ರೋಗಗಳ, ನಿವಾರಣೆ ಉತ್ತರಾಣಿ,!

ಉತ್ತರಣೆ, ಗಿಡವು ಮಳೆಗಾಲದ ಸಮಯದಲ್ಲಿ, ಹೆಚ್ಚಾಗಿ ಬೆಳೆಯುವ ಸಸ್ಯ. ಇದನ್ನು,ಆಯುರ್ವೇದದಲ್ಲಿ, ಪ್ರಬಲ ಸಸ್ಯವಾಗಿ ನೋಡುತ್ತಾರೆ.

ಸಮಶೀತೋಷ್ಣ ಮತ್ತು ಉಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತದೆ. ರಸ್ತೆಯಂಚಿನಲ್ಲಿ ಖಾಲಿ ನಿವೇಶನಗಳ ಅಂಚಿನಲ್ಲಿ ಹೊಲಗದ್ದೆಗಳ ಬದುವಿನಲ್ಲಿ ಎತ್ತರಕ್ಕೆ ಇವು ಬೆಳೆಯುತ್ತವೆ. ಹೆಚ್ಚುಕಡಿಮೆ ಎಲ್ಲಾ ಪ್ರದೇಶಗಳಲ್ಲೂ, ಬಯಲಿನಲ್ಲಿ ಹುಲುಸಾಗಿ ಬೆಳೆಯುತ್ತದೆ.

ಉತ್ತರಾಣಿ ಹಲವು ರೋಗಗಳಿಗೆ, ರಾಮಬಾಣ

  • ಉತ್ತರಾಣಿ ಎಲೆಯ ಕಷಾಯ, ಇಲ್ಲವೇ ರಸಸೇವನೆಯಿಂದ ಮೂತ್ರವಿಸರ್ಜನೆಯ ಕ್ಲೇಶವಿರುವುದಿಲ್ಲ. ಭೇದಿಯಾಗುವ ಸಂದರ್ಭದಲ್ಲಿ ಈ ಎಲೆಯ ರಸವನ್ನು ಮೊಸರಿಗೆ ಬೆರೆಸಿಕೊಂಡು ಸೇವಿಸಿದರೆ,ತಕ್ಷಣ ಭೇದಿ ನಿಲ್ಲುತ್ತದೆ
  • ಉತ್ತರಾಣಿ ರಸ, ಮೂಲವ್ಯಾಧಿ, ಹೊಟ್ಟೆ ನೋವು, ಸುಟ್ಟ ಗಾಯಗಳಿಗೆ ಹಾಗೂ ಚರ್ಮವ್ಯಾಧಿಗಳಿಗೆ ದಿವ್ಯೌಷಧ.
  • ಉತ್ತರಾಣಿ ಬೇರನ್ನು ಕುಟ್ಟಿ ರಸತೆಗೆದು, ನೀರಿನಲ್ಲಿ ಕುದಿಸಿ ಕುಡಿದರೆ, ನಿದ್ರಾಹೀನತೆ ದೂರವಾಗುತ್ತದೆ.
  • ಒಣಗಿದ ಉತ್ತರಾಣಿ ಕಡ್ಡಿಯ ಕಾಂಡವನ್ನು ಸುಟ್ಟು ಭಸ್ಮಮಾಡಿ, ಅದಕ್ಕೆ ಕಾಳುಮೆಣಸಿನ ಪುಡಿ, ಜೇನುತುಪ್ಪಕ್ಕೆ ೩-೪ ಚಿಟಿಕೆಹಾಕಿಕೊಂಡು ಸೇವಿಸಿದರೆ,ನೆಗಡಿ ಕೆಮ್ಮು,ರಕ್ತಹೀನತೆ, ಅಸ್ತಮಾ, ಹೃದಯ ಸಂಬಂಧೀ ಕಾಯಿಲೆಗಳಿಗೆ ಉಪಯೋಗಕಾರಿಯಾಗುತ್ತದೆ.
  • ಚೇಳು, ಜೇನುಹುಳ,ಮತ್ತಿತರ ಕೀಟಗಳುಕಡಿದಾಗ ಉತ್ತರಾಣಿ ಎಲೆಯನ್ನು ಚೆನ್ನಾಗಿ ಅರೆದು ಲೇಪವನ್ನು ಗಾಯದಮೆಲೆ ಹಚ್ಚಿದರೆ ಉಪಶಮನವಾಗುತ್ತದೆ
  • ಬೆಲ್ಲಕ್ಕೆ ಒಂದು ಚಮಚೆ ಉತ್ತರಾಣಿ ರಸವನ್ನು ಸೇರಿಸಿ ಬೆಳಿಗ್ಯೆ ಎದ್ದಕೂಡಲೇ ಖಾಲಿಹೊಟ್ಟೆಗೆ ಸೇವಿಸುವುದರಿಂದ ರಕ್ತಹೀನತೆಗೆ ಒಳ್ಳೆಯ ಉಪಕಾರಿಯಾಗುತ್ತದೆ.
  • ಉತ್ತರಾಣಿಯ ಭಸ್ಮ, ಕ್ಷಾರದ ಗುಣವನ್ನು ಹೊಂದಿರುವುದರಿಂದ ಬಟ್ಟೆ ತೊಳೆಯಲು ಮಾರ್ಜಕವಾಗಿಯೂ ಬಳಸಬಹುದಾಗಿದೆ
  • ಉತ್ತರ ಕರ್ನಾಟಕದಲ್ಲಿ, ದೀಪಾವಳಿ ಹಬ್ಬದ ಸಮಯದಲ್ಲಿ ಸಗಣಿ-ಸುಣ್ಣ-ಕೆಮ್ಮಣ್ಣಿನಲ್ಲಿ ಪಾಂಡವ-ಕೌರವರನ್ನು ಮಾಡಿ, ಅದಕ್ಕೆ ಉತ್ತರಾಣಿ ಕಡ್ಡಿಗಳನ್ನು ಸಿಕ್ಕಿಸಿ ಮನೆಯ ಮುಂಬಾಗಿಲಿನಲ್ಲಿ ಇಡಲಾಗುತ್ತದೆ.

ಗರ್ಭಿಣಿ, ಹೆಂಗಸರಿಗೆ. ಸೂಕ್ತವಲ್ಲ, “ಉತ್ತರಾಣಿ “!

ಗರ್ಭಿಣಿ ಮಹಿಳೆಯರು ಆರೋಗ್ಯ ದ ವಿಚಾರದಲ್ಲಿ, ಬಹಳ ಜಾಗರೂಕವಾಗಿರಬೇಕು. ಇದರಲ್ಲಿನ ಕೆಲವು ಅಂಶಗಳು, ಗರ್ಭಪಾತಕ್ಕೆ, ಕಾರಣವಾಗುತ್ತದೆ ಅದರಿಂದ ಇದರ ಸೇವನೆಯು ಗರ್ಭಿಣಿ ಮಹಿಳೆಯರಿಗೆ ಸೂಕ್ತವಲ್ಲ.

ಇದರ ಎಲೆ, ಬೇರು, ಕಾಂಡ ಮತ್ತು ಬೀಜಗಳು ಉರಿಯೂತ ನಿವಾರಕ, ಕಫನಿವಾರಕ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿವೆ. ಮುಖ್ಯವಾಗಿ [ಹಲ್ಲುನೋವು,][ಕೀಟಗಳ ಕಡಿತ,] [ಚರ್ಮರೋಗ,] [ಭೇದಿ,]ಮೂಲವ್ಯಾಧಿ ಮತ್ತು ಉಸಿರಾಟದ ಸಮಸ್ಯೆಗಳಿಗೆ ಇದು ದಿವ್ಯೌಷಧವಾಗಿದೆ.

ಯಾವುದೇ ಗಂಭೀರ ಸಮಸ್ಯೆಗಳಿಗೆ ಬಳಸುವ ಮುನ್ನ ,ಆಯುರ್ವೇದ, ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ,.

Comments

Leave a Reply

Your email address will not be published. Required fields are marked *