತಕ್ಷಣವೇ ತಡೆಯುವಂತಹ ಶಕ್ತಿ ನೆಲ್ಲಿಕಾಯಿಗೆ ಇದೆ.ಕೇವಲ ಮಧುಮೇಹಕ್ಕೆ ಮಾತ್ರವಲ್ಲದೆ ಅನೇಕ ರೀತಿಯ ಚರ್ಮದ ಮತ್ತು ಕೂದಲಿನ ಸಮಸ್ಯೆ ಗಳಿಗೂ ಆರೋಗ್ಯ ತಜ್ಞರು ಭಾರತೀಯ ನೆಲ್ಲಿಕಾಯಿಯ ಸಹಾಯ ಪಡೆಯುವಂತೆ ಸೂಚನೆ ನೀಡಿರುತ್ತಾರೆ. ಮೇಲೆ ತಿಳಿಸಿದಂತೆ ಮನುಷ್ಯನ ದೇಹಕ್ಕೆ ಎದುರಾಗುವ ಅನೇಕ ರೀತಿಯ ಸಮಸ್ಯೆ ಗಳಿಗೆ ಭಾರತೀಯ ನೆಲ್ಲಿಕಾಯಿಯನ್ನು ಹಾಗೆ ಬೇಕಾದರೂ ತಿನ್ನಬಹುದು ಅಥವಾ ನೆಲ್ಲಿಕಾಯಿಯ ಮೊರಬ್ಬ ಮಾಡಿಕೊಂಡು ಬೇಕಾದರೂ ಅನೇಕ ದಿನಗಳ ಕಾಲ ಶೇಖರಿಸಿಟ್ಟು ಕೊಂಡು ಬೇಕಾದರೂ ತಿನ್ನಬಹುದು.ಮೇದೋಜ್ಜೀರಕ ಗ್ರಂಥಿಯ ಅಂದರೆ ಪ್ಯಾಂಕ್ರಿಯಾಸ್ ನ ಉರಿಯೂತವನ್ನು ತಡೆಗಟ್ಟಲು ನೆಲ್ಲಿಕಾಯಿ ಬಹಳ ಪರಿಣಾಮಕಾರಿ ಯಾದ ಸಾಂಪ್ರದಾಯಿಕ ಔಷಧಿಯಾಗಿದೆ. ಏಕೆಂದರೆ ಪ್ಯಾಂಕ್ರಿಯಾಸ್ ನಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಅಂಶ, ರಕ್ತದಲ್ಲಿನ ಸಕ್ಕರೆ ಅಂಶದ ಮಟ್ಟವನ್ನು ನಿಯಂತ್ರಣಕ್ಕೆ ತರುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.ಹೀಗಿದ್ದರೂ ಕೆಲವೊಮ್ಮೆ, ಮೇದೋಜ್ಜೀರಕ ಗ್ರಂಥಿಯು ಅಥವಾ ಪ್ಯಾಂಕ್ರಿಯಾಸ್ ಗ್ರಂಥಿ ಉರಿಯೂತಕ್ಕೆ ಒಳಗಾದಾಗ, ಇನ್ಸುಲಿನ್ ಸ್ರವಿಸುವ ಕೋಶಗಳನ್ನು ಗಾಯಗೊಳಿಸುತ್ತದೆ. ಇದರಿಂದ ದೇಹಕ್ಕೆ ಬೇಕಾದ ಸರಿಯಾದ ಪ್ರಮಾಣದ ಇನ್ಸುಲಿನ್ ಬಿಡುಗಡೆಯಾಗುವುದಿಲ್ಲ. ಇದ್ದಕ್ಕಿದ್ದಂತೆ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತಾ ಹೋಗುತ್ತದೆ.ಪ್ಯಾಂಕ್ರಿಯಾಟೈಟಿಸ್ ನಿಂದ ಬಳಲುತ್ತಿರುವವರಿಗೆ ಈ ರೀತಿಯಲ್ಲಿ ಭಾರತೀಯ ನೆಲ್ಲಿಕಾಯಿ ಅಥವಾ ಬೆಟ್ಟದ ನೆಲ್ಲಿಕಾಯಿ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ. ನೆಲ್ಲಿಕಾಯಿಯಲ್ಲಿ ಕ್ರೋಮಿಯಂ ಎಂಬ ಖನಿಜ ಇದ್ದು, ಇದು ಕಾರ್ಬೋಹೈಡ್ರೇಟ್ ಮೆಟಬಾಲಿಸಂ ಅನ್ನು ನಿಯಂತ್ರಣ ಮಾಡಿ ಮನುಷ್ಯನ ದೇಹ ಇನ್ಸುಲಿನ್ ಗೆ ಹೆಚ್ಚು ಸ್ಪಂದಿಸುವಂತೆ ಅನುವು ಮಾಡಿ ಕೊಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಅಂಶದ ಮಟ್ಟವನ್ನು ಏರಿಕೆಯಾಗದಂತೆ ನಿಯಂತ್ರಣ ಮಾಡುತ್ತದೆ.ಇನ್ನು ನೆಲ್ಲಿಕಾಯಿಯಲ್ಲಿ ಇರುವ [ವಿಟಮಿನ್ ‘ ಸಿ ‘ ]ಅಂಶಗಳಿಗೂ ಮತ್ತು ಮಧುಮೇಹಕ್ಕೂ ಮಹತ್ತರ ಸಂಬಂಧವಿದೆ. ” ಅಚೀವ್ಸ್ ಆಫ್ ಇಂಟರ್ನಲ್ ಮೆಡಿಸಿನ್ ” ನಲ್ಲಿ ಪ್ರಕಟವಾದ ಒಂದು ಅಧ್ಯಯನದಲ್ಲಿ ವಿಟಮಿನ್ ‘ ಸಿ ‘ ಎಂಬ (ಆಂಟಿ – ಆಕ್ಸಿಡೆಂಟ್ಅಂಶಕ್ಕೂ ಮತ್ತು ಮಧುಮೇಹಕ್ಕೂ ಇರುವ ಸಂಬಂಧ ಬಯಲಾಗಿದೆ.

ಹೀಗೆ ನಲ್ಲಿಯೂ ವಿಟಮಿನ್ ಸಿ ಯ ಅದ್ಭುತ ಅಂಶವಾಗಿದೆ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಔಷಧಿಯ ಗುಣಗಳನ್ನು ಹೊಂದಿದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಇದರ ಎಲ್ಲಾ ಲಾಭಗಳನ್ನು ಪಡೆಯಬಹುದಾಗಿದೆ.

Comments

Leave a Reply

Your email address will not be published. Required fields are marked *